ಭಟ್ಕಳ: ತಲಾಂದ ರಸ್ತೆಯ ಹೊಸಮಠ ಗದ್ದೆ ಸಮೀಪ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಿಸುತ್ತಿದ್ದ ಬೈಕ್ ಏಕಾಏಕಿ ಕಾಡುಹಂದಿ ರಸ್ತೆ ದಾಟಲು ಬಂದ ಹಿನ್ನೆಲೆಯಲ್ಲಿ ಸ್ಕಿಡ್ ಆಗಿ ಉರುಳಿದ ಘಟನೆ ನಡೆದಿದೆ. ಬೈಕ್ ಸವಾರ ಮಹೇಶ ವೆಂಕಟೇಶ ಗೊಂಡ ಮತ್ತು ಹಿಂಬದಿ ಸವಾರ ರಿತೇಶ ಬಡಿಯಾ ಗೊಂಡ ಗಾಯಗೊಂಡಿದ್ದಾರೆ (bikers injured).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅಪಘಾತದಲ್ಲಿ ಹಿಂಬದಿ ಸವಾರ ರಿತೇಶ ಅವರಿಗೆ ತಲೆಯ ಹಿಂಭಾಗ, ಬಲಗಣ್ಣು, ಬಲಗೈ ಹಾಗೂ ಬಲಗಾಲಿಗೆ ಗಾಯಗಳಾಗಿದ್ದು, ಬೈಕ್ ಸವಾರ ಮಹೇಶ ಅವರಿಗೆ ತಲೆಯ ಹಿಂಭಾಗ, ಬಲಗೈ ಮೊಣಕೈ ಭಾಗ ಹಾಗೂ ಎರಡೂ ಕಾಲಿನ ಪಾದಗಳಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನು ಓದಿ: Man dies/ ಡಿಶ್ ಫಿಟಿಂಗ್ ಮಾಡುತ್ತಿದ್ದಾಗ ಆಯತಪ್ಪಿ ಬಿದ್ದು ಸಾವು
ಈ ಸಂಬಂಧ ಯೋಗೇಶ ತಂದೆ ಕುಪ್ಪಯ್ಯ ಗೊಂಡ ಅವರು ಗ್ರಾಮೀಣ ಠಾಣೆಗೆ ದೂರು ನೀಡಿದ್ದು, ಮೋಟಾರ್‌ಸೈಕಲ್ ಸವಾರನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ./ bikers injured
ಇದನ್ನು ಓದಿ: Honors to achievers/ ಮಡಿವಾಳ ಸಮಾಜದ ಸಾಧಕರಿಗೆ ಸನ್ಮಾನ



