ಶಿವಮೊಗ್ಗ (Shivamogga) : ಇಲ್ಲಿನ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ (Narayan Hospital) ವೈದ್ಯರು ಒಂದೇ ದಿನದಲ್ಲಿ ಒಳ ಭಾಗದ ಅರ್ಧ ಮೊಣಕಾಲು ಬದಲಾವಣೆ (Knee Replacements) ಐದು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಿ ವಿಶೇಷ ಸಾಧನೆ ಮಾಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈ ಶಸ್ತ್ರಚಿಕಿತ್ಸೆಗಳನ್ನುಎಲಬು, ಕೀಲು ಶಸ್ತ್ರಚಿಕಿತ್ಸಕ ಡಾ. ಅಭಿಷೇಕ ಎಂ.ಬಿ ನೇತೃತ್ವದ ತಜ್ಞರ ತಂಡ ಮತ್ತು ಅನಸ್ತೇಶಿಯ ತಜ್ಞರಾದ ಡಾ. ಅಜಿತ್ ಶೆಟ್ಟಿ ಹಾಗೂ ಡಾ. ಚಕ್ರವರ್ತಿ ಸೊಂಡೂರು ಅವರ ಸಹಯೋಗದಲ್ಲಿ ಯಶಸ್ವಿಯಾಗಿ ನೆರವೇರಿಸಲಾಗಿದೆ. ಈ ಮಹತ್ವದ ಸಾಧನೆ ಮತ್ತು ವಿಶಿಷ್ಟ ಶಸ್ತ್ರಚಿಕಿತ್ಸಾ ಪ್ರಯತ್ನವು ಕರ್ನಾಟಕದಲ್ಲಿ ಖಾಸಗಿ ಆಸ್ಪತ್ರೆ ವಲಯದಲ್ಲಿ ಮೊಟ್ಟಮೊದಲ ಬಾರಿಗೆ ನಡೆದದ್ದುವಿಶೇಷ. ೫೦ ರಿಂದ ೭೫ ವರ್ಷ ವಯೋಮಿತಿಯಲ್ಲಿರುವ ಐದು ರೋಗಿಗಳು ಈ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಯಾವುದೇ ನೋವು ಇಲ್ಲದೆ ದೈನಂದಿನ ಚಟುವಟಿಕೆಗಳನ್ನು ಪುನಃ ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ : ಮುರ್ಡೇಶ್ವರದಲ್ಲಿ ಅನಧಿಕೃತ ಗೂಡಂಗಡಿಗಳ ತೆರವು
ಡಾ. ಅಭಿಷೇಕ ಎಂ.ಬಿ ಈ ಶಸ್ತ್ರಚಿಕಿತ್ಸೆಯ ಬಗ್ಗೆ ಮಾತನಾಡುತ್ತಾ, “ ಈ ಶಸ್ತ್ರಚಿಕಿತ್ಸೆ ಕಡಿಮೆ ಜಟಿಲತೆ ಹೊಂದಿದೆ. ಅಂದರೆ ಇಲ್ಲಿ ದೇಹದಲ್ಲಿ ಯಾವುದೇ ದೊಡ್ಡ ಛೇಧನ ವಿಲ್ಲದೆ ನೇರವೇರಿಸಬಹುದಾದ ಶಸ್ತ್ರ ಚಿಕಿತ್ಸೆಯಾಗಿದೆ. ಇದು ಮೊಣಕಾಲಿನ ಒಳಭಾಗದ (ಮೀಡಿಯಲ್ ಕಾಂಪಾರ್ಟ್‌ಮೆಂಟ್) ಅಸ್ಥಿ ಸಂಧಿವಾತದಿಂದ ಬಳಲುವವರಿಗೆ ಉಪಯುಕ್ತವಾಗಿದೆ. ಕ್ರಿಯಾಶೀಲ ಜೀವನಶೈಲಿ ನಡೆಸಲು, ಕ್ರೀಡೆಗಳಲ್ಲಿ ಭಾಗವಹಿಸಲು ಅಥವಾ ಸಾಹಸಮಯ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಹಿರಿಯ ವಯಸ್ಸಿನವರಿಗೆ ಇದು ಸೂಕ್ತವಾಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ : ಉಡುಪಿಯಲ್ಲಿ ಉತ್ತರ ಕನ್ನಡದ ಮೀನುಗಾರ ಸಾವು
ಈ ಎಲ್ಲಾ ರೋಗಿಗಳು ಒಂದೇ ಕಾಲಿನಲ್ಲಿ ಸಂಧಿವಾತದ ಸಮಸ್ಯೆ ಯಿಂದ ಬಳಲುತ್ತಿದ್ದರು ಎಂದು ಹೇಳಿದ ಡಾ. ಅಭಿಷೇಕ್. ” ಈ ಚಿಕಿತ್ಸೆಯಲ್ಲಿ, ಸ್ಥಿರ ಪ್ಲಾಸ್ಟಿಕ್ ಬೇರಿಂಗ್ ಮತ್ತು ಮೊಬೈಲ್ ಪ್ಲಾಸ್ಟಿಕ್ ಬೇರಿಂಗ್ ಎಂಬ ಎರಡು ಪ್ರಕಾರಗಳಿವೆ. ಮೊಬೈಲ್ ಬೇರಿಂಗ್ ಪ್ರಕಾರ ದೀರ್ಘಕಾಲದ ಬಾಳಿಕೆ ಹೊಂದಿದೆ. ಈ ಚಿಕಿತ್ಸೆಗೆ ಒಳಪಟ್ಟ ರೋಗಿಯು ಶೀಘ್ರ ಗುಣಮುಖನಾಗುವದಲ್ಲದೆ, ರೋಗಿಯು ಯಾವುದೇ ತೊಂದರೆ ಇಲ್ಲದೆ ತನ್ನ ದೈನಂದಿನ ಕಾರ್ಯಗಳನ್ನು ಮಾಡಬಹುದಾಗಿದೆ ಎಂದರು.
ಇದನ್ನೂ ಓದಿ : Editorial/ ಪ್ರವಾಸೋದ್ಯಮಿಗಳ ಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ
“ನಾವು ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಕಳೆದ ವರ್ಷದಿಂದ ಮೊಬೈಲ್ ಬೇರಿಂಗ್ ಒಳ ಭಾಗದ ಅರ್ಧ ಮೊಣಕಾಲು ಬದಲಾವಣೆ (Knee Replacements) ಶಸ್ತ್ರಚಿಕಿತ್ಸೆ ಗಳನ್ನು ಮಾಡುತ್ತಿದ್ದು, ರೋಗಿಗಳು ಯಾವುದೇ ನೋವಿಲ್ಲದೆ ಹಾಗೂ ಚಲನಾ ಸಾಮರ್ಥ್ಯ ಕುಂದದೆ ಅತ್ಯಂತ ಚೇತರಿಕೆಯಿಂದ ತಮ್ಮ ದೈನಂದಿನ ಕಾರ್ಯಗಳನ್ನು ಮಾಡುತ್ತಿದ್ದಾರೆ. ಈ ಶಸ್ತ್ರಚಿಕಿತ್ಸೆ ಮಿನಿಮಲಿ ಇನವೇಸಿವ್ ಆಗಿರುವದರಿಂದ ಹಾಗೂ ಕಡಿಮೆ ಸಮಯ ತೆಗೆದುಕೊಳ್ಳುವದರಿಂದ ಒಂದೇ ದಿನದಲ್ಲಿ ನಿರಂತರ ಐದು ಶಸ್ತ್ರಚಿಕಿತ್ಸೆಗಳನ್ನು ನಿರ್ವಹಿಸಲು ಸಾಧ್ಯವಾಗಿದೆ ಎಂದು ಡಾ.ಅಭಿಷೇಕ ಹೇಳಿದ್ದಾರೆ.
ಇದನ್ನೂ ಓದಿ : ಉ.ಕ. ನಕಲಿ ಪ್ರಮಾಣಪತ್ರ ಹೊಂದಿರುವವರ ಸ್ವರ್ಗ