ಭಟ್ಕಳ (Bhatkal) : ಇಲ್ಲಿನ ಅಂಜುಮನ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು (Anjuman College) ಹಾಗೂ ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ (PG Centre) ಮಾ. ೨೩ರ ಭಾನುವಾರದಂದು ಕಾಲೇಜಿನ ಹಿಂದೂ ಉಪನ್ಯಾಸಕರಿಂದ ತಮ್ಮ ಮುಸ್ಲಿಂ ಸಹೋದ್ಯೋಗಿಗಳಿಗಾಗಿ ಇಫ್ತಾರ್ ಕೂಟ (Iftar party) ಆಯೋಜಿಸಲಾಗಿತ್ತು. ಅಂಜುಮನ್ ಶಿಕ್ಷಣ ಸಂಸ್ಥೆಯ ಇತಿಹಾಸದಲ್ಲಿ ಬಹುಶಃ ಇದೇ ಮೊದಲ ಬಾರಿಗೆ ಹಿಂದೂ ಉಪನ್ಯಾಸಕರು ರಂಝಾನ್ ತಿಂಗಳಲ್ಲಿ ತಮ್ಮ ಮುಸ್ಲಿಂ ಸಹೋದ್ಯೋಗಿಗಳಿಗೆ ಇಫ್ತಾರ್ ಕೂಟ ಮತ್ತು ರಾತ್ರಿ ಭೋಜನವನ್ನು ಆಯೋಜಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಮೊಹಮ್ಮದ್ ಹಿಬ್ಬಾನ್ ಶಾಬಂದ್ರಿ, “ಇದು ಪರಸ್ಪರ ಸೌಹಾರ್ದತೆ ಮತ್ತು ಸಹೋದರತೆಗೆ ಒಂದು ಉತ್ತಮ ಉದಾಹರಣೆಯಾಗಿದೆ. ಅಂಜುಮನ್‌ನ ಎಲ್ಲಾ ಸಂಸ್ಥೆಗಳಲ್ಲಿ ಹಲವಾರು ಅನ್ಯ ಧರ್ಮೀಯ ಉಪನ್ಯಾಸಕರು ಮತ್ತು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಯಾವಾಗಲೂ ಸೌಹಾರ್ದತೆಯ ವಾತಾವರಣವಿದೆ. ಇಂದಿನ ಈ ಇಫ್ತಾರ್ ಕೂಟ (Iftar party) ಆ ಸಹೋದರತೆಯ ವಾತಾವರಣಕ್ಕೆ ಸಾಕ್ಷಿಯಾಗಿದೆ. ಎಲ್ಲಾ ಧರ್ಮದ ಜನರು ಇಲ್ಲಿ ಕೆಲಸ ಮಾಡುತ್ತಾರೆ ಮತ್ತು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದಾರೆ. ಈ ಸಹೋದರತೆಯ ವಾತಾವರಣ ಸಮಾಜದಲ್ಲಿ ಸಾಮಾನ್ಯವಾಗಲಿ” ಎಂದರು.
ಇದನ್ನೂ ಓದಿ : Endowment Award/ ಸಿಸು ಸಂಗಮೇಶ ದತ್ತಿ ಪ್ರಶಸ್ತಿ ಪ್ರದಾನ
“ಕಳೆದ ಹಲವು ವರ್ಷಗಳಿಂದ ಮುಸ್ಲಿಂ ಉಪನ್ಯಾಸಕರು ನಮ್ಮ ಕಾಲೇಜಿನಲ್ಲಿ ಇಫ್ತಾರ್ ಕೂಟವನ್ನು ಆಯೋಜಿಸುತ್ತಿದ್ದರು. ಆದರೆ ಈ ಬಾರಿ ಅಂಜುಮನ್ ಪದವಿ ಮಹಾ ವಿದ್ಯಾಲಯದ ಹಿಂದೂ ಉಪನ್ಯಾಸಕರು ಇಫ್ತಾರ್ ಕೂಟವನ್ನು ಆಯೋಜಿಸುವ ಮೂಲಕ ಹಿಂದೂ-ಮುಸ್ಲಿಂ ಸೌಹಾರ್ದತೆಯ ಪರಂಪರೆಗೆ ಒಂದು ಹೊಸ ಆಯಾಮವನ್ನು ಸೇರಿಸಿದ್ದಾರೆ” ಎಂದು ಕಾಲೇಜಿನ ಕನ್ನಡ ವಿಭಾಗದ (Kannada Department) ಮುಖ್ಯಸ್ಥ ಪ್ರೊ. ಆರ್.ಎಸ್. ನಾಯಕ ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ : foundation stone/ ಶಂಕುಸ್ಥಾಪನೆಯಾಗಿ ೨ ವರ್ಷ ಕಳೆದರೂ ಆರಂಭವಾಗದ ಕಾಮಗಾರಿ
ಇಫ್ತಾರ್‌ಗೆ ಮುನ್ನ ಬಿಬಿಎ ಕಾಲೇಜಿನ ಪ್ರೊಫೆಸರ್ ಮೌಲಾನಾ ಮೊಹಮ್ಮದ್ ಜಾಫರ್ ನದ್ವಿ ಪ್ರಾರ್ಥನೆ ಸಲ್ಲಿಸಿದರು. ನಮಾಝ್ ಬಳಿಕ ರಾತ್ರಿ ಭೋಜನದ ವ್ಯವಸ್ಥೆಯೂ ಇತ್ತು. ಎಲ್ಲಾ ಸಹೋದ್ಯೋಗಿಗಳು ಒಟ್ಟಾಗಿ ಸಂತೋಷದಲ್ಲಿ ಭಾಗವಹಿಸಿದ್ದರು. ವಾಣಿಜ್ಯ ವಿಭಾಗದ (Commerce Department) ಮುಖ್ಯಸ್ಥ ಪ್ರೊ. ಮಂಜುನಾಥ ಪ್ರಭು, ಕನ್ನಡ ಉಪನ್ಯಾಸಕ ಪ್ರೊ. ದಾಮೋದರ ನಾಯಕ ಮತ್ತಿತರು ಪಾಲ್ಗೊಂಡಿದ್ದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಕೆ. ಶೇಖ ಇಫ್ತಾರ್ ಕೂಟದ ಆಯೋಜನೆಗಾಗಿ ಸಹೋದ್ಯೋಗಿಗಳಿಗೆ ಧನ್ಯವಾದ ಅರ್ಪಿಸಿದರು.
ಇದನ್ನೂ ಓದಿ : Annual Sports/ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ