ಭಟ್ಕಳ: ತಾಲೂಕಿನ ಇತಿಹಾಸ ಪ್ರಸಿದ್ದ ಶಕ್ತಿಕ್ಷೇತ್ರವಾದ ಸೋಡಿಗದ್ದೆ (Sodigadde) ಶ್ರೀ ಮಹಾಸತಿ ದೇವಿಯ ಜಾತ್ರಾ ಮಹೋತ್ಸವವೂ ಶುಕ್ರವಾರದಂದು ವಿಜೃಂಭಣೆಯಿಂದ ಆರಂಭವಾಗಿದ್ದು, ಮೊದಲ ದಿನ ಹಾಲಹಬ್ಬ ಆಚರಿಸಿದ ಭಕ್ತರು 2ನೇ ದಿನವಾದ ಶನಿವಾರದಂದು ಸಂಪ್ರದಾಯದ ಕೆಂಡಸೇವೆ (Kenda Seve) ಹರಕೆಯಲ್ಲಿ ಶ್ರದ್ಧಾ ಭಕ್ತಿಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.

ಈ ಸುದ್ದಿಯ ವಿಡಿಯೋವನ್ನು ಇನ್ಸ್ಟಾಗ್ರಾಂ, ಯೂಟ್ಯೂಬ್ ಮತ್ತು  ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಉತ್ತರ ಕನ್ನಡ ಜಿಲ್ಲೆಯ ಅತ್ಯಂತ ದೊಡ್ಡ ಜಾತ್ರೆಗಳಲ್ಲಿ ಒಂದಾದ ಸೋಡಿಗದ್ದೆ ಅಮ್ಮನವರ ಭಟ್ಕಳದ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರೆಯಲ್ಲಿ ದೇವರನ್ನು ನಂಬಿದ ಭಕ್ತರು ಕಷ್ಟಕಾಲದಲ್ಲಿ ಹೇಳಿಕೊಂಡಿದ್ದ ಸಂಪ್ರದಾಯದ ಕೆಂಡಸೇವೆಯ ಹರಕೆಯನ್ನು ಬೆಳಿಗ್ಗೆ ಸಹಸ್ರಾರಕ್ಕೂ ಅಧಿಕ ಭಕ್ತರು ದೇವಿಯ ಎದುರಿನ ಆವರಣದಲ್ಲಿ ಸಲ್ಲಿಸಿದರು.

ವಿಡಿಯೋ ಸಹಿತ ಇದನ್ನು ಓದಿ: Sodigadde Jathre/ ಸೋಡಿಗದ್ದೆ ಜಾತ್ರೆ ಆರಂಭ

ಶನಿವಾರದಂದು ಬೆಳಿಗ್ಗೆ ದೇವಸ್ಥಾನದ ಮುಂಬಾಗದ ಪ್ರಾಂಗಣದಲ್ಲಿ ಸಿದ್ದಪಡಿಸಿದ ಆಳೆತ್ತರದ ಕಟ್ಟಿಗೆ ರಾಶಿಯಿಂದಾಗುವ ಕೆಂಡವನ್ನು ಹಾಯುವುದು ಕೂಡ ರೋಮಾಂಚನವೇ ಸರಿ. ಈ ಸಂದರ್ಭದಲ್ಲಿ ಭಕ್ತರಿಂದ ಸೋಡಿಗದ್ದೆ ಶ್ರೀ ಮಹಾಸತಿ ದೇವಿಗೆ ಸಲ್ಲಿಸುವ ಹರಕೆಗಳಲ್ಲಿ ಸಂಪ್ರದಾಯದ ಕೆಂಡಸೇವೆ ಪ್ರಮುಖವಾದುದು. ತಮ್ಮ ಕಷ್ಟ ಪರಿಹಾರವಾದಲ್ಲಿ ದೇವಿಗೆ ಕೆಂಡಸೇವೆ ಸಲ್ಲಿಸುವುದಾಗಿ ಹೇಳಿಕೊಂಡಿದ್ದ ಭಕ್ತರು ಕೆಂಡದ ಮೇಲೆ ನಡೆಯುವ ಮೂಲಕ ಹರಕೆಯನ್ನು ಶ್ರದ್ದಾಭಕ್ತಿಯಿಂದ ಸಲ್ಲಿಸಿದರು.

ಇದನ್ನು ಓದಿ: Haluhabba/ ಹಾಲಾಡಿಯ ಆದಿ ಮರಳುಚಿಕ್ಕು ದೈವಸ್ಥಾನದಲ್ಲಿ ಹಾಲುಹಬ್ಬ, ಗೆಂಡೋತ್ಸವ ಸಂಪನ್ನ

ವಿಶೇಷ ಕೆಂಡ ಸೇವೆ ಹರಕೆ: ಈ ಕೆಂಡಸೇವೆಯ ವಿಶೇಷವೆಂದರೆ ಭಕ್ತರ ಎಲ್ಲಾ ಕಷ್ಟ ಪಾರ್ಪಣ್ಯಗಳನ್ನು ಪರಿಹರಿಸುವದಾಗಿದ್ದು, ಹರಕೆ ಹೊತ್ತ ಭಕ್ತರು ಅವರ ಸಮಸ್ಯೆ ಪರಿಹಾರವಾದ ನಂತರ ಈ ಜಾತ್ರೆಯ ಕೆಂಡ ಸೇವೆಯನ್ನು ಮಾಡಲಿದ್ದು ಮುಂದಿನ ದಿನದಲ್ಲಿ ಕುಟುಂಬಕ್ಕಾಗಲಿ ವೈಯಕ್ತಿಕವಾಗಲಿ ಯಾವುದೇ ಕಷ್ಟಬಾರದಿರಲಿ ಎಂದು ಬೇಡಿಕೊಳ್ಳುತ್ತಾರೆ. ಪ್ರೇತಬಾದೆ, ಸಂತಾನ ಭಾಗ್ಯ, ಉದ್ಯೋಗ, ಕುಟುಂಬಗಳಲ್ಲಿನ ಸಮಸ್ಯೆ, ಕಳ್ಳತನ, ರೋಗ ರುಜನಿಗಳ ಪರಿಹಾರವೂ ಇಲ್ಲಿಗೆ ಈಗಾಗಲೇ ಹರಕೆ ಹೊತ್ತು ಪರಿಹಾರ ಸಿಕ್ಕಿ ಹರಕೆ ಸಲ್ಲಿಸಿದ ಸಾಕಷ್ಟು ಉದಾಹರಣೆಗಳಿವೆ.

ಇದನ್ನು ಓದಿ: Lawyer’s car/ ವಕೀಲನ ಕಾರಿಗೆ ಲಾರಿ ಡಿಕ್ಕಿ

ದಿನದಿಂದ ದಿನಕ್ಕೆ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಶಕ್ತಿ ರಾಜ್ಯದ ಮೂಲೆ ಮೂಲೆಯ ಭಕ್ತರನ್ನು ಆಕರ್ಷಿಸುತ್ತಿದ್ದು, ಜಾತ್ರೆಯ ವೇಳೆ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣಸಿಗುತ್ತಿದೆ. ಇನ್ನು ಭಟ್ಕಳದಲ್ಲಿ ಸೇವೆ ಸಲ್ಲಿಸಿದ ಇಲಾಖೆಯ ಕೆಲ ಅಧಿಕಾರಿಗಳು ಸಹ ಅವರ ಮನಸ್ಸಿನ ಇಷ್ಟಾರ್ಥಕ್ಕೆ ಕೆಂಡ ಸೇವೆ ಮಾಡಿರುವದುಂಟು. ಈ ವರ್ಷ ಮಹಿಳೆಯರು, ಮಕ್ಕಳ ಸಂಖ್ಯೆಯೇ ಹೆಚ್ಚಿದ್ದು, ದೇವಿಯ ಹರಕೆಯನ್ನು ಕೆಂಡಸೇವೆಯ ಮೂಲಕ ಸಲ್ಲಿಸಿದರು.

ಇದನ್ನು ಓದಿ: Forest watchman/ ಬೈಕಿನಿಂದ ಬಿದ್ದು ಅರಣ್ಯ ಇಲಾಖೆಯ ವಾಚ್ ಮ್ಯಾನ್ ಸಾವು 

ಜಾತ್ರಾ ಪ್ರಾರಂಭವಾಗಿ ಎರಡು ದಿನಗಳಾಗಿದ್ದು, ಈಗಲೇ ದೇವಿಯ ದರ್ಶನಕ್ಕೆ ಕಿಕ್ಕಿರುದು ಸೇರುತ್ತಿರುವ ಭಕ್ತರ ಸಂಖ್ಯೆ ದೇವಿಯ ಮಹಾತ್ಮೆಯನ್ನು ತಿಳಿಸುತ್ತದೆ. ಸೋಡಿಗದ್ದೆ ಜಾತ್ರೆಗೆ ದೂರದ ಊರುಗಳಿಂದ ಬರುವ ಭಕ್ತರ ಜತೆಗೆ ಸ್ಥಳೀಯವಾಗಿ ಜಾತ್ರೆಗೆ ತೆರಳುವ ಭಕ್ತರಿಂದ ಸಂಜೆಯಾದೊಡನೆ ಸೋಡಿಗದ್ದೆಯಲ್ಲಿ ಸಾವಿರಕ್ಕೂ ಅಧಿಕ ಜನರು ದೇವಿಯ ದರ್ಶನಕ್ಕೆ ತೆರಳುತ್ತಿದ್ದಾರೆ. ಜಾತ್ರೆಯ ಕೆಂಡ ಸೇವೆಗೆ, ಬರುವಂತಹ ಎಲ್ಲಾ ಭಕ್ತರಿಗೆ ದೇವಸ್ಥಾನದಲ್ಲಿ ಸಾಕಷ್ಟು ಸ್ವಯಂ ಸೇವಕರು ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಿದ್ದು, ಭಕ್ತರಿಗಾಗಿ ಮಜ್ಜಿಗೆ, ಪಾನಕವನ್ನು ವಿತರಿಸಿದ್ದಾರೆ.

ಇದನ್ನು ಓದಿ: School children/ ಠಾಣೆಗೆ ಬಂದ ಶಾಲಾ ಮಕ್ಕಳು

ಮೂರನೇ ದಿನದಿಂದ ನಾಲ್ಕು ದಿನಗಳ ಕಾಲ ಸೋಡಿಗದ್ದೆ ಶ್ರೀ ಮಹಾಸತಿ ದೇವಿಗೆ ಭಕ್ತರಿಂದ ತುಲಾಭಾರ ಹರಕೆಯ ಸೇವೆಗಳು ನಡೆಯುತ್ತವೆ. ಇನ್ನು ಈ ದೇವಿಗೆ ಸ್ವತಃ ಪೂಜೆ ಮಾಡಬೇಕೆಂದಿದ್ದರೆ ಸ್ವಚ್ಛ ಮನಸ್ಸಿನಿಂದ ಸ್ನಾನ ಮಾಡಿ, ಶುಭ್ರ ವಸ್ತ್ರತೊಟ್ಟ ಯಾರೂ ಬೇಕಾದರೂ ಇಲ್ಲಿ ಪೂಜೆ ಸಲ್ಲಿಸಬಹುದಾಗಿದೆ. ನ್ಯಾಯ ತೀರ್ಮಾನ (ಉಯಿಲು ಕೊಡುವುದು) ಕೂಡ ಈ ಕ್ಷೇತ್ರದ ಮತ್ತೊಂದು ವಿಶೇಷವಾಗಿದೆ.

ಇದನ್ನು ಓದಿ: Sodigadde/ ಸೋಡಿಗದ್ದೆ ದೇವಸ್ಥಾನದ ನೀಲನಕ್ಷೆ ಬಿಡುಗಡೆ, ನಿಧಿ ಸಂಗ್ರಹಕ್ಕೆ ಚಾಲನೆ

ಒಟ್ಟಾರೆ, ಬಿಸಿ ಬಿಸಿ ಬೆಂಕಿಯ ಕೆಂಡಗಳನ್ನು ಹಾದು ದೇವಿಗೆ ಸೇವೆ ಸಲ್ಲಿಸುವುದರ ಮೂಲಕ ಹರಕೆಯನ್ನು ಭಕ್ತರು ತೀರಿಸುತ್ತಿದ್ದರೆ, ಇನ್ನೊಂದು ಕಡೆ ಕೆಂಡ ಸೇವೆಯಲ್ಲಿ ಭಾಗಿಯಾಗುವ ಎಲ್ಲರನ್ನು ದೇವಿ ರಕ್ಷಿಸುತ್ತಾಳೆಂಬ ನಂಬಿಕೆ ಸದಾ ಇಲ್ಲಿನ ಭಕ್ತ ವೃಂದದಲ್ಲಿ ದೃಢವಾಗಿದೆ.

ಇದನ್ನು ಓದಿ: Online fraud/ ಕೆಲಸ ಕೊಡಿಸುವ ನೆಪದಲ್ಲಿ ಶಿಕ್ಷಕಗೆ ವಂಚನೆ