ಕಾರವಾರ (Karwar) : ತಾಲೂಕಿನ ಶೇಜವಾಡದ ಶ್ರೀ ಶೆಜ್ಜೇಶ್ವರ ದೇವಸ್ಥಾನದ ಕಾರ್ತಿಕ ಜಾತ್ರಾ ಮಹೋತ್ಸವವು (kartikotsava) ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬೆಳಿಗ್ಗೆ ಶ್ರೀ ದೇವರ ಪಲ್ಲಕ್ಕಿಯು ದೇವಸ್ಥಾನದಿಂದ ಮೆರವಣಿಗೆ ಹೊರಟು ವನಕ್ಕೆ ತೆರಳಿ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ಮಧ್ಯಾಹ್ನ ವನಭೋಜನ ನಡೆದು ಸಂಜೆ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಸಂಜೆ ೬ ಗಂಟೆಗೆ ಪಲ್ಲಕ್ಕಿ ದೇವಸ್ಥಾನದ ಆವರಣಕ್ಕೆ ಆಗಮಿಸಿದಾಗ ದೇವಸ್ಥಾನದ ಆವರಣದಲ್ಲಿ ನಡೆದ ದೀಪೋತ್ಸವ ನೆರೆದ ಭಕ್ತರನ್ನು ರೋಮಾಂಚನಗೊಳಿಸಿತು. ಬೀದಿಯಲ್ಲಿ ಬಿಡಿಸಲಾದ ಬಗೆ ಬಗೆಯ ರಂಗೋಲಿಗಳು, ವಿದ್ಯುದ್ದೀಪಗಳ ಅಲಂಕಾರ ಗಮನ ಸೆಳೆದವು.
ಇದನ್ನೂ ಓದಿ : ಗ್ಯಾರಂಟಿಯಿಂದ ಅಭಿವೃದ್ಧಿ ನಿಂತಿದೆಯೆ?
ಬಳಿಕ ಶ್ರೀ ದೇವರ ಲಾಲಕಿ ಮೆರವಣಿಗೆ ಮೂಲಕ ಭಕ್ತರ ಸೇವೆ ಸ್ವೀಕರಿಸುತ್ತ ದೇವಸ್ಥಾನದ ಕೆರೆಗೆ ತೆರಳಿ ಅಲ್ಲಿ ಶ್ರೀ ದೇವರ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿತು. ಬಳಿಕ ಮರಳಿ ದೇವಸ್ಥಾನಕ್ಕೆ ಆಗಮಿಸಿ ಮಹಾಪೂಜೆಯ ಬಳಿಕ ಕಾರ್ತಿಕೋತ್ಸವ (kartikotsava) ಸಂಪನ್ನಗೊಂಡಿತು. ಶ್ರೀ ಶೆಜ್ಜೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ದೇವಸ್ಥಾನ ಸಮಿತಿಯ ಅರ್ಚಕರು, ಒಳ ನೌಕರರ, ಹೊರ ನೌಕರರು ಹಾಗೂ ಊರ ನಾಗರಿಕರು ವಿಶೇಷ ಸಹಕಾರ ನೀಡಿದರು.
ವಿಡಿಯೋ ಸಹಿತ ಇದನ್ನೂ ಓದಿ : ಮೀನು ಲಾರಿಯಲ್ಲಿ ಜಾನುವಾರು ಸಾಗಾಟ !