ಭಟ್ಕಳ (Bhatkal) : ಗೌಡ ಸಾರಸ್ವತ ಬ್ರಾಹ್ಮಣ (GSB) ಸಮಾಜ ಕಲ್ಯಾಣ ಸೇವಾ ಸಮಿತಿಯ ೨೭ನೇ ವಾರ್ಷಿಕೋತ್ಸವವು ಜ.೧೯ರಂದು ಭಟ್ಕಳದ ಶ್ರೀ ನಾಗಯಕ್ಷೆ ಧರ್ಮಾರ್ಥ ಸಭಾಭವನದಲ್ಲಿ ಜರುಗಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸರಸ್ವತಿ ಪ್ರಭಾ ಕೊಂಕಣಿ ಮಾಸಿಕ ಪತ್ರಿಕೆಯ ಪ್ರಧಾನ ಸಂಪಾದಕ ಹುಬ್ಬಳ್ಳಿಯ ಆರಗೋಡು ಸುರೇಶ ಶೆಣೈ, ಭಟ್ಕಳ ಜಿ.ಎಸ್.ಎಸ್. ಸಂಸ್ಥೆಯ ಸಾಮಾಜಿಕ ಕಾರ್ಯಗಳು, ಸೇವೆಗಳು, ಯೋಜನೆಗಳನ್ನು ಶ್ಲಾಘಿಸಿದರು. ಯುವಕ-ಯುವತಿಯರು ಶಿಕ್ಷಣದ ಜೊತೆಯಲ್ಲಿ ಸಂಸ್ಕೃತಿ, ಮಾತೃಭಾಷೆಗೆ ಮಹತ್ವವನ್ನು ನೀಡುತ್ತಾ ಸಮಾಜಮುಖಿಯಾಗುವಂತೆ ತಿಳಿಸಿದರು.

ಇದನ್ನು ಓದಿ : ಭಟ್ಕಳದಲ್ಲಿನ ಗೋ ಹತ್ಯಾ ಪ್ರಕರಣ ಬಿಚ್ಚಿಟ್ಟ ಹಿಂಜಾವೇ

ಗೌರವಾಧ್ಯಕ್ಷ ನರೇಂದ್ರ ನಾಯಕ, ಸಮಿತಿ ಬೆಳೆದು ಬಂದ ಹಾದಿಯನ್ನು ತಿಳಿಸುತ್ತಾ, ಜೀವನದಲ್ಲಿ ಅಸಾಧ್ಯವಾದುದು ಯಾವುದು ಇಲ್ಲ, ಸರ್ವರೂ ರಾಷ್ಟ್ರ ಪ್ರೇಮ ಬೆಳೆಸಿಕೊಂಡು ರಕ್ತದಾನ, ನೇತ್ರದಾನದಲ್ಲಿ ಭಾಗಿಯಾಗಬೇಕೆಂದು ತಿಳಿಸಿದರು.

ಇದನ್ನು ಓದಿ : ನಡೆದಿದ್ದೇನು ಗೊತ್ತಾ? ಸತ್ತವರು ಯಾರು? ಉಳಿದವರ ಕಥೆ ಏನು?

ಈ ಸಂದರ್ಭದಲ್ಲಿ ಹನುಮಂತ ಮಾಳಪ್ಪ ಪೈ (ಪುತ್ತು ಪೈ) ರವರ ಸ್ಮರಣಾರ್ಥ ಶ್ರೀ ಹನುಮಂತ ಮಾಳಪ್ಪ ಪೈ ಸೇವಾ ಸಾಧಕ ಪುರಸ್ಕಾರವನ್ನು ಜಿ.ಎಸ್.ಬಿ. (GSB) ಸಮಾಜದ ಅಧ್ಯಕ್ಷ ನಾಗೇಶ ಕಾಮತರವರಿಗೆ, ಕೆ.ಎಂ.ನಾಯಕ ಸಾಧಕ ಪುರಸ್ಕಾರವನ್ನು ಕೊಂಕಣಿ ಸಾಹಿತಿ ಪದ್ಮನಾಭ ನಾಯಕ (ಅಣ್ಣಪ್ಪಣ್ಣ) ರವರಿಗೆ, ತಾರಾಬಾಯಿ ಹನುಮಂತ ಶಾನಭಾಗ ಸ್ಮರಣಾರ್ಥ ಆದರ್ಶ ಸದ್ ಗೃಹಿಣಿ ಪರಸ್ಕಾರವನ್ನು ಉಷಾ ಉಲ್ಲಾಸ ಪೈ ರವರಿಗೆ ನೀಡಲಾಯಿತು.

ಇದನ್ನು ಓದಿ :  ಭೀಕರ ಅಪಘಾತದಲ್ಲಿ ೯ ಜನ ದುರ್ಮರಣ

ಭಟ್ಕಳ ಪುರಸಭೆಯ ನಾಮ ನಿರ್ದೇಶಿತ ಸದಸ್ಯೆಯಾಗಿ ಆಯ್ಕೆಯಾದ ಅಪರ್ಣಾ ಅನೀಲ ನಾಯಕರನ್ನು ಸನ್ಮಾನಿಸಲಾಯಿತು. ೭೦ ವರ್ಷ ಪೂರೈಸಿದ ಹಿರಿಯ ನಾಗರಿಕರಿಗೆ ಸಮಿತಿಯ ವತಿಯಿಂದ ಆಯುಷ್ಮಾನ ಭಾರತ ಕಾರ್ಡ ವಿತರಣೆಯನ್ನು ಮಾಡಲಾಯಿತು.

ಇದನ್ನು ಓದಿ : ಐದು ದಿನಗಳಾದರೂ ಮನೆಗೆ ಬಾರದ ಯುವತಿ

ಜಿ.ಎಸ್.ಬಿ. ಸಮಾಜದ ಅಧ್ಯಕ್ಷ ನಾಗೇಶ ಕಾಮತ, ಜಿ.ಎಸ್.ಎಸ್. ಅಧ್ಯಕ್ಷ ಗಿರಿಧರ ನಾಯಕ, ಮಹಿಳಾ ಸಮಿತಿ ಅಧ್ಯಕ್ಷೆ ಸುನಿತಾ ಪೈ, ಗೌರವಾಧ್ಯಕ್ಷ ಪದ್ಮನಾಭ ಪೈ, ಗಣಪತಿ ಪ್ರಭು, ನಾಗೇಶ ಪೈ ಸಹಿತ ಸಾವಿರಾರು ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಡಿಯೋ ಸಹಿತ ಇದನ್ನು ಓದಿ : ಪೊಲೀಸರ ವಿರುದ್ಧ ಆಟೋ ಚಾಲಕರ ದಿಢೀರ್ ಪ್ರತಿಭಟನೆ

ಜಿ.ಎಸ್.ಬಿ. ಸಮಾಜ ಬಾಂಧವರಿಂದ ರಾಷ್ಟ್ರಪ್ರೇಮ ಬಿಂಬಿಸುವ, ಸಾಮಾಜಿಕ ಜಾಗೃತಿ ಮೂಡಿಸುವಂತಹ, ಭಾರತಿಯ ಸಂಸ್ಕೃತಿ ಅನಾವರಣಕ್ಕೆ ಪೂರಕವಾದ ವಿವಿಧ ಮನೋರಂಜನಾ ಕಾರ್ಯಕ್ರಮ ಜರಗಿತು. ಲಕ್ಕಿ ಜಿ.ಎಸ್.ಬಿ. ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು. ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಗುರುದಾಸ ಪ್ರಭು ಕಾರ್ಯಕ್ರಮ ನಿರೂಪಿಸಿದರು. ದೀಪಕ ನಾಯಕ ಸ್ವಾಗತಿಸಿದರು. ಶ್ರೀನಾಥ ಪೈ ವಂದಿಸಿದರು.

ಇದನ್ನು ಓದಿ : ಕಾರು ಡಿಕ್ಕಿಯಾಗಿ ಯುವತಿ ಸ್ಥಳದಲ್ಲಿಯೇ ಸಾವು