ಭಟ್ಕಳ (Bhatkal) : ಭಟ್ಕಳ ತಾಲೂಕಾ ೧೧ನೇ ಕನ್ನಡ ಸಾಹಿತ್ಯ ಸಮ್ಮೇಳನದ (Kannada Sammelan) ಅಧ್ಯಕ್ಷ ನಾರಾಯಣ ಯಾಜಿಯವರಿಗೆ ಸಮ್ಮೇಳನಕ್ಕೆ ಅಧಿಕೃತ ಆಹ್ವಾನ ನೀಡಲಾಗಿದೆ. ಅವರ ಮನೆಗೆ ತೆರಳಿದ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಭಟ್ಕಳ ತಾಲೂಕು ಘಟಕದಿಂದ ಅಭಿನಂದಿಸಿ ಆಮಂತ್ರಣ ನೀಡಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತಿ ನಾರಾಯಣ ಯಾಜಿ, ಎಲ್ಲರೂ ಪ್ರೀತಿಯಿಂದ ನೀಡಿದ ಸಮ್ಮೇಳನಾಧ್ಯಕ್ಷತೆಯ ಗೌರವ ತುಂಬ ಸಂತೋಷ ತಂದಿದೆ ಎಂದರು. ಈ ಅವಕಾಶ ಕಲ್ಪಿಸಿದ ಭಟ್ಕಳ ತಾಲೂಕು ಕಸಾಪ ಘಟಕಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಎಲ್ಲ ಕನ್ನಡದ ಮನಸುಗಳ ಪಾಲ್ಗೊಳ್ಳುವಿಕೆಯಿಂದ ಸಮ್ಮೇಳನವನ್ನು (Kannada Sammelan) ಯಶಸ್ವಿಗೊಳಿಸುವಂತೆ ವಿನಂತಿಸಿದರು. ಈ ಸಂದರ್ಭದಲ್ಲಿ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ, ಹಿರಿಯ ಸಾಹಿತಿ ಝಮೀರುಲ್ಲಾ ಷರೀಫ್, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪಿ. ಆರ್. ನಾಯ್ಕ, ತಾಲೂಕು ಕಸಾಪ ಗೌರವ ಕೋಶಾಧ್ಯಕ್ಷ ಶ್ರೀಧರ ಶೇಟ, ಗೌರವ ಕಾರ್ಯದರ್ಶಿ ಸಯ್ಯದ್ ಗೌಸ್ ಮೋಹಿಯುದ್ದಿನ್ ಉಪಸ್ಥಿತರಿದ್ದರು.
ಇದನ್ನೂ ಓದಿ : ಭಟ್ಕಳ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರು ಇವರು…