ಶಿರಸಿ (Sirsi): ಕುಮಟಾ (Kumta) ರಸ್ತೆಯ ದೇವಿಮನೆ ಘಟ್ಟದಲ್ಲಿ (Devimane Ghat) ಭಾನುವಾರ ನಸುಕಿನಲ್ಲಿ ಮತ್ತೆ ಗುಡ್ಡ ಕುಸಿದಿದೆ (landslide). ಗುಡ್ಡದ ಮೇಲಿನ ಗಿಡ-ಮರಗಳು ಹೆದ್ದಾರಿಗೆ ಬಂದು ಬಿದ್ದಿದ್ದು, ಲಘು ವಾಹನ (light vehicle) ಸಂಚಾರಕ್ಕೂ ಇಲ್ಲಿ ಸಂಚಕಾರ ಎದುರಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಳೆದ ಮೂರು ದಿನಗಳ ಅವಧಿಯಲ್ಲಿ ಮೂರನೇ ಬಾರಿ ಇಲ್ಲಿ ಗುಡ್ಡ ಕುಸಿತ ನಡೆದಿದೆ. ಅದಕ್ಕಿಂತ ಮೊದಲು ಸಹ ಗುಡ್ಡದ ಮಣ್ಣು ಹೆದ್ದಾರಿಗೆ ಅಪ್ಪಳಿಸಿ, ತೆರವು ಕಾರ್ಯಾಚರಣೆ ನಡೆದಿತ್ತು. ಕುಮಟಾ-ಶಿರಸಿ ಮಾರ್ಗದ ಅಭಿವೃದ್ಧಿ ಕೆಲಸ ನಡೆಯುತ್ತಿರುವುದರಿಂದ ಹಿಂದೆಯೇ ಈ ಮಾರ್ಗದಲ್ಲಿ ಭಾರೀ ವಾಹನ (heavy vehicle) ಸಂಚಾರವನ್ನು ನಿಷೇಧಿಸಲಾಗಿದೆ. ಹೀಗಾಗಿ ಲಘು ವಾಹನಗಳ ಓಡಾಟ ಮಾತ್ರ ನಡೆಯುತ್ತಿತ್ತು. ರಾತ್ರಿ ವೇಳೆ ಗುಡ್ಡ ಕುಸಿದಿದ್ದರಿಂದ (landslide) ವಾಹನ ಓಡಾಟ ವಿರಳವಾಗಿತ್ತು.

ಇದನ್ನೂ ಓದಿ : fake call/ ಹುಸಿ ಕರೆಗೆ ಬೆಸ್ತು ಬಿದ್ದ ತಹಸೀಲ್ದಾರ

ಭಾರೀ ವಾಹನ ಓಡಾಟಕ್ಕೆ ಅವಕಾಶ ನೀಡಿದಲ್ಲಿ ಈ ರಸ್ತೆಯಲ್ಲಿ ಹಗಲು-ರಾತ್ರಿ ವಾಹನ ಸಂಚಾರ ನಡೆಯಲಿದೆ. ಆ ವೇಳೆ ಗುಡ್ಡ ಕುಸಿದರೆ ಅಪಾಯ ಖಚಿತ. ಇದರೊಂದಿಗೆ ರಸ್ತೆ ಅಭಿವೃದ್ಧಿಗೆ ಸಹ ಭಾರೀ ವಾಹನ ಓಡಾಟ ತೊಂದರೆ ಮಾಡಲಿದೆ. ರಸ್ತೆ ಅಭಿವೃದ್ಧಿ ಕೆಲಸದ ವೇಳೆ ಗುಡ್ಡವನ್ನು ಅವೈಜ್ಞಾನಿಕ ರೀತಿ ಕಡಿತ ಮಾಡಿರುವುದು ಗುಡ್ಡ ಕುಸಿತಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಕಳೆದ ವರ್ಷವೂ ಈ ಭಾಗದಲ್ಲಿ ಗುಡ್ಡ ಕುಸಿತ ಉಂಟಾಗಿ, ಪ್ರಯಾಣಿಕರು ಸಮಸ್ಯೆ ಅನುಭವಿಸಿದ್ದರು.

ಇದನ್ನೂ ಓದಿ : tragic/ ಕಾಲುವೆಗೆ ಬಿದ್ದು ೨ ವರ್ಷದ ಬಾಲಕಿ ದುರ್ಮರಣ

ಭಾನುವಾರ ಬೆಳಿಗ್ಗೆ ಗುಡ್ಡ ಕುಸಿತವಾಗಿದ್ದರಿಂದ ಕುಮಟಾ-ಶಿರಸಿ ಮಾರ್ಗ ಸಂಪೂರ್ಣವಾಗಿ ಬಂದ್ ಆಗಿದೆ. ಮಳೆಯೂ ಸುರಿಯುತ್ತಿರುವುದರಿಂದ ಮಣ್ಣು ತೆರವು ಕಾರ್ಯಾಚರಣೆ ನಿಧಾನವಾಗುವ ಸಾಧ್ಯತೆಯಿದೆ. ರಸ್ತೆ ಮೇಲೆ ಮಣ್ಣು ಹಾಗೂ ಮರ ಬಿದ್ದಿದೆ.  ಜೊತೆಗೆ ಗುಡ್ಡದ ಮಣ್ಣು ಸಡಿಲವಾಗಿರುವ ಕಾರಣ ಹತ್ತಿರ ಹೋಗುವುದು ಅಪಾಯಕಾರಿಯಾಗಿದೆ. ಶಿರಸಿ-ಕುಮಟಾ ನಡುವೆ ಓಡಾಡುವ ಪ್ರಯಾಣಿಕರು ತೀರಾ ಅನಿವಾರ್ಯವಾದರೆ ಬೇರೆ ಮಾರ್ಗ ಬಳಸುವುದು ಉತ್ತಮ.

ಇದನ್ನೂ ಓದಿ : rain update / ಭಟ್ಕಳದಲ್ಲಿ ೨೬೦.೪ ಮಿಮೀ ಮಳೆ ದಾಖಲು