ಭಟ್ಕಳ (Bhatkal): ಖಚಿತ ಮಾಹಿತಿ ಮೇರೆಗೆ ಅಕ್ರಮವಾಗಿ ಕಾರಿನಲ್ಲಿ ೯.೧೭೦ ಕೆಜಿ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ತೆಂಗಿನಗುಂಡಿ ಕ್ರಾಸ್ ಸಮೀಪ ಭಟ್ಕಳ ನಗರ ಠಾಣೆಯ ಪೊಲೀಸರು ಭರ್ಜರಿ ಭೇಟೆಯಾಡುವಲ್ಲಿ ಯಶಸ್ವಿಯಾಗಿದ್ದಾರೆ (great operation). ಓರ್ವ ಅರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸೆಂಟ್ರಲ್ ಲಾಡ್ಜ್ ಹಿಂಬಾಗದ ಸೈಯ್ಯದ ಅಕ್ರಮ್ ಮಹ್ಮಮದ ಹುಸೇನ್ (೨೪), ಗುಳ್ಮಿಯ ಅಬ್ದುಲ್ ರೆಹಮಾನ್ ಸಲಿಂ ಶಾಬ್ ಶೇಖ್(೨೭), ಕಾರು ಚಾಲಕ ಶಿರಸಿಯ ಅಜರುದ್ದೀನ್ ಮೆಹಬೂಬ್ ಶಾಬ್ ಬಂಧಿತ ಆರೋಪಿಗಳಾಗಿದ್ದಾರೆ. ನಾಪತ್ತೆಯಾದ ಆರೋಪಿಯನ್ನು ಉಸ್ಮಾನ್ ನಗರದ ಎರಡನೇ ಕ್ರಾಸ್ ನಿವಾಸಿ ಖಾಸಿಂ ಅಬುಮಹ್ಮಮದ್ ಎಂದು ಗುರುತಿಸಲಾಗಿದೆ.

ವಿಡಿಯೋ ಸಹಿತ ಇದನ್ನೂ ಓದಿ : ತರಕಾರಿಗೆ ಉಗುಳಿದ ವ್ಯಾಪಾರಿ ಬಂಧನ

ಇವರು ಒರಿಸ್ಸಾ (Orissa) ಮೂಲದಿಂದ ಹೊನ್ನಾವರ (Honavar) ಕಡೆಯಿಂದ ಭಟ್ಕಳಕ್ಕೆ (Bhatkal) ಹುಂಡೈ  (Hundai) ಕಂಪನಿಯ ಕಾರಿನ ಮೂಲಕ ಗಾಂಜಾ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆದಿತ್ತು. ಭಟ್ಕಳ ನಗರ ಠಾಣೆಯ ಎಸ್.ಐ. ನವೀನ ಎಸ್ ನಾಯ್ಕ ತಂಡದೊಂದಿಗೆ ತೆಂಗಿನಗುಂಡಿ ಕ್ರಾಸ್ ಸಮೀಪ ಕಾರು ತಡೆದಿದ್ದಾರೆ. ೪ ಲಕ್ಷ ೫೦ ಸಾವಿರ ರೂ. ಮೌಲ್ಯದ ೯ ಕೆಜಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಹುಂಡೈ ಕಂಪನಿಯ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ (great operation).

ಇದನ್ನೂ ಓದಿ : ಅಪರಿಚಿತಗೆ ಎಟಿಎಂ ಕಾರ್ಡ್‌ ಕೊಟ್ಟು ಮೋಸ ಹೋದರು !

ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಎಂ.ನಾರಾಯಣ ಹಾಗೂ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಟಿ. ಜಯಕುಮಾರ ಮತ್ತು ಜಗದೀಶ ಎಂ ಮಾರ್ಗದರ್ಶನದಲ್ಲಿ ಭಟ್ಕಳ ಡಿವೈಎಸ್ಪಿ ಮಹೇಶ ಎಂ.ಕೆ. ಮತ್ತು ಶಹರ ಠಾಣೆಯ ಪೊಲೀಸ್ ನಿರೀಕ್ಷಕ ಗೋಪಿಕೃಷ್ಣ ಕೆ.ಆ‌ರ್. ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿತ್ತು. ಭಟ್ಕಳ ಶಹರ ಪೊಲೀಸ್ ಠಾಣೆಯ ಎ.ಎಸ್.ಐ. ಗೋಪಾಲ ನಾಯ್ಕ, ಸಿಬ್ಬಂದಿ ಉದಯ ನಾಯ್ಕ, ಗಿರೀಶ ಅಂಕೋಲೆಕರ್, ಮಹಾಂತೇಶ ಹಿರೇಮಠ, ಕಾಶಿನಾಥ ಗೊಟಗುಣಸಿ, ಮಹಾಂತೇಶ ಪೆಮಾರ್, ದೀಪಕ ನಾಯ್ಕ, ಮದಾರಸಾಬ ಚಿಕ್ಕೇರಿ, ಕಿರಣ ಪಾಟೀಲ ಹಾಗೂ ಚಾಲಕ ಜಗದೀಶ ನಾಯ್ಕ ಕಾರ್ಯಾಚರಣೆಯಲ್ಲಿ ಇದ್ದರು.

ಇದನ್ನೂ ಓದಿ : ಸಾರಿಗೆ ಬಸ್‌ ಡಿಕ್ಕಿ ಹೊಡೆದು ಪಾದಚಾರಿ ಸ್ಥಳದಲ್ಲೇ ಸಾವು

ಈ ಬಗ್ಗೆ ಭಟ್ಕಳ ನಗರ ಠಾಣೆಯಲ್ಲಿ ಪಿ.ಎಸ್.ಐ ನವೀನ ನಾಯ್ಕ ಪ್ರಕರಣ (complaint) ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ (case registered) ಪಿ.ಎಸ್.ಐ. ಶಿವಾನಂದ ನಾವಂದಗಿ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ :  ಬಿಜೆಪಿ ಮುಖಂಡ ಕೃಷ್ಣ ನಾಯ್ಕ ವಿರುದ್ಧ ದೂರು