ಭಟ್ಕಳ: ತಮ್ಮ ಮನೆಯಂಗಳದಲ್ಲಿ ಮರದ ಎಲೆಗಳು ಬಿದ್ದಿದ್ದರಿಂದ ಹಳೆಯ ದ್ವೇಷಕ್ಕೆ (old feud) ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಮುರ್ಡೇಶ್ವರ (Murudeshwar) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ (Bhatkal) ತಾಲೂಕಿನ ತೂದಳ್ಳಿಯ ವೀರ ಮಾಸ್ತಿ ದೇವಸ್ಥಾನದ ಹತ್ತಿರದ ಆಟೋ ಚಾಲಕ ಯೋಗೇಶ ತಂದೆ ಲೋಕೇಶ ಮೊಗೇರ (೩೮) ಅವರು ನೆರೆಮನೆಯವರಾದ ವೆಂಕಟ್ರಮಣ ಮಂಜುನಾಥ ಮೊಗೇರ (೪೦) ಮತ್ತು ಅವರ ಪತ್ನಿ ಮೋಹಿನಿ (೩೬) ವಿರುದ್ಧ ದೂರು ದಾಖಲಿಸಿದ್ದಾರೆ.

ಇದನ್ನು ಓದಿ: arrested/ ಮುರುಡೇಶ್ವರದಲ್ಲಿ ವ್ಯಾಪಾರಿ ಬಂಧನ 

ಆಪಾದಿತರಾದ ವೆಂಕಟ್ರಮಣ ಮೊಗೇರ ಮತ್ತು ಅವರ ಹೆಂಡತಿ ಮೋಹಿನಿ ಮೊಗೇರ ಇಬ್ಬರೂ ಪಿರ್ಯಾದಿ ಕುಟುಂಬದೊಂದಿಗೆ ವಿನಃ ಕಾರಣ ಜಗಳ ಮಾಡಿ ಪಿರ್ಯಾದಿಯ ಕುಟುಂಬದ ಮೇಲೆ ದ್ವೇಷ ಮಾಡುತ್ತಾ ಬಂದವರು (old feud) ಜನವರಿ ೭ರಂದು ಮದ್ಯಾಹ್ನ ೧೨:೩೦ ಗಂಟೆಯ ಸಮಯಕ್ಕೆ ಪಿರ್ಯಾದಿಯವರು ತಮ್ಮ ಜಾಗದಲ್ಲಿ ಇರುವ ಬೇರಹಲಸು ಮರದ ಟೊಂಗೆಯನ್ನು ಕಡಿಯುತ್ತಿರುವಾಗ ಗಲಾಟೆ ನಡೆದಿದೆ.

ಇದನ್ನು ಓದಿ: Achievements/ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀವಲ್ಲಿ ವಿದ್ಯಾರ್ಥಿಗಳ ಸಾಧನೆ

ಮರದ ಎಲೆಗಳು ಆಪಾದಿತ ವೆಂಕಟ್ರಮಣ ಮನೆಯ ಅಂಗಳದಲ್ಲಿ ಬಿದ್ದಿದ್ದರಿಂದ ಅದನ್ನು ತೆಗೆಯಬೇಕು ಅಂತಾ ಪಿರ್ಯಾದಿಯವರೊಂದಿಗೆ ಏಕಾಏಕಿ ಜಗಳ ಮಾಡಲು ಆರಂಭಿಸಿದ್ದಾರೆ. ಪಿರ್ಯಾದಿ ಮರಕಡಿದ ನಂತರಎಲ್ಲವನ್ನು ಸ್ವಚ್ಚಗೊಳಿಸುತ್ತೇನೆ ಅಂತಾ ಹೇಳಿದರೂ ಸಹ ಪಿರ್ಯಾದಿಗೆ ಹಾಗೂ ಅವರ ತಂದೆ ಲೋಕೇಶ ಮೊಗೇರ ಇವರುಗಳಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ.

ಇದನ್ನು ಓದಿ: Karki Shri/ ಭಟ್ಕಳದಲ್ಲಿ ‘ದೈವಜ್ಞ ದರ್ಶನ’ ಕಾರ್ಯಕ್ರಮ

ಆಪಾದಿತನು ತನ್ನ ಹೆಂಡತಿ ಮೊಹಿನಿಗೂ ಪೋನ್ ಮಾಡಿ ಕರೆಯಿಸಿದಿದ್ದರಿಂದ ಇಬ್ಬರೂ ಪಿರ್ಯಾದಿಯ ಜಾಗದಲ್ಲಿ ಅತಿಕ್ರಮ ಪ್ರವೇಶ ಮಾಡಿ ಪಿರ್ಯಾದಿಯ ತಂದೆಗೆ ಬೈಯುತ್ತಾ ಅವರ ಎದೆಯ ಮೇಲೆ ಹೊಡೆಯಲು ಪ್ರಾರಂಭಿಸಿದ್ದಾರೆ. ಆಗ ಪಿರ್ಯಾದಿ ಅವರಿಂದ ತಮ್ಮ ತಂದೆಯವರಿಗೆ ತಪ್ಪಿಸಲು ಹೋದಾಗ ಇಬ್ಬರೂ ದೂಡಿ ಹಾಕಿದ್ದು, ಪಿರ್ಯಾದಿಯ ಎರಡು ಕಾಲಿನ ಮೊಣಗಂಟಿಗೆ ಗಾಯವಾಗಿ ರಕ್ತ ಬಂದಿದೆ. ಪಿರ್ಯಾದಿಯ ತಂದೆ ಎದೆ ನೋವು ಕಾಣಿಸಿಕೊಂಡು ಕೂಗಲು ಪ್ರಾರಂಬಿಸಿದ್ದು, ಆಪಾದಿತರು ಪಿರ್ಯಾದಿಗೆ ಉದ್ದೇಶಿಸಿ ಜೀವದ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನು ಓದಿ: Identification/ ಮೃತದೇಹದ ಗುರುತು ಪತ್ತೆ