ಶಿವಮೊಗ್ಗ (Shivamogga) : ಜಿಲ್ಲೆಯ ಸಾಗರ (Sagar) ಮಂಡಲದ ಮಂಡಲೋತ್ಸವ (mandalotsav) ಮತ್ತು ಆಹಾರಮೇಳದ (food fair) ಉದ್ಘಾಟನೆ ಸಾಗರದ ಶ್ರೀ ರಾಘವೇಶ್ವರ (Sri Raghaveshwar) ಭವನದಲ್ಲಿ ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ವೈದ್ಯ ಡಾ. ರಾಮಚಂದ್ರ ಭಾಗವತ್ ಮಂಡಲೋತ್ಸವವನ್ನು ಉದ್ಘಾಟಿಸಿದರು. ಮಂಡಲೋತ್ಸವ ನಿಮಿತ್ತ ರಂಗೋಲಿ, ಚಿತ್ರಕಲೆ, ರಸಪ್ರಶ್ನೆ, ಕವಿತೆ ರಚನೆ, ಪ್ರಬಂಧ, ಕೆರೆ – ದಡ , ಹಗ್ಗ ಜಗ್ಗಾಟ, ಕಪ್ಪೇಜಿಗಿತ, ಸ್ಕಿಪ್ಪಿಂಗ್ ಸ್ಪರ್ಧೆಗಳು ನಡೆದವು.

ವಿಡಿಯೋ ಸಹಿತ ಇದನ್ನೂ ಓದಿ :  ಭಟ್ಕಳದಲ್ಲಿ ಆರ್‌ಎಸ್‌ಎಸ್‌ ಭವ್ಯ ಪಥಸಂಚಲನ

ಗೋಸ್ವರ್ಗದ ಮೇವಿಗಾಗಿ ಆಹಾರಮೇಳವು ಅತ್ಯಂತ ಯಶಸ್ವಿಯಾಗಿ ನಡೆಯಿತು. ಶಿಮುಲ್ ಅಧ್ಯಕ್ಷ ಶಶಿಧರ ಗುರುಶಕ್ತಿ ಆಹಾರೋತ್ಸವವನ್ನು (food fair) ಉದ್ಘಾಟಿಸಿದರು. ಈ ಮೇಳದಲ್ಲಿ ಶಾವಿಗೆ, ಪಡ್ಡು, ಪನ್ನೀರ್ ದೋಸೆ, ಪರೋಟ, ಸೊಗದೆ ಬೇರಿನ ಕಷಾಯ, ಜಲ್ಜೀರ, ಐಸ್ಕ್ರೀಮ್, ಮಸಾಲೆ ಮಂಡಕ್ಕಿ, ಹೋಳಿಗೆ, ಅತ್ರಾಸ, ತೊಡೆದವು ಮುಂತಾದ ಪದಾರ್ಥಗಳಿದ್ದವು.

ಇದನ್ನೂ ಓದಿ : ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬ್ರಿಡ್ಜ್ ಕೋರ್ಸ್

‘ಗೋ ಭಾರತ ‘ ಎಂಬ ಒಂದು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವ್ಯಾಖ್ಯಾನ, ನೃತ್ಯ, ಗೀತೆ, ಹಾಸ್ಯ ಗಳ ಮೂಲಕ ಗೋ ಸಾಕಾಣಿಕೆ ಹಾಗೂ ಅದರ ಮಹತ್ವವನ್ನು ತಿಳಿಸಲಾಯಿತು.

ಇದನ್ನೂ ಓದಿ : ಸಾಗರ ತಾಲೂಕಿನಲ್ಲಿ ಚಿರತೆ ಕಾಟ