ಭಟ್ಕಳ (Bhatkal) : ಕೆಡಿಸಿಸಿ ಬ್ಯಾಂಕಿನ (KDCC Bank) ನಿವೃತ್ತ ಸಹಾಯಕ ಪ್ರಧಾನ ವ್ಯವಸ್ಥಾಪಕ(AGM) ಎಲ್ ಡಿ ಶಿರೂರು ಅವರನ್ನು ಕೋಟಖಂಡದ ಶಿವಶಾಂತಿಕಾ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದಿಂದ ಸನ್ಮಾನಿಸಿ ಗೌರವಿಸಲಾಯಿತು (Honour).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸನ್ಮಾನ (Honour) ಸ್ವೀಕರಿಸಿ ಮಾತನಾಡಿದ ಎಲ್ ಡಿ ಶಿರೂರು, ತಮ್ಮ ಸೇವಾವಧಿಯಲ್ಲಿ ಸಹಕಾರಿ ಸಂಘಗಳ (cooperative society) ನಿರ್ದೇಶಕರು, ಸಿಬ್ಬಂದಿ ಮತ್ತು ಸಾರ್ವಜನಿಕರು ಉತ್ತಮವಾಗಿ ಸಹಕಾರ ನೀಡಿದ್ದಾರೆ. ಸಹಕಾರಿ ಸಂಘಗಳು ಗ್ರಾಹಕರ ಪ್ರೀತಿ ವಿಶ್ವಾಸಗಳಿಸಿ ಉತ್ತಮ ಸೇವೆ ನೀಡಬೇಕು. ಸೇವೆಯಿಂದ ನಿವೃತ್ತಿಯಾದರೂ ಸಹ ಯಾವುದೇ ಸಹಕಾರಿ ಸಂಘಗಳಿಗೆ ಸಲಹೆ, ಸೂಚನೆ ಮತ್ತು ಮಾರ್ಗದರ್ಶನ ನೀಡಲು ಸದಾ ಸಿದ್ಧನಿದ್ದೇನೆ ಎಂದರು.

ಇದನ್ನು ಓದಿ : Varadhalli/ ವರದಳ್ಳಿಯಲ್ಲಿ ಕೇಸರಿ ಗಂಧ ಲೇಪನ ಅಲಂಕಾರ ಪೂಜೆ

ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ, ಉಪಾಧ್ಯಕ್ಷ ಎಂ ಡಿ ನಾಯ್ಕ, ನಿರ್ದೇಶಕ ಶಿವಾನಂದ ಹೆಬ್ಬಾರ ಮಾತನಾಡಿ ಎಲ್ ಡಿ ಶಿರೂರು ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ನಿರ್ದೇಶಕರಾದ ಶೈಲೇಂದ್ರ ಜೈನ್, ನಾರಾಯಣ ಭಟ್ಟ, ಗಣೇಶ ಗೊಂಡ, ಕೃಷ್ಣ ಮೊಗೇರ, ಶೈಲಾ ಹೆಬ್ಬಾರ, ಸುಧಾ ಹೆಗಡೆ, ಮುಖ್ಯ ಕಾರ್ಯನಿರ್ವಾಹಕ ಶ್ರೀಧರ ಎಂ ಹೆಬ್ಬಾರ ಮುಂತಾದವರಿದ್ದರು.

ಇದನ್ನು ಓದಿ : Rathotsava/ ಸೋನಾರಕೇರಿಯಲ್ಲಿ ಬೆಳ್ಳಿ ರಥೋತ್ಸವ ಫೆ. ೧೭ರಂದು