grand welcome for the retired soldier
ಭಟ್ಕಳ : ೧೫ ವರ್ಷಗಳ ಕಾಲ ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿ ತವರಿಗೆ ಆಗಮಿಸಿದ
ನಿವೃತ್ತ ಯೋಧ ನಾಗರಾಜ ವೆಂಕ್ಟಯ್ಯ‌ ದೇವಡಿಗ ಅವರಿಗೆ ಭಟ್ಕಳದ ವಿವಿಧ ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಶಂಸುದ್ದಿನ್ ಸರ್ಕಲ್ ನಲ್ಲಿ ಅದ್ದೂರಿಯಾಗಿ ಸ್ವಾಗತ (grand welcome) ಕೋರಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಬಳಿಕ ಮಾತನಾಡಿದ ನಿವೃತ್ತ ಯೋಧ ನಾಗರಾಜ ವೆಂಕ್ಟಯ್ಯ‌ ದೇವಡಿಗ, ಓರ್ವ ನಿವೃತ್ತ ಮಾಜಿ ಸೈನಿಕನನ್ನು ಈ ರೀತಿಯಾಗಿ ಸ್ವಾಗತ ಕೋರಿರುವುದು ತುಂಬಾ ಸಂತೋಷ ತಂದಿದೆ. ಇಂತಹ ಸ್ವಾಗತ ಮುಂದಿನ ಯುವ ಪೀಳಿಗೆಗೆ ದೇಶ ಸೇವೆಗೆ ಹೋಗಲು ಹುರಿದುಂಬಿಸುವಂತಾಗುತ್ತದೆ ಎಂದರು.

ಇದನ್ನೂ ಓದಿ : ಉ.ಕ. ಜಿಲ್ಲೆಯಲ್ಲಿ 200 ಕೋಟಿ ರೂ.ಗೂ ಅಧಿಕ ಉಚಿತ ವಿದ್ಯುತ್

ಮಾಜಿ ಸೈನಿಕ ಶ್ರೀಕಾಂತ ನಾಯ್ಕ ಮಾತನಾಡಿ, ನಾಗರಾಜ ವೆಂಕ್ಟಯ್ಯ‌ ದೇವಡಿಗ ಅವರು ೨೦೦೮ರಲ್ಲಿ ಜುಲೈ ತಿಂಗಳಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದ್ದರು. ಮೊದಲು ಬೇಸಿಕ್ ತರಬೇತಿಯನ್ನು ಓಡಿಸಾದ ಚಿಲ್ಕಾದಲ್ಲಿ ಮುಗಿಸಿದ್ದಾರೆ. ನಂತರ ವೃತ್ತಿಪರ ತರಬೇತಿಯನ್ನು ಕೊಚ್ಚಿಯಲ್ಲಿ ಪಡೆದಿದ್ದಾರೆ. ದೇಶದ ವಿವಿಧ ಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಐ.ಎನ್.ಎಸ್.ನಲ್ಲಿ ಅವರ ಹೆಚ್ಚಿನ ಸಮಯವನ್ನು ಕಳೆದಿದ್ದಾರೆ. ಅದರೊಂದಿಗೆ ವಿವಿಧ ದೇಶಗಲ್ಲಿ ಯುದ್ಧದ ತರಬೇತಿಯನ್ನು ದೇಶಕ್ಕಾಗಿ ದುಡಿದಿದ್ದಾರೆ. ಅದೇ ರೀತಿ ನಮ್ಮ ದೇಶದ ರಕ್ಷಣೆಗಾಗಿ ತಮ್ಮ ಯೌವನದ ೧೫ ವರ್ಷವನ್ನು ಮುಡಿಪಾಗಿಟ್ಟಿದ್ದರು ಎಂದರು.

ಇದನ್ನೂ ಓದಿ :  ಆಗಸ್ಟ್‌ ೬ರಂದು ವಿವಿಧೆಡೆ ಅಡಿಕೆ ಧಾರಣೆ

ಬಿಜೆಪಿ ಮಾಜಿ ಅಧ್ಯಕ್ಷ ಸುಬ್ರಾಯ ದೇವಾಡಿಗ, ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮಿ ನಾರಾಯಣ ನಾಯ್ಕ, ಹಿರಿಯ ನಿವೃತ್ತ ಸೈನಿಕ ಎಂ.ಡಿ ಪಕ್ಕಿ, ದೇವಾಡಿಗ ಸಮಾಜದ ಅಧ್ಯಕ್ಷ ಲಕ್ಷ್ಮಣ ಕೋಟದಮಕ್ಕಿ ಸೇರಿದಂತೆ ವಿವಿಧ ಸಮಾಜದ ಮುಖಂಡರು ನಿವೃತ್ತ ಸೈನಿಕನನ್ನುದ್ದೇಶಿಸಿ ಮಾತನಾಡಿದರು.

ಇದನ್ನೂ ಓದಿ : ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾತ್ರಿ ಲ್ಯಾಂಡಿಂಗ್ ಕೆಲಸ ಪುನಾರಂಭಕ್ಕೆ ಒಪ್ಪಿಗೆ

ಇದಕ್ಕೂ ಪೂರ್ವದಲ್ಲಿ ಭಟ್ಕಳ ಶಂಶುದ್ದಿನ್ ಸರ್ಕಲ್ ಗೆ ಆಗಮಿಸಿದ ನಿವೃತ್ತ ಯೋಧನ್ನು ಹೂವಿನ ಹಾರ ಹಾಕಿ ಗುಲಾಬಿ ಹೂ ನೀಡಿ ವಿವಿಧ ಸಂಘ ಸಂಸ್ಥೆ, ಬಿಜೆಪಿ ಮಂಡಲ ಹಾಗೂ ಸಾರ್ವಜನಿಕರು ಸನ್ಮಾನಿಸಿ ಗೌರವಿಸಿದರು(grand welcome). ಬಳಿಕ ಹೆಬಳೆ ಗ್ರಾಮದ ಯುವಕರು ಹಾಗೂ ಗ್ರಾಮಸ್ಥರು ನಿವೃತ್ತ ಯೋಧರನ್ನು ಭಟ್ಕಳ ಶಂಶುದ್ದೀನ್ ಸರ್ಕಲ್ ನಿಂದ ತೆರೆದ ಜೀಪ್ ನಲ್ಲಿ ಹತ್ತಿಸಿ, ಬೈಕ್ ಮೆರವಣಿಗೆ ಮೂಲಕ ಅವರ ಹೆಬಳೆ ಗ್ರಾಮಕ್ಕೆ ಕರೆದುಕೊಂಡು ಹೋದರು.