ಮೈಸೂರು (Mysuru) : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ (Konkani Academy) ಮತ್ತು ಮೈಸೂರಿನ (Mysore) ಕೊಂಕಣಿ ಕ್ರಿಶ್ಚಿಯನ್ ಅಸೋಸಿಯೇಷನ್ ಸಂಯುಕ್ತಾಶ್ರಯದಲ್ಲಿ ಗೌರವ ಪ್ರಶಸ್ತಿ-೨೦೨೪ಮತ್ತು ಪುಸ್ತಕ ಪ್ರಶಸ್ತಿ-೨೦೨೪ (Academy Award) ಅನ್ನು ಮೈಸೂರಿನ ವಿಜಯನಗರ ೨ನೇ ಹಂತದಲ್ಲಿರುವ ಕೊಂಕಣ ಭವನದಲ್ಲಿ ಮಾ.೨೩ರಂದು ಸಂಜೆ ೫.೩೦ಕ್ಕೆ ಆಯೋಜಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕೊಂಕಣಿ ಸಾಹಿತ್ಯ ಅಕಾಡೆಮಿಯು ತನ್ನ ಗೌರವ ಪ್ರಶಸ್ತಿ-೨೦೨೪ಕ್ಕೆ (Academy Award) ಮಂಗಳೂರಿನ (Mangaluru) ಪ್ಯಾಟ್ರಿಕ್ ಕ್ಯಾಮಿಲ್ ಮೊರಾಸ್ ಮತ್ತು ಜೋಯಲ್ ಪೆರಿಯರಾ ಹಾಗೂ ಉತ್ತರ ಕನ್ನಡದ (Uttara Kannada) ಹಳಿಯಾಳದ (Haliyal) ಸೋಬಿನಾ ಮೋತೇಶ್ ಕಾಂಬ್ರೇಕರ ಅವರನ್ನು ಆಯ್ಕೆ ಮಾಡಿದೆ. ಮಂಗಳೂರಿನ ಫೆಲ್ಸಿ ಲೋಬೋ ಅವರ ಕೊಂಕಣಿ ಕವನಗಳ ಸಂಕಲನವಾದ ಪಾಲ್ವ ಪೊಂತ್ ಮತ್ತು ಕಾರ್ಕಳದ (Karkala) ವಲೇರಿಯನ್ ಸಿಕ್ವೇರಾ ಅವರ ಕೊಂಕಣಿ ಲೇಖನಗಳ ಸಂಗ್ರಹವಾದ ಶೇತಮ್ ಭಾತಮ್ ತೋಟಂನಿ ಅಕಾಡೆಮಿಯ ಪುಸ್ತಕ ಪ್ರಶಸ್ತಿ -೨೦೨೪ಕ್ಕೆ ಆಯ್ಕೆಯಾಗಿದೆ.
ಇದನ್ನೂ ಓದಿ : TV9 Expo/ ಟಿವಿ9 ಕನ್ನಡ ಲೈಫ್‌ಸ್ಟೈಲ್ ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್‌ಪೋ!
ಶಾಸಕ ಕೆ.ಹರೀಶ್‌ಗೌಡ ಕಾರ್ಯಕ್ರಮ ಉದ್ಘಾಟಿಸುವರು. ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಮ್ ಸ್ಟ್ಯಾನಿ ಅಲ್ವಾರೆಸ್ ಅಧ್ಯಕ್ಷತೆ ವಹಿಸಲಿದ್ದಾರೆ. ಎಂಎಲ್‌ಸಿಗಳಾದ ಡಾ. ಡಿ.ತಿಮ್ಮಯ್ಯ ಮತ್ತು ಡಾ.ಯತೀಂದ್ರ ಸಿದ್ದರಾಮಯ್ಯ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೊಂಕಣಿ ಕವಿ ವಲೇರಿಯನ್ ಡಿಸೋಜಾ (ವಲ್ಲಿ ವಗ್ಗ) ಮತ್ತು ಕನ್ನಡ ಮತ್ತು ಸಂಸ್ಕೃತಿ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಉಪಸ್ಥಿತರಿರುವರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಂಧ್ಯಾ ಸಂತೋಷ್ ಸಿದ್ದಿ ಮತ್ತು ತಂಡದಿಂದ ಸಿದ್ದಿ ಸಮುದಾಯ ನೃತ್ಯ (Siddhi dance) , ಆಂಟೋನಿ ಕೀರ್ತನ್ ಜೇಮ್ಸ್ ಮತ್ತು ತಂಡದಿಂದ ಬ್ರಾಸ್ ಬ್ಯಾಂಡ್ ಹಾಗೂ ಅಲ್ರಾನ್ ರಾಡ್ರಿಗಸ್ ಮತ್ತು ತಂಡದಿಂದ ಕೊಂಕಣಿ (Konkani) ಸಂಗೀತ ಸಂಜೆ ಆಯೋಜಿಸಲಾಗಿದೆ.
ಇದನ್ನೂ ಓದಿ : Heart Attack/ ದುಬೈಗೆ ಪ್ರಯಾಣಿಸುತ್ತಿದ್ದ ಭಟ್ಕಳಿಗ ನಿಧನ