ಕಾರವಾರ (Karwar): ತಾಲೂಕಿನ ಕೈಗಾ ಅಣುಸ್ಥಾವರಕ್ಕೆ (Kaiga Nuclear Power Station) ಸಂಬಂಧಿಸಿದ ಮಲ್ಲಾಪುರದ ಕೈಗಾ ಟೌನ್‌ಶಿಪ್‌ನಲ್ಲಿ (kaiga township) ಸೋಮವಾರ ಸಂಜೆ ಸಿಐಎಸ್‌ಎಫ್ (CISF) ಸಿಬ್ಬಂದಿ ಕರ್ತವ್ಯದಲ್ಲಿದ್ದಾಗ ಆಕಸ್ಮಿಕವಾಗಿ ಬಂದೂಕಿನಿಂದ ಗುಂಡು ಹಾರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬಿಹಾರದ (Bihar) ನಿವಾಸಿ ಹರೇಂದ್ರ ಕುಮಾರ್ (27) ಮೃತರು. ಅವರು ಮಲ್ಲಾಪುರ (Mallapur) ಎನ್‌ಪಿಸಿಐಎಲ್ ಟೌನ್‌ಶಿಪ್‌ನಲ್ಲಿ (kaiga township) ಎರ್ಟಿಗಾ ವಾಹನದಲ್ಲಿ ಇನ್ನೊಬ್ಬ ಸಿಐಎಸ್‌ಎಫ್ ಸಿಬ್ಬಂದಿ ಮತ್ತು ಕಾರು ಚಾಲಕರೊಂದಿಗೆ ಗಸ್ತು ಕರ್ತವ್ಯದಲ್ಲಿದ್ದರು. ಅವರು CISF ನ ಕ್ವಿಕ್ ರೆಸ್ಪಾನ್ಸ್ ತಂಡದ ಭಾಗವಾಗಿದ್ದರು. ಹರೇಂದ್ರ ಕುಮಾರ್ ಹಿಂಭಾಗದಲ್ಲಿ ಕುಳಿತಿದ್ದಾಗ ಆಕಸ್ಮಿಕವಾಗಿ ಬಂದೂಕು ಡಿಸ್ಚಾರ್ಜ್ ಆಗಿದ್ದು, ನೇರವಾಗಿ ಕುತ್ತಿಗೆಗೆ ಬಡಿದು ತಕ್ಷಣ ಸಾವನ್ನಪ್ಪಿದ್ದಾರೆ. ವಾಹನದಲ್ಲಿದ್ದ ಬೇರೆ ಯಾರಿಗೂ ಹಾನಿಯಾಗಿಲ್ಲ.
ಇದನ್ನೂ ಓದಿ : ಎಚ್ಚರ ತಪ್ಪಿ ಬಿದ್ದ ಯುವತಿ ಸಾವು
ಘಟನೆಯ ನಂತರ, ಸಿಐಎಸ್ಎಫ್ ಸಿಬ್ಬಂದಿ ಪರಸ್ಪರ ಗುಂಡು ಹಾರಿಸಿದ್ದಾರೆ ಎಂಬ ವದಂತಿಯು ಸಾರ್ವಜನಿಕರಲ್ಲಿ ಹರಡಿತು. ಇದು ಕೆಲ ಕಾಲ ಭಯದ ವಾತಾವರಣವನ್ನು ಸೃಷ್ಟಿಸಿತ್ತು. ಆದರೆ, ಪ್ರಾಥಮಿಕ ವರದಿಗಳ ಪ್ರಕಾರ ಇದೊಂದು ಅಪಘಾತ ಎಂದು ಹೇಳಲಾಗಿದೆ. ಗಾಯಾಳು ಹರೇಂದ್ರನನ್ನು ಪ್ರಥಮ ಚಿಕಿತ್ಸೆಗಾಗಿ ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
ಇದನ್ನೂ ಓದಿ : ನ.೧೩ರಂದು ಭಟ್ಕಳದಲ್ಲಿ ಬೃಹತ್ ಪ್ರತಿಭಟನೆ
ಎರ್ಟಿಗಾದಂತಹ (Ertiga) ಕೆಳಮಟ್ಟದ ವಾಹನಗಳಲ್ಲಿ ಲೋಡ್ ಗನ್ ಹಿಡಿದು ಕುಳಿತುಕೊಳ್ಳುವುದು ಸವಾಲಾಗಿರುವುದರಿಂದ ಬಂದೂಕುಗಳೊಂದಿಗೆ ಗಸ್ತು ನಡೆಸುವ ಸಿಬ್ಬಂದಿಗೆ ಎತ್ತರದ ವಾಹನಗಳನ್ನು ಒದಗಿಸಬೇಕು ಎಂಬ ಕೂಗು ಕೇಳಿಬರುತ್ತಿದೆ. ಇಂತಹ ಅವಘಡಗಳು ಬೇರೆಯವರಿಗೆ ಆಗದಂತೆ ತಡೆಯಲು ಕ್ರಿಯಾಶೀಲ ಸಿಬ್ಬಂದಿಗೆ ನಿಯೋಜಿಸಿರುವ ವಾಹನಗಳಲ್ಲಿ ಬದಲಾವಣೆ ತರುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಆಟೋರಿಕ್ಷಾದಿಂದ ಕೆಳಗೆ ಬಿದ್ದ ಬಾಲಕಗೆ ಗಾಯ