ಭಟ್ಕಳ: ಹನೀಫಾಬಾದ್ 1ನೇ ಕ್ರಾಸ್‌ನಿಂದ ಬಾಲಕಿಯೋರ್ವಳನ್ನು ಬಲವಂತವಾಗಿ ವಾಹನಕ್ಕೆ ಕೂರಿಸಿ ಪರಾರಿಯಾಗಿದ್ದ ಪ್ರಕರಣದಲ್ಲಿ ಭಟ್ಕಳ (Bhatkal) ಗ್ರಾಮೀಣ ಪೊಲೀಸರು ತ್ವರಿತ ಕಾರ್ಯಾಚರಣೆಗೆ ಇಳಿದು ಇಬ್ಬರನ್ನು ಬಂಧಿಸಿ, ಬಾಲಕಿಯನ್ನು ರಕ್ಷಿಸಿದ್ದಾರೆ (minor rescued).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹಾವೇರಿ (Haveri) ಜಿಲ್ಲೆಯ ಶಿವಪುರದ ಆಸೀಫ್ ಜಮಾಲಸಾಬ್ ಹಾಗೂ ಭಟ್ಕಳದ (Bhatkal) ಜಾಲಿ ತಗ್ಗರಗೋಡ ನಿವಾಸಿ ಮೊಹ್ಮದ್ ಮೋಸಿನ್ ಮೊಹ್ಮದ್ ರಿಜ್ವಾನ್ ಬಂಧಿತರು. ಬುಲೆರೋ ಪಿಕ್‌ಅಪ್ ವಾಹನದಲ್ಲಿ ಬಾಲಕಿಯನ್ನು ಕೊಂಡೊಯ್ಯಲು ಯತ್ನಿಸಿದ ಆರೋಪಿಗಳ ವಿರುದ್ಧ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು.

ಇದನ್ನು ಓದಿ: kidnap/ ಭಟ್ಕಳದಲ್ಲಿ ಅಪ್ರಾಪ್ತ ಬಾಲಕಿ ಅಪಹರಣ

ಸಿಪಿಐ ಮಂಜುನಾಥ ಲಿಂಗಾರೆಡ್ಡಿ ಅವರ ಮಾರ್ಗದರ್ಶನದಲ್ಲಿ ಎಎಸ್‌ಐ ನಾರಾಯಣ, ಹೆಡ್ ಕಾನ್‌ಸ್ಟೇಬಲ್ ನಾರಾಯಣ ಮತ್ತು ಸಿಬ್ಬಂದಿ ಅಕ್ಷಯಕುಮಾರ ಅವರನ್ನು ಒಳಗೊಂಡ ತಂಡ ಕೇವಲ ಆರು ಗಂಟೆಯೊಳಗೆ ಆರೋಪಿಗಳನ್ನು ಮಾವಿನಗುಂಡಿ ಬಳಿ ಪತ್ತೆಹಚ್ಚಿ ಬಾಲಕಿಯನ್ನು ಸುರಕ್ಷಿತವಾಗಿ ಪಾಲಕರಿಗೆ ಒಪ್ಪಿಸಿದ್ದಾರೆ (minor rescued). ಗ್ರಾಮೀಣ ಠಾಣಾ ಪೊಲೀಸರ ಕಾರ್ಯಾಚರಣೆಗೆ ಉತ್ತರ ಕನ್ನಡ (Uttara Kannada) ಜಿಲ್ಲಾ ಎಸ್‌ಪಿ ದಿಲೀಪನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಕರಣ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದೆ.

ಇದನ್ನೂ ಓದಿ: Karate tournament/ ಕರಾಟೆ ಪಂದ್ಯಾವಳಿಯಲ್ಲಿ ಭಟ್ಕಳದ ವಿದ್ಯಾರ್ಥಿಗಳ ಸಾಧನೆ