ಭಟ್ಕಳ (Bhatkal): ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ಜೀವನ ನಿರ್ವಹಣೆಗೆ ಉತ್ತೇಜನ ನೀಡಲು ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ಅವರ ಪರಿಕಲ್ಪನೆಯೊಂದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಥಮವಾಗಿ ಶುಚಿ ರುಚಿ (Shuchi Ruchi) ಎನ್ನುವ ಹೊಸ ವಿನೂತನ ಮಾದರಿಯ ವಾಹನಗಳನ್ನು ಪರಿಚಯಿಸಲಾಗಿದೆ ಎಂದು ಉಸ್ತುವಾರಿ ಸಚಿವ (Minister) ಮಂಕಾಳ ವೈದ್ಯ (Mankal Vaidya) ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಪಟ್ಟಣದ ತಾ.ಪಂ. ಕಾರ್ಯಾಲಯದಲ್ಲಿ ಶುಚಿ ರುಚಿ(Shuchi Ruchi) ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು. ಶ್ರೀ ಮುರ್ಡೇಶ್ವರ (Murudeshwar) ಸಂಜೀವಿನಿ ಮಾವಳ್ಳಿ ೨ ಗ್ರಾ.ಪಂ. ಒಕ್ಕೂಟಕ್ಕೆ ಈ ವಾಹನದ ನಿರ್ವಹಣೆಯನ್ನು ನೀಡಲಾಗಿದೆ. ಈ ವಾಹನದಲ್ಲಿ ಮಹಿಳೆಯರು ಉಪಹಾರ, ಊಟ ಸೇರಿದಂತೆ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಗ್ರಾಹಕರಿಗೆ ನೀಡಬಹುದು. ಇದು ಮೊಬೈಲ್ ವಾಹನವಾಗಿದ್ದು, ಇದನ್ನು ಎಲ್ಲಿ ಬೇಕಾದರೂ ಕೊಂಡಯ್ಯಬಹುದು. ಅಲ್ಲದೆ ಇದನ್ನು ಮಹಿಳೆಯರಿಗಾಗಿಯೇ ವಿಶೇಷವಾಗಿ ಡಿಸೈನ್ ಮಾಡಲಾಗಿದೆ. ಇದರಲ್ಲಿ ನೀರು ಸೇರಿದಂತೆ ಎಲ್ಲಾ ವ್ಯವಸ್ಥೆ ಒಂದೇ ವಾಹನದಲ್ಲಿ ಲಭ್ಯ ಎಂದರು.
ಇದನ್ನೂ ಓದಿ : ಜನತಾ ಬ್ಯಾಂಕ್ ಸದಸ್ಯರಿಗೆ ಸಿಗಲಿದೆ ಶೇ. ೧೦ ಲಾಭಾಂಶ
ಅತಿ ಕಡಿಮೆ ನಿರ್ವಹಣೆ ವೆಚ್ಚದಲ್ಲಿ ಮಹಿಳೆಯರ ಒಕ್ಕೂಟಕ್ಕೆ ಈ ವಾಹನ ನೀಡಲಾಗುತ್ತಿದೆ. ಇದು ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಅವರ ಪರಿಕಲ್ಪನೆಯಾಗಿದೆ. ಮಹಿಳೆಯರು ಇದರ ಉಪಯೋಗ ಪಡೆದುಕೊಳ್ಳಿ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
ಇದನ್ನೂ ಓದಿ : ಆಗಸ್ಟ್ ೩೧ರಂದು ವಿವಿಧೆಡೆ ಅಡಿಕೆ ಧಾರಣೆ
ಮಾವಳ್ಳಿ ಮಹಿಳಾ ಒಕ್ಕೂಟದ ಅಧ್ಯಕೆ ಸುಮಿತ್ರಾ ನಾಯ್ಕ, ಕಾರ್ಯದರ್ಶಿ ಮಮತಾ ನಾಯ್ಕ, ಸದಸ್ಯರಾದ ಜ್ಯೋತಿ ಅರುಣ ಡಿಕೊಸ್ತಾ, ಲಲಿತಾ ದೇವಾಡಿಗ, ಬೇಬಿ ಲಕ್ಷಣ ನಾಯ್ಕ, ನಾಗರತ್ನ ನಾಯ್ಕ, ಕವಿತಾ ನಾಯ್ಕ ಸೇರಿ ಒಟ್ಟು ೧೫ ಸದಸ್ಯರು ಹಾಜರಿದ್ದರು. ಸಂಜೀವಿನಿ ವಲಯ ಮೇಲ್ವಿಚಾರಕ ಗೋಪಾಲ ನಾಯ್ಕ, ವೆಂಕಟೇಶ ದೇವಡಿಗ, ಕಾರ್ಯಕ್ರಮ ವ್ಯವಸ್ಥಾಪಕಿ ಶಾಂತಿಕಾ ನಾಯ್ಕ, ತಂಜೀಂ ಅಧ್ಯಕ್ಷ ಇನಾಯತ್ ಉಲ್ಲಾ ಶಾಬಂದ್ರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಇತರರು ಉಪಸ್ಥಿತರಿದ್ದರು.
ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಲ್ಲಿ ವೀಕ್ಷಿಸಬಹುದು.
ವಿಡಿಯೋ ಸಹಿತ ಇದನ್ನೂ ಓದಿ : ಅನುದಾನ ತಾರತಮ್ಯ ಖಂಡಿಸಿ ಜಾಲಿ ಪಪಂ ಸದಸ್ಯರಿಂದ ಧರಣಿ