ಭಟ್ಕಳ: ಕರ್ನಾಟಕ (Karnataka) ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ (Bengaluru) ಯಶವಂತಪುರದಲ್ಲಿನ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ೫ನೇ ರಾಜ್ಯ ಮಟ್ಟದ (State Level) ಕಿಕ್ ಬಾಕ್ಸಿಂಗ್ (Kick Boxing) ಸ್ಪರ್ಧೆಯಲ್ಲಿ ಭಟ್ಕಳ (Bhatkal) ತಾಲೂಕಿನ ನಾಗಶ್ರೀ ಮಾರ್ಷಲ್ ಆರ್ಟ್ಸ್ (Martial Arts) ಮತ್ತು ಫಿಟ್ನೆಸ್ ಅಕಾಡೆಮಿಯ (Fitness Academy) ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

೭ರಿಂದ ೯ ವರ್ಷ ವಯೋಮಿತಿಯ -೨೧ ಕೆಜಿ ವಿಭಾಗದ ಪಾಯಿಂಟ್ ಫೈಟ್ ನಲ್ಲಿ ಧನ್ವಿತಾ ವಾಸು ಮೊಗೇರ ಬೆಳ್ಳಿಯ ಪದಕ, ಪ್ರಣವಿ ರಾಮಚಂದ್ರ ಕಿಣಿ ಪಾಯಿಂಟ್ ಫೈಟ್ ವಿಭಾಗದಲ್ಲಿ ಚಿನ್ನದ ಪದಕ ಮತ್ತು ಲೈಟ್ ಕಾಂಟ್ಯಾಕ್ಟ್ ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ. ೧೦ರಿಂದ ೧೨ ವರ್ಷ ವಯೋಮಿತಿಯ +೪೭ ಕೆಜಿ ಪಾಯಿಂಟ್ ಫೈಟ್ ವಿಭಾಗದಲ್ಲಿ ಶಿವ ಸಂತೋಷ್ ನಾಯ್ಕ ಚಿನ್ನದ ಪದಕ ಪಡೆದುಕೊಂಡರೆ, -೩೨ ಕೆಜಿ ವಿಭಾಗದ ಪಾಯಿಂಟ್ ಫೈಟ್ ನಲ್ಲಿ ರಿಹಾನ್ ಖಾನ್ ಕಂಚಿನ ಪದಕ ಗಳಿಸಿದ್ದಾನೆ.  ಪದಕ ಗೆದ್ದ ಎಲ್ಲಾ ವಿದ್ಯಾರ್ಥಿಗಳು ಚೆನ್ನೈನಲ್ಲಿ ನಡೆಯುವ ರಾಷ್ಟ್ರಮಟ್ಟದ (National Level) ಕಿಕ್ ಬಾಕ್ಸಿಂಗ್ (Kick Boxing) ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: Bhatkal Municipal Council/ ಭಟ್ಕಳ ನಗರಸಭೆ ಸೇರಲು ಹೆಬಳೆ ಗ್ರಾ ಪಂ ವಿರೋಧ