ಭಟ್ಕಳ: ತಾಲೂಕಿನ ಬೆಳಕೆ ಗರಡಿ ಹಿತ್ಲುವಿನ ಶ್ರೀಧರ ನಾಯ್ಕ ಮನೆಯಲ್ಲಿ ಮಾರಿ ಮರಕ್ಕೆ ಪೂಜೆ ಸಲ್ಲಿಸಿ ಮರ ಕತ್ತರಿಸುವ ಮೂಲಕ ಮಾರಿ ಜಾತ್ರೆಯ ಮೂರ್ತಿ ಕೆತ್ತನೆಯ(Idol carving) ಧಾರ್ಮಿಕ ವಿಧಿ ವಿಧಾನಕ್ಕೆ ಮಂಗಳವಾರದಂದು ಚಾಲನೆ ನೀಡಲಾಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಇಂದು ದೇವಸ್ಥಾನದ ಆಡಳಿತ ಕಮಿಟಿ ಮುಖ್ಯಸ್ಥರನ್ನು ಒಳಗೊಂಡಂತೆ ಸ್ಥಳೀಯರು ಹಾಗೂ ಮಾರಿ ಮೂರ್ತಿ ಮರವನ್ನು ನೀಡಿದ ಕುಟುಂಬದವರ ಸಮ್ಮುಖದಲ್ಲಿ ವಿಧಿವಿಧಾನ ನಡೆಯಿತು.  ಮಾರಿ ಮೂರ್ತಿ ತಯಾರಕರಾದ ಮಾರುತಿ ಆಚಾರಿ  ಮರಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮರವನ್ನು ಕತ್ತರಿಸಿ ಮೂರ್ತಿ ತಯಾರಿಕೆಗೆ ಸಿದ್ಧತೆ ಮಾಡಿಕೊಂಡರು.

ಇದನ್ನೂ ಓದಿ : ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಸುಮಾರು ೨೫ ವರ್ಷದ ಹುಳಿ ಅಮಟೆ ಮರ ಇದಾಗಿದೆ. ವರ್ಷಂಪ್ರತಿಯಂತೆ ಇಲ್ಲಿನ ಮಣ್ಕುಳಿಯ ಹೊನ್ನಯ್ಯನ ಮನೆ ಕುಟುಂಬಸ್ಥರು ಈ ಮರವನ್ನು ಕಡಿದು ಮಾರಿ ಮೂರ್ತಿ ತಯಾರಕರಾದ  ಆಚಾರ್ಯರಿಗೆ ಒಪ್ಪಿಸಿದರು.

ಇದನ್ನೂ ಓದಿ : ಜುಲೈ ೨೩ರಂದು ವಿವಿಧೆಡೆ ಅಡಿಕೆ ಧಾರಣೆ

ಇಂದಿನಿಂದ ಶುಕ್ರವಾರ ತನಕ ಮಾರಿ ಮೂರ್ತಿ ಬಿಂಬವನ್ನು ಅಲ್ಲಿಯೇ ತಯಾರಿಸಲಾಗುತ್ತದೆ. ಬಳಿಕ ಶುಕ್ರವಾರ ಸಂಜೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಊರಿನ ಮುತೈದೆಯರು ಮೂರ್ತಿಗೆ ಉಡಿ ತುಂಬಿದ ಬಳಿಕ ಸಂಪ್ರದಾಯಬದ್ದವಾಗಿ ಮಾರಿ ಮೂರ್ತಿ ತಯಾರಿಗೆ ಸಿದ್ಧಗೊಳ್ಳುತ್ತದೆ.

ಇದನ್ನೂ ಓದಿ : ಕಿರಣ್ ಶಾನಭಾಗರಿಗೆ ಪಿ ಎಚ್ ಡಿ ಪದವಿ ಪ್ರದಾನ

ನಂತರ ಅಲ್ಲಿಂದ ಮೂರ್ತಿ ತಯಾರಿಕೆ ಕೆಲಸವನ್ನು ಆಚಾರ್ಯರ ಮನೆಯಲ್ಲಿ ಮಾರ್ಚ್ ೩೦ ತನಕ ನಡೆಯಲಿದೆ. ಅಂದೇ ಮಂಗಳವಾರದಂದು ರಾತ್ರಿ ಮೂರ್ತಿ ತಯಾರಕ ವಿಶ್ವಕರ್ಮ ಸಮಾಜದವರಿಂದ ತವರು ಮನೆಯ ವಿಶೇಷ ಪೂಜೆಯನ್ನು ನೆರವೆರಿಸಲಿದ್ದಾರೆ. ಆ ಬಳಿಕ ಮೂರ್ತಿಗೆ ವಿಶ್ವಕರ್ಮ ಮಹಿಳೆಯರಿಂದ ಸುಹಾಸಿನಿ ಪೂಜೆ, ಷೋಡಶೋಪಚಾರ ಪೂಜೆಯೂ ನಡೆಯುತ್ತದೆ. ಪೂಜಾ ಸಮಯದಲ್ಲಿ ಅವರ ಸಮಾಜದ ಮಹಿಳೆಯರೊಬ್ಬರ ಮೇಲೆ ಮಾರಿ ದೇವಿ ಬರುತ್ತಾಳೆಂಬ ನಂಬಿಕೆ ಇದೆ. ನಂಬಿಕೆಯಂತೆ ಪೂಜೆಯ ವೇಳೆ ಮೈ ದರ್ಶನ ನಡೆಯುತ್ತದೆ. ನಂತರ ಮಹಾ ಮಂಗಳಾರತಿ ಪೂಜೆ ನಡೆಯಲಿದೆ.

ಇದನ್ನೂ ಓದಿ : ನದಿಯಲ್ಲಿನ‌ ಮಣ್ಣು ತೆರವು ಕಾರ್ಯಾಚರಣೆ ಚುರುಕು

ಬುಧವಾರದಂದು ಮುಂಜಾನೆ ೫.೩೦ ಗಂಟೆಗೆ ಮಾರಿ ದೇವಿಯನ್ನು ವಿಶ್ವಕರ್ಮ ಸಮಾಜದವರು ಅದ್ದೂರಿ ಮೆರವಣಿಗೆಯ ಮೂಲಕ ನಗರದ ಮುಖ್ಯ ರಸ್ತೆಯಲಿರುವ ಶ್ರೀ ಮಾರಿಕಾಂಬಾ ದೇವಾಲಯಕ್ಕೆ ತರಲಾಗುತ್ತದೆ. ಸಕಲ ಸಂಭ್ರಮದಿಂದ ವಿಶೇಷ ಆಕರ್ಷಣೆ, ಚಂಡೆ ವಾದ್ಯ, ನೃತ್ಯ ಕುಣಿತದೊಂದಿಗೆ ಮೆರವಣಿಗೆ ನಡೆಯಲಿದೆ.

ಇದನ್ನೂ ಓದಿ : ೮ ದಿನಗಳ ಬಳಿಕ ಮಹಿಳೆ ಶವವಾಗಿ ಪತ್ತೆ

ಅದ್ದೂರಿಯಾಗಿ ಕರೆತರಲಾದ ಮಾರಿ ದೇವಿಯ ಮೂರ್ತಿಗೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಪ್ರತಿಷ್ಠಾಪಿಸಲಾಗುತ್ತದೆ. ಮಾರಿಕಾಂಬಾ ದೇವಿಯ ಎದುರಿಗೆ ಗರ್ಭಗುಡಿಯ ಹೊರಗಡೆ ಪ್ರತಿಷ್ಠಾಪನೆ ಮಾಡಿ ಪೂಜಾ ಕೌಂಕರ್ಯಗಳನ್ನು ನಡೆಸಲಾಗುತ್ತದೆ. ಆ ಮೂಲಕ ಎರಡು ದಿನಗಳ ಮಾರಿ ಜಾತ್ರೆ (Mari Jathre) ಮಹೋತ್ಸವಕ್ಕೆ ಚಾಲನೆ ಸಿಗಲಿದೆ.