ಭಟ್ಕಳ: ತೆಂಗಿನಗುಂಡಿ ಬಂದರಿಯಲ್ಲಿ ನಾಲ್ಕು ದಿನಗಳ ಹಿಂದೆ ನಡೆದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಮೀನುಗಾರರಲ್ಲಿ ಇನ್ನೊಬ್ಬನ ಶವ ಗಂಗೊಳ್ಳಿ ಸಮುದ್ರ ತೀರದಲ್ಲಿ (Gangolli seashore) ಪತ್ತೆಯಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶವ ಪತ್ತೆಯಾದ ವ್ಯಕ್ತಿಯನ್ನು ಗಣೇಶ ಮೊಗೇರ ಎಂದು ಗುರುತಿಸಲಾಗಿದೆ. ಮಲ್ಪೆ ಈಶ್ವರ ತಂಡ ಹಾಗೂ ಕರಾವಳಿ ಪೊಲೀಸ್ ಪಡೆ ಸ್ಥಳಕ್ಕೆ (Gangolli seashore) ಧಾವಿಸಿ ಶವವನ್ನು ಹೊರತೆಗೆದು ಮುಂಡಳಿ ದಡ ಮಾರ್ಗವಾಗಿ ಭಟ್ಕಳ (Bhatkal) ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮೊನ್ನೆ ರಾಮಕೃಷ್ಣ ಮೊಬೈಲ್ ಅವರ ಶವ ಪತ್ತೆಯಾಗಿತ್ತು.ರಾಮಕೃಷ್ಣ ಮೊಬೈಲ್ ಅವರ ಶವ ಪತ್ತೆಯಾಗಿತ್ತು. ಇನ್ನುಳಿದ ನಾಪತ್ತೆಯಾದ ಇಬ್ಬರು ಮೀನುಗಾರರ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಇದನ್ನು ಓದಿ: Udupi police/ ಉಡುಪಿಯಲ್ಲಿ ಮನೆಗಳ್ಳತನ ಮಾಡಿದ್ದ ಚಿನ್ನಾಭರಣ ಭಟ್ಕಳ, ಶಿರಸಿಯಲ್ಲಿ ಮಾರಾಟ