ಭಟ್ಕಳ: ಕುಂದಾಪುರ (Kundapura) –ಭಟ್ಕಳ (Bhatkal) ಮಾರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಅತೀ ವೇಗ ಹಾಗೂ ನಿರ್ಲಕ್ಷ್ಯಪೂರ್ಣ ಚಾಲನೆ, ಜೊತೆಗೆ ಏಕಾಏಕಿ ಹಸು ರಸ್ತೆ ದಾಟಿದ ಪರಿಣಾಮ ಭೀಕರ ಸರಣಿ ಅಪಘಾತ (series of accidents) ಸಂಭವಿಸಿದೆ. ಈ ಘಟನೆಯಲ್ಲಿ ಗೂಡ್ಸ್ ಆಟೊ ಚಾಲಕ ಚಂದ್ರಕಾಂತ ನಾಯ್ಕ ಅವರಿಗೆ ಗಾಯಗಳಾಗಿದ್ದು, ಕಾರು, ಗೂಡ್ಸ್ ಆಟೊ, ಬೊಲೆರೋ ಮತ್ತು ಪಿಕ್‌ಅಪ್ ವ್ಯಾನ್ ಸೇರಿ ನಾಲ್ಕು ವಾಹನಗಳಿಗೆ ಭಾರಿ ಹಾನಿಯಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಫಿರ್ಯಾದಿಯ ಪ್ರಕಾರ, ಮಣ್ಕೂಳಿ ಶೆಟ್ಟಿ ಗ್ಯಾರೇಜ್ ಸಮೀಪ ನಿಲ್ಲಿಸಿದ್ದ ಗೂಡ್ಸ್ ಆಟೊಗೆ ಕುಂದಾಪುರದಿಂದ ಭಟ್ಕಳದತ್ತ ಅತೀ ವೇಗದಲ್ಲಿ ಬಂದ ಕೇರಳ (Kerala) ಮೂಲದ ಕಾರು ಮೊದಲು ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಯಿಂದ ಗೂಡ್ಸ್ ಆಟೊ ಮುಂಭಾಗದಲ್ಲಿ ನಿಲ್ಲಿಸಿದ್ದ ಬೊಲೆರೋ ವಾಹನಕ್ಕೂ ಕಾರು ತಾಕಿದೆ. ಬಳಿಕ ಕಾರು ಮತ್ತೊಂದು ಗೂಡ್ಸ್ ಆಟೊ ಹಾಗೂ ಪಿಕ್‌ಅಪ್ ವ್ಯಾನ್‌ಗೆ ಡಿಕ್ಕಿ ಹೊಡೆದು, ಸೈನ್‌ಬೋರ್ಡ್ ಕಂಬಕ್ಕೂ ತಾಕಿ ಎಲ್ಲಾ ವಾಹನಗಳು ರಸ್ತೆ ಬದಿಯ ಇಳಿಜಾರಿನೊಳಗೆ ಜಾರಿಬಿದ್ದಿವೆ.

ಇದನ್ನು ಓದಿ: P U College/ ಪಿಯು ಕಾಲೇಜಿಗೆ ನೂತನ ಕಟ್ಟಡ

ಅಪಘಾತದಲ್ಲಿ (series of accidents) ಗೂಡ್ಸ್ ಆಟೊ ಚಾಲಕ ಚಂದ್ರಕಾಂತ ನಾಯ್ಕ ಅವರ ಬಲಗಾಲಿನ ಮಂಡಿ ಭಾಗಕ್ಕೆ ಗಾಯಗಳಾಗಿದ್ದು, ಕೇರಳದಿಂದ ಮಹಾರಾಷ್ಟ್ರದತ್ತ (Maharashtra) ಪ್ರಯಾಣಿಸುತ್ತಿದ್ದ ಕಾರಿನಲ್ಲಿದ್ದ ದಂಪತಿ ಮತ್ತು ಅವರ ಮೂವರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಇದನ್ನು ಓದಿ: Drink drive/ ದಂಡದ ಹಣ ಕೋರ್ಟ್‌ಗೆ ಜಮಾ ಮಾಡದೇ ಲೋಪ

ಘಟನೆಯ ನಂತರ ಕ್ರೇನ್ ಮೂಲಕ ವಾಹನಗಳನ್ನು ಎತ್ತಲಾಗಿದ್ದು, ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು (case filed), ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನು ಓದಿ: NSS/ ಎನ್ಎಸ್ಎಸ್ ವಾರ್ಷಿಕ ಶಿಬಿರ ಸಂಪನ್ನ