ಕುಮಟಾ (Kumta crime) : ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನಲ್ಲಿ ನಡೆದಿದೆ. ಕುಮಟಾದ ಗೌರೀಶ ಮಾದೇವ ಗೌಡ (35) ಸಾವಿಗೆ ಶರಣಾದ ಯುವಕ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹೆರವಟ್ಟಾದ ಸಾಣಿಯಮ್ಮ ದೇವಸ್ಥಾನ ಬಳಿ ವಾಸವಾಗಿದ್ದ ಗೌರೀಶ ಗೌಡ ಕಟ್ಟಡಗಳಿಗೆ ಬಣ್ಣ ಬಡಿಯುವ ಕಾರ್ಮಿಕನಾಗಿದ್ದ. ದುಡಿದ ಬಹುಪಾಲು ಹಣವನ್ನು ಮದ್ಯ ವ್ಯಸನಕ್ಕಾಗಿ ವ್ಯಯಿಸುತ್ತಿದ್ದ. ಮನೆಯಲ್ಲಿ ಎಷ್ಟು ಹೇಳಿದರೂ ಆತ ಕುಡಿತದಿಂದ ಹೊರ ಬಂದಿರಲಿಲ್ಲ. ಇತ್ತೀಚೆಗೆ ಮಾನಸಿಕವಾಗಿ ಸಹ ಕುಗ್ಗಿದ್ದ ಆತ ಆಗಸ್ಟ್ ೨೩ರ ರಾತ್ರಿ ೮ರ ಸುಮಾರಿಗೆ ಮಣಕಿ ಮೈದಾನದ ಪಕ್ಕದಲ್ಲಿರುವ ಬೆಣ್ಣೆ ಕಾಲೇಜಿನ ಬಳಿ ಹೋಗಿದ್ದ., ಅಲ್ಲಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ‌ಮಾಡಿಕೊಂಡಿದ್ದಾನೆ.

ಇದನ್ನೂ ಓದಿ : ಪೊಲೀಸ್ ಇಲಾಖೆ ಸಂಗ್ರಹಿಸಿದ ದಂಡದ ಮೊತ್ತ ಚಿನ್ನದ ವ್ಯಾಪಾರಿ ಖಾತೆಗೆ !?

ಈ ವಿಷಯ ತಿಳಿದ ಆಟೋ ಚಾಲಕನಾಗಿರುವ ಮೃತನ ಸಹೋದರ ಲೋಕೇಶ ಮಾದೇವ ಗೌಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. `ಜೀವನದಲ್ಲಿನ ಜಿಗುಪ್ಸೆಯಿಂದ ಆತ ಆತ್ಮಹತ್ಯೆಗೆ ಶರಣಾಗಿರುವ ಶಂಕೆಯಿದೆ’ ಎಂದು ಲೋಕೇಶ್ ಗೌಡ ಪೊಲೀಸರಿಗೆ ತಿಳಿಸಿದ್ದಾರೆ (Kumta Crime). ಪ್ರಕರಣ ದಾಖಲಿಸಿಕೊಂಡಿರುವ ಕುಮಟಾ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ :  ಗಂಡನನ್ನು ಕೊಂದ ಪಾಪಿ ಪತ್ನಿಗೆ ಜೀವಾವಧಿ ಶಿಕ್ಷೆ