ಭಟ್ಕಳ (Bhatkal): “ಹೆಸರಾಯಿತು ಕರ್ನಾಟಕ” “ಉಸಿರಾಯಿತು ಕನ್ನಡ” ಶೀರ್ಷಿಕೆ ಅಡಿಯಲ್ಲಿ ಮೈಸೂರು ರಾಜ್ಯ ಕರ್ನಾಟಕವೆಂದು ನಾಮಕರಣವಾಗಿ ೫೦ ವಸಂತಗಳು ಪೂರೈಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಹೊರಡಿಸಿರುವ ಕರ್ನಾಟಕ ಸಂಭ್ರಮ (Karnataka Sambhrama)-೫೦ ರಥ ರವಿವಾರ ಭಟ್ಕಳ ಪಟ್ಟಣಕ್ಕೆ ಆಗಮಿಸಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪಟ್ಟಣದ ಶಂಸುದ್ದೀನ್ ಸರ್ಕಲ್ ಗೆ ಆಗಮಿಸಿದ ರಥಯಾತ್ರೆಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಗೊಂಡ ಸಮಾಜ ಧಕ್ಕೆ ಕುಣಿತ ಹಾಗೂ ಭಟ್ಕಳ ಝೇಂಕಾರ ಭರತನಾಟ್ಯ ವಿದ್ಯಾರ್ಥಿಗಳು ಪೂರ್ಣಕುಂಭ ಕಳಸದೊಂದಿಗೆ ಸ್ವಾಗತ ಮಾಡಿದರು. ತಾಯಿ ಭುವನೇಶ್ವರಿ ದೇವಿಗೆ ಪುಷ್ಪ ನಮನ ಅರ್ಪಿಸಿ ಪೂಜೆ ಸಲ್ಲಿಸಲಾಯಿತು. ನಂತರ ಮೆರವಣಿಗೆ ಚಾಲನೆ ನೀಡಲಾಯಿತು.
ಇದನ್ನೂ ಓದಿ : ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ
ಬಳಿಕ ಮಾತನಾಡಿದ ಸಹಾಯಕ ಆಯುಕ್ತೆ ನಯನ, ಕರ್ನಾಟಕ ಸರ್ಕಾರದ “ಹೆಸರಾಯಿತು ಕರ್ನಾಟಕ” “ಉಸಿರಾಯಿತು ಕನ್ನಡ” ೫೦ರ ಸಂಭ್ರಮ ಎಂಬ ಕನ್ನಡದ (Kannada) ರಥ ಭಟ್ಕಳಕ್ಕೆ ಆಗಮಿಸಿದೆ. ಈ ರಥ ಕರ್ನಾಟಕದ (Karnataka) ಸುತ್ತಮುತ್ತ ಸಂಚರಿಸುತ್ತ ಬರುತ್ತಿದೆ. ಇದು ನಮ್ಮ ಭಾವೈಕತೆಯ ಐಕತೆಯ ಸಂಕೇತವಾಗಿ ನಮ್ಮ ಕನ್ನಡವನ್ನು ಎಲ್ಲೆಡೆ ಪಸರಿಸಲಿ ಎಂದು ಹಾರೈಸುತ್ತೇನೆ ಎಂದರು.
ಇದನ್ನೂ ಓದಿ : ಅತಿಕ್ರಮಿತ ಚರಂಡಿ, ಪಾದಚಾರಿ ಮಾರ್ಗ ತೆರವಿಗೆ ಆಗ್ರಹ
ನಂತರ ಪ್ರಭಾರಿ ತಹಶೀಲ್ದಾರ ಅಶೋಕ ಭಟ್ ಮಾತನಾಡಿ, ಕರ್ನಾಟಕದ ಎಲ್ಲಾ ಸಮಸ್ತ ಜನತೆಗೆ ಕನ್ನಡದ ಬಗ್ಗೆ ಅಭಿಮಾನ ಬರಲಿ ಹಾಗೂ ನಮ್ಮ ರಾಜ್ಯದ ಗೌರವ ಹೆಚ್ಚಾಗಲಿ ಎನ್ನುವ ಉದ್ದೇಶದಿಂದ ಈ ರಥವನ್ನು ರಾಜ್ಯ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸಲು ಅವಕಾಶ ಮಾಡಿಕೊಟ್ಟಿದೆ. ನಿನ್ನೆ ಸಾಗರ (Sagar) ತಾಲೂಕಿನಿಂದ ಬಂದ ಈ ರಥವನ್ನು ನಾವು ಗೌರವಯುತವಾಗಿ ಸ್ವಾಗತ ಮಾಡಿಕೊಂಡಿದ್ದೆವು. ಇಂದು ಈ ರಥ ನಮ್ಮ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸಂಚರಿಸಿ. ಮುರುಡೇಶ್ವರದಲ್ಲಿ (Murudeshwar) ಇರಲಿದೆ. ನಾಳೆ ಸೋಮವಾರದಂದು ರಥವನ್ನು ಗೌರವಯುತವಾಗಿ ನಮ್ಮ ಪಕ್ಕದ ಹೊನ್ನಾವರ (Honnavar) ತಾಲೂಕಿಗೆ ಬೀಳ್ಕೊಡಲಿದ್ದೇವೆ ಎಂದರು.
ಇದನ್ನೂ ಓದಿ : ಗೂಡಂಗಡಿಗಳ ಸ್ಥಳಾಂತರಕ್ಕೆ ಆಗ್ರಹ
ಇದಕ್ಕೂ ಪೂರ್ವದಲ್ಲಿ ಪ್ರವಾಸಿ ಮಂದಿರದಿಂದ ಹೊರಟ ಮೆರವಣಿಗೆ ಭಟ್ಕಳ ಶಂಸುದ್ದೀನ್ ಸರ್ಕಲ್ ಗೆ ಬಂದು ತಲುಪಿತು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಭಟ್ಕಳ ಕ.ಸಾ.ಪ. ಅಧ್ಯಕ್ಷ ಗಂಗಾಧರ ನಾಯ್ಕ, ಕ.ಸಾ.ಪ. ಜಿಲ್ಲಾ ಪ್ರಮುಖ ಪಿ.ಆರ್.ನಾಯ್ಕ, ಸಾಹಿತಿ ಶಂಭು ಹೆಗ್ಡೆ, ಶ್ರೀಧರ ಶೇಟ, ದೈಹಿಕ ಶಿಕ್ಷಕ ಪ್ರಕಾಶ ಶಿರಾಲಿ, ಪುರಸಭೆ ಆರೋಗ್ಯಾಧಿಕಾರಿ ಸೂಜಿಯ ಸೋಮನ್ ಮುಂತಾದವರು ಉಪಸ್ಥಿತರಿದ್ದರು. ಶನಿವಾರ ಸಂಜೆ ಸಾಗರದಿಂದ ಆಗಮಿಸಿದ ರಥವನ್ನು ಅಧಿಕಾರಿಗಳು ಭಟ್ಕಳ ಗಡಿ ಭಾಗದ ನಾಗವಳ್ಳಿಯಲ್ಲಿ ಸ್ವಾಗತಿಸಲಾಗಿತ್ತು.
ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್ಬುಕ್ ನಲ್ಲಿ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : ಮುರುಡೇಶ್ವರದಲ್ಲಿ ಅಂತಾರಾಷ್ಟ್ರೀಯ ಬಂದರು ನಿರ್ಮಾಣ