ಗೋಕರ್ಣ (Gokarna) : ಸಮೀಪದ ದುಬ್ಬನಸಸಿ ಗ್ರಾಮದ ಹೋಮ್‌ ಸ್ಟೇವೊಂದರ (Home stay) ಟೆಂಟ್‌ಗೆ ಬೆಂಕಿ ಹಚ್ಚಿದ್ದಲ್ಲದೆ, ಎರಡು ಟೆಂಟ್‌ ಹರಿದುಹಾಕಿರುವ ಬಗ್ಗೆ ಗೋಕರ್ಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ (Complaint) ದಾಖಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೆಂಗಳೂರಿನ (Bengaluru) ಬನ್ನೇರುಘಟ್ಟದ (Bannerughatta) ರುತ್ವಿಕಾ ಅಶೋಕಕುಮಾರ ಸಿಂಗ್‌ (೨೮) ಎಂಬುವವರಿಗೆ ಸೇರಿದ ಹೋಮ್‌ ಸ್ಟೇನಲ್ಲಿ (Home Stay) ಘಟನೆ ನಡೆದಿದೆ.  ದುಬ್ಬನಸಸಿ ಗ್ರಾಮದ ಪತಂಗ ಬೀಚ್ ರೆಸಾರ್ಟ (Patanga Beach Resort) ಸಮೀಪ ಬಿಂಬಾ ಗ್ಲೋಂಪಿಂಗ್‌ ರಿಟ್ರೀಟ್‌ (Bimba Glomping Retreat) ಎಂಬ ರೆಸಾರ್ಟ್‌ನ್ನು ರುತ್ವಿಕಾ ಕಳೆದ ಎರಡು ತಿಂಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. ಆರೋಪಿತರು ಹೋಮ್‌ಸ್ಟೇ ಗೆ ಸಂಬಂಧಪಟ್ಟ ೨ ಟೆಂಟ್‌ಗಳಲ್ಲಿ ಒಂದನ್ನು ಹರಿದು ಹಾಕಿದ್ದಲ್ಲದೇ, ಇನ್ನೊಂದಕ್ಕೆ ಬೆಂಕಿ ಹಚ್ಚಿ ಹಾನಿ ಮಾಡಿದ್ದಾರೆ.

ಇದನ್ನೂ ಓದಿ :  ಹಸಿರು ಪಟಾಕಿ ಮಾತ್ರ ಖರೀದಿಗೆ ಸೂಚನೆ; ಏನಿದು ?

ಸುಮಾರು ೨.೪೦ ಸಾವಿರ ರೂ. ನಷ್ಟವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ಅಭಿಜಿತ್‌ ಹೊನ್ನಪ್ಪ ನಾಯಕ ಎಂಬುವವರ ಮೇಲೆ ಈ ಕೃತ್ಯ ಎಸಗಿರುವ ಸಂಶಯವಿದೆ ಎಂದು ದೂರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಗೋಕರ್ಣ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ :  ತೇಜಸ್ವಿನಿ ವೆರ್ಣೇಕರ್ ಗೆ ರಾಷ್ಟ್ರಮಟ್ಟದ ಸಂಗೀತ ಪ್ರಶಸ್ತಿ