ಕಾರವಾರ (Karwar) : ಶೇರ್‌ ಮಾರ್ಕೆಟ್‌ನಲ್ಲಿ (Share Market) ಹಣ ಹೂಡಿಕೆ ಮಾಡಿ ಅತಿ ಹೆಚ್ಚು ಲಾಭಗಳಿಸಬಹುದೆಂದು ಆಸೆಗೆ ಬಿದ್ದ ಗೃಹಿಣಿಯೋರ್ವಳು ೫೦.೭೩ ಲಕ್ಷ ರೂ. ಕಳೆದುಕೊಂಡಿರುವ ಬಗ್ಗೆ ಕಾರವಾರದ ಸಿಇಎನ್‌ ಅಪರಾಧ ಠಾಣೆಯಲ್ಲಿ (CEN Crime Station) ಐಟಿ ಕಾಯ್ದೆ (IT Act) ಅಡಿ ದೂರು ದಾಖಲಾಗಿದೆ (Case Registered).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಭಟ್ಕಳ (Bhatkal) ತಾಲೂಕಿನ ಮುರ್ಡೇಶ್ವರದ (Murdeshwar) ಕನ್ನಡ ಗಂಡು ಮಕ್ಕಳ ಶಾಲೆಯ ಹತ್ತಿರದ ನಿವಾಸಿಯೋರ್ವರು ಹಣಕಳಕೊಂಡವರು. ಎರಡು ವರ್ಷಗಳ ಹಿಂದೆ ಮಹಿಳೆಯ ಮೊಬೈಲ್‌ಗೆ ವಾಟ್ಸಪ್‌ ಸಂದೇಶವೊಂದು ಬಂದಿತ್ತು. ಶೇರ್‌ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಅತಿ ಹೆಚ್ಚು ಲಾಭ ಗಳಿಸಬಹುದು ಎಂಬ ಸಂದೇಶವಿತ್ತು. ಸಂದೇಶ ಬಂದ ಮೊಬೈಲ್‌ ಸಂಖ್ಯೆಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ವ್ಯಕ್ತಿ ತನ್ನ ಹೆಸರು ಸಚಿನ್‌ ಕರ್ನಲ್‌ ಎಂದು ಪರಿಚಯಿಸಿಕೊಂಡಿದ್ದ. ಶೇರ್‌ ಟ್ರೇಡಿಂಗ್‌ ಎಂಬ ಹೆಸರಿನ ಕಂಪನಿಯ ನಡೆಸುತ್ತಿರುವಾಗಿ ಹೇಳಿದ ಆತ, ತಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ, ಆ ಹಣವನ್ನು ಶೇರ್‌ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿ ಅತಿ ಹಣ ಗಳಿಸಬಹುದೆಂದು ಹೇಳಿದ್ದ.

ಇದನ್ನೂ ಓದಿ : ವಕೀಲನ ಮಾವನ ಮೇಲೆ ಆಟೋ ಚಾಲಕನಿಂದ ಹಲ್ಲೆ

ಇದಾದ ನಂತರದಲ್ಲಿ ಮಹಿಳೆಗೆ ಇನ್ನೊಂದು ಮೊಬೈಲ್‌ ಸಂಖ್ಯೆಯಿಂದ ಕರೆ ಬಂದಿದ್ದು, ಕರೆ ಮಾಡಿದ ವ್ಯಕ್ತಿ ಗುರುರಾಜ ಎಂದು ಹೇಳಿಕೊಂಡಿದ್ದ. ಸಚಿನ್‌ ಕರ್ನಲ್‌ ಮತ್ತು ತಾನು ಬ್ಯುಸಿನೆಸ್‌ ಪಾರ್ಟನರ್‌ ಆಗಿದ್ದು ಕಂಪನಿಗೆ ಹೂಡಿಕೆ ಮಾಡಿದ ನಂತರ ಬಂದ ಲಾಭಾಂಶದಲ್ಲಿ ಶೇ.೧೦ ಕಮಿಷನ್‌ ಕೊಡಬೇಕೆಂದು ತಿಳಿಸಿದ್ದ. ಇದಕ್ಕೆ ಒಪ್ಪಿಕೊಂಡ ಮಹಿಳೆಯು ಅವರು ಹೇಳಿದ ಬ್ಯಾಂಕ್‌ ಖಾತೆಗಳಿಗೆ ಎರಡು ವರ್ಷಗಳ ಅವಧಿಯಲ್ಲಿ ಹಣ ಹಂತವಾಗಿ ೫೦,೭೩,೬೦೦ ರು. ವರ್ಗಾವಣೆ ಮಾಡಿದ್ದಳು.

ಇದನ್ನೂ ಓದಿ : Video Call ಮಾಡಿ ವಿವಾಹಿತ ಮಹಿಳೆಯೆದುರು ಬೆತ್ತಲೆ; ದೂರು

ಆದರೆ ಗೃಹಿಣಿ  ಹಣ ಹೂಡಿಕೆ ಮಾಡಿ ೨ ವರ್ಷ ಕಳೆಯುತ್ತಾ ಬಂದರೂ ಸಹಾ ಅವರಿಗೆ ಯಾವುದೇ ಲಾಭಾಂಶದ ಹಣ ಬಂದಿರಲಿಲ್ಲ.  ಸಚಿನ ಹಾಗೂ ಗುರುರಾಜ ಇವರಿಗೆ ಪದೇ ಪದೇ ದೂರವಾಣಿ ಕರೆಮಾಡಿದರೂ ಕರೆಯನ್ನು ಸ್ವೀಕರಿಸದೇ ಮಹಿಳೆಯ ಮೊಬೈಲ ನಂಬರನ್ನು ಬ್ಲಾಕ್ ಲಿಸ್ಟ್ಗೆ ಹಾಕಿದ್ದಾರೆ. ಸಂಶಯ ಬಂದ ಮಹಿಳೆಗೆ ತಾವು ಮೋಸ ಹೋಗಿರುವುದು ಗೊತ್ತಾಗಿ ಕಾರವಾರದ ಸಿಇಎನ್‌ ಅಪರಾಧ ಠಾಣೆಯಲ್ಲಿ (CEN Crime Station) ದೂರು ದಾಖಲಿಸಿದ್ದಾರೆ. ಐಟಿ ಕಾಯ್ದೆ (IT Act) ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ :  ವಾಕರಸಾ ಸಂಸ್ಥೆಯಿಂದ ಹೆಚ್ಚುವರಿ ಬಸ್‌ ಸೇವೆ