ಭಟ್ಕಳ: ಕಾರು ಡಿಕ್ಕಿ ಹೊಡೆದು ಪರಾರಿಯಾದ ಪರಿಣಾಮ ಆಟೋರಿಕ್ಷಾ ಪಲ್ಟಿಯಾಗಿ ಗರ್ಭಿಣಿ ಸಹಿತ ಆರು ಜನರು ಗಾಯಗೊಂಡ ಘಟನೆ (Hit and run) ಭಟ್ಕಳ ನಗರದ ಮಣಕುಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಫೆಬ್ರವರಿ ೮ರಂದು ಮಧ್ಯಾಹ್ನ ೨-೨೦ ಗಂಟೆ ಸುಮಾರಿಗೆ ಭಟ್ಕಳ ರಾಘವೇಂದ್ರ ಮಠದ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಅಪರಿಚಿತ ತನ್ನ ಕಾರನ್ನು ಕುಂದಾಪುರ (Kundapura) ಕಡೆಯಿಂದ ಭಟ್ಕಳ (Bhatkal) ಕಡೆಗೆ ಹೋಗಲು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದು, ತನ್ನ ಮುಂದೆ ಅದೇ ರಸ್ತೆಯಲ್ಲಿ ಭಟ್ಕಳ ಮುಟ್ಟಳ್ಳಿ ಬೈಪಾಸ ಕಡೆಯಿಂದ ಭಟ್ಕಳ ಕಡೆಗೆ ಹೋಗುತ್ತಿದ್ದ ರಿಕ್ಷಾಕ್ಕೆ ಓವರಟೆಕ್ ಮಾಡಲು ಹೋಗಿ ತನ್ನ ಕಾರಿನ ಎಡಭಾಗದಿಂದ ಡಿಕ್ಕಿ ಹೊಡೆದು ಉಜ್ಜಿಕೊಂಡು ಪರಾರಿಯಾಗಿದ್ದಾನೆ (Hit and run). ಪರಿಣಾಮ ಆಟೋರಿಕ್ಷಾ ರಸ್ತೆಯ ಮೇಲೆ ಪಲ್ಟಿ ಹೊಡೆದಿದೆ.
ಇದನ್ನು ಓದಿ: Makkala Santhe/ ಹಡೀನ ಶಾಲೆಯಲ್ಲಿ ಮಕ್ಕಳ ಸಂತೆ ಯಶಸ್ವಿ
ರಿಕ್ಷಾ ಚಾಲಕ ನಾಗರಾಜ ಬಿಳಿಯಾ ದೇವಾಡಿಗರಿಗೆ ಬಲಕಾಲಿಗೆ, ಎಡಗಾಲಿಗೆ ಭಾರಿ ರಕ್ತಗಾಯಗಳು, ಹಣೆಗೆ ರಕ್ತಗಾಯ, ಕುತ್ತಿಗೆಗೆ ಒಳನೋವು ಹಾಗೂ ಮೈಗೈಗೆ ಅಲ್ಲಲ್ಲಿ ರಕ್ತಗಾಯ ನೋವು ಆಗಿದೆ. ದೇವಿದಾಸ ಸುಬ್ರಾಯ ದೇವಾಡಿಗ ಇವರಿಗೆ ತಲೆಗೆ ರಕ್ತಗಾಯ, ಎಡ ಕಿವಿಗೆ, ಬಲ ಭುಜಕ್ಕೆ ಭಾರಿಗಾಯ ಹಾಗೂ ಮೈಕೈಗೆ ಅಲ್ಲಲ್ಲಿ ತೆರಚಿದ ಗಾಯಗಳಾಗಿವೆ. ಲಕ್ಷ್ಮಿ ತಿಮ್ಮಪ್ಪ ಮೋಗೇರ ಇವರಿಗೆ ಬಲಕೈ ಭುಜಕ್ಕೆ ಮೋಣಕೈಗೆ ಭಾರಿ ಗಾಯ, ಬೆರಳುಗಳಿಗೆ, ಬಲಗಾಲಿಗೆ ರಕ್ತಗಾಯಗಳು ಮತ್ತು ಒಳ ನೋವು ಹಾಗೂ ಅಲ್ಲಲ್ಲಿ ಮೈಗೆ ತೆರಚಿದ ಗಾಯಗಳು ಆಗಿವೆ. ಹೇಮಾವತಿ ಕೋಂ ದಿನೇಶ ಮೋಗೇರ ಇವರಿಗೆ ಬಲಕೈ ಭುಜಕ್ಕೆ, ಮೋಣಕೈಗೆ ಭಾರಿ ಗಾಯ, ಬಲಗಾಲಿಗೆ ರಕ್ತಗಾಯಗಳು ಮತ್ತು ಒಳ ನೋವು ಆಗಿದೆ. ಶ್ರುತಿ ರಾಮ ಮೊಗೇರ್ ಇವರಿಗೆ ತಲೆಗೆ ಒಳನೋವು ಹಾಗೂ ಮೈಗೆ ಅಲ್ಲಲ್ಲಿ ಒಳನೋವು ಆಗಿದೆ. ರಂಜಿತಾ ಸಂತೋಷ ಮೊಗೇರ ಗರ್ಭಿಣಿ ಇದ್ದು ಇವರಿಗೆ ಸೋಂಟಕ್ಕೆ ಒಳನೋವು ಹಾಗೂ ಮೈಗೆ ಅಲ್ಲಲ್ಲಿ ಒಳನೋವು ಆಗಿದೆ. ಇವರೆಲ್ಲರೂ ಆಟೋದಲ್ಲಿ ಪ್ರಯಾಣಿಸುತ್ತಿದ್ದರು.
ಇದನ್ನು ಓದಿ: breaking news/ ಮಂಗಳೂರು ಬಳಿ ಅಪಘಾತದಲ್ಲಿ ಭಟ್ಕಳದ ಯುವಕ ಸಾವು
ಕಾರನ್ನು ನಿಲ್ಲಿಸದೇ ಭಟ್ಕಳ ಕಡೆಗೆ ಚಾಲಕ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದು, ಗಾಯಗೊಂಡವರಿಗೆ ಚಿಕಿತ್ಸೆಯ ಕುರಿತು ಆಸ್ಪತ್ರೆಗೆ ದಾಖಲಿಸಿ ಅವರ ಸಂಬಂಧಿಕರಲ್ಲಿ ವಿಚಾರಿಸಿಕೊಂಡು ಬಂದು ದೂರು ನೀಡಲು ವಿಳಂಬವಾಗಿದೆ ಎಂದು ಮುಂಡಳ್ಳಿಯ ಜೋಗಿಮನೆಯ ಮಹೇಶ ತಂದೆ ಮಾದೇವ ದೇವಾಡಿಗ ದೂರಿನಲ್ಲಿ ತಿಳಿಸಿದ್ದಾರೆ. ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನು ಓದಿ: Stone temple/ ಪಶುಪತಿ ದೇವರಿಗೆ ಶಿಲಾಮಯ ಗುಡಿ



