ಭಟ್ಕಳ: ಪಟ್ಟಣದ ವೆಲ್ಫೇರ್ ಆಸ್ಪತ್ರೆಯ ವತಿಯಿಂದ ಆಸ್ಪತ್ರೆ ಎದುರು ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು (drinking water) ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಝುಬೇರ್ ಮೌಲಾನಾ ಉದ್ಘಾಟಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನಂತರ ಮಾತನಾಡಿದ ಅವರು, ಜನರ ಅಗತ್ಯ ಮನಗಂಡು ಆಸ್ಪತ್ರೆಯಿಂದ ಶುದ್ಧ ನೀರು ಘಟಕ (drinking water) ಆರಂಭಿಸಲಾಗಿದೆ ಎಂದರು. ನಗರ ಠಾಣೆಯ ಪಿಎಸ್ಐ ನವೀನ ನಾಯ್ಕ ಮಾತನಾಡಿ, ಶುದ್ಧ ನೀರು ಘಟಕ ಆರಂಭಿಸಿದ ವೆಲ್ಫೇರ್ ಆಸ್ಪತ್ರೆ ಆಡಳಿತ ಮಂಡಳಿಯನ್ನು ಶ್ಲಾಘಿಸಿದರು.

ಇದನ್ನು ಓದಿ: Achievement Award/ ಉದ್ಯಮಿ ಅಶೋಕ ಶಂಕರ ಭಟ್ಟಗೆ ಸಾಧಕ ಪ್ರಶಸ್ತಿ 

ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವುಡ ಮಾತನಾಡಿದರು. ವೆಲ್ಫೇರ್ ಆಸ್ಪತ್ರೆಯ ಡಾ ಜಹೀರ್ ಕೋಲಾ ಮಾತನಾಡಿ, ಶುದ್ಧ ನೀರು ಘಟಕದಲ್ಲಿ 2 ರೂಪಾಯಿಗೆ 2 ಲೀಟರ್ ನೀರು ಮತ್ತು 5 ರೂಗೆ 20 ಲೀಟರ್ ನೀರು ದೊರೆಯಲಿದೆ ಎಂದರು.

ಇದನ್ನು ಓದಿ: Symposium/ ಪತ್ರಕರ್ತರಿಗೆ ಬಂಗಾರಮಕ್ಕಿ ಸಂಸ್ಥಾನದ ಶ್ರೀ ಮಾರುತಿ ಗುರೂಜಿ ಎಚ್ಚರ

ಈ ಸಂದರ್ಭದಲ್ಲಿ ವೆಲ್ಫೇರ್ ಆಸ್ಪತ್ರೆಯ ಅಧ್ಯಕ್ಷ ಎಸ್ ಎಂ ಶಕೀಲ್, ಆಸ್ಪತ್ರೆಯ ವ್ಯವಸ್ಥಾಪಕ ಅಬುಲಾಲ್ ಬರ್ಮಾವರ, ಜಾಲಿ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಇಮ್ರಾನ್ ಲಂಕಾ, ಸುಧಾಕರ್ ಸೇರಿದಂತೆ ವೆಲ್ಪೇರ್ ಆಸ್ಪತ್ರೆಯ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಇದನ್ನು ಓದಿ: Lecture/ ಸಮಗ್ರ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮಹತ್ವ– ಡಾ ಚೇತನ್ ಕಲ್ಕೂರ