ಭಟ್ಕಳ (Bhatkal) : ತಾಲೂಕಿನ ಮುರುಡೇಶ್ವರ (Murdeshwar) ಬಸ್ತಿಮಕ್ಕಿಯ ಶ್ರೀ ರಾಘವೇಶ್ವರ (Raghaveshwara) ಹವ್ಯಕ (Havyaka) ಸಭಾಭವನದಲ್ಲಿ ಶ್ರೀ ಮಹಿಷಾಸುರ (Mahishasur) ಮರ್ಧಿನಿ ಯಕ್ಷಗಾನ ಪ್ರತಿಷ್ಠಾನ ಗೋಳಿಕುಂಬ್ರಿ, ಪೂರ್ಣಚಂದ್ರ ಯಕ್ಷಗಾನ ಮಂಡಳಿ ಕೊಂಡದಕುಳಿ ಇವರ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ದಿ.ಸುಬ್ರಹ್ಮಣ್ಯ ಧಾರೇಶ್ವರರ ವೇದಿಕೆಯಲ್ಲಿ  ೧೧ನೇ ವರ್ಷದ ಪೌರಾಣಿಕ ಯಕ್ಷಗಾನ ಸಪ್ತಾಹಕ್ಕೆ (Yakshagana week) ಚಾಲನೆ ನೀಡಲಾಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವೇ.ಮೂ. ಕೃಷ್ಣಾನಂದ ಭಟ್ಟ ಬಲ್ಸೆ, ಮಾನವನ ಉಗಮದಿಂದ ಧರ್ಮ-ಅಧರ್ಮ ಎರಡೂ ಕೂಡ ಉಗಮವಾಯಿತು. ಆದರೆ ಎಂದೂ ಅಧರ್ಮ ಗೆದ್ದಿಲ್ಲ. ಎಲ್ಲಾ ಕಡೆಗಳಲ್ಲಿಯೂ ಧರ್ಮವೇ ಜಯದೆಡೆಗೆ ಸಾಗುತ್ತಿದೆ. ಇಲ್ಲಿಯೂ ಪೌರಾಣಿಕ ಯಕ್ಷಗಾನ ಸಪ್ತಾಹದಲ್ಲಿ ಧರ್ಮ-ಅಧರ್ಮ ಎರಡೂ ಕಡೆಯವರು ವೇಷ ಭೂಷಣದಲ್ಲಿ ಮಿಂಚುತ್ತಾರೆ. ಆದರೆ ಕೊನೆಯಲ್ಲಿ ಧರ್ಮದ ವೇಷಧಾರಿಗಳಿಗೆ ಜಯ ದೊರೆಯುವುದು. ಯಕ್ಷಗಾನದಿಂದ ಧರ್ಮ ಜಾಗೃತಿಯಾಗುವುದು ಎಂದು ಹೇಳಿದರು.

ಇದನ್ನೂ ಓದಿ : Yakshagana/ ಇಡಗುಂಜಿ ಮೇಳದವರಿಂದ ಯಕ್ಷಗಾನ ಪ್ರದರ್ಶನ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ವಿಜ್ಞಾನಿ ದೇವಿಕಾನ ಪರಮೇಶ್ವರ ಕೆ. ದೀಕ್ಷಿತ ಮಾತನಾಡಿ,  ಯಕ್ಷಗಾನವು ಮನೊರಂಜನೆಯ ಒಂದು ಮಾರ್ಗವಾದರೆ ನಮ್ಮ ಜ್ಞಾನ ವೃದ್ಧಿಯ ಸಾಧನವೂ ಹೌದು. ಇಂತಹ ಯಕ್ಷಗಾನ ಸಪ್ತಾಹಕ್ಕೆ (Yakshagana week) ಅನೇಕರು, ಸಂಘ ಸಂಸ್ಥೆಗಳು ಶಕ್ತಿಯಾಗಿ ನಿಂತು ಸಹಕರಿಸಿದ್ದಾರೆ ಎಂದು ಸ್ಮರಿಸಿದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಯಕ್ಷಗಾನ ಸಪ್ತಾಹದ ಗೌರವಾಧ್ಯಕ್ಷ  ನಾಗರಾಜ ಭಟ್ಟ ಬೇಂಗ್ರೆ ಮಾತನಾಡಿ, ಯಕ್ಷಗಾನಕ್ಕೆ ಜನರನ್ನು ಆಕರ್ಷಿಸುವ ಹಾಗೂ ಹಿಡಿದಿಟ್ಟುಕೊಳ್ಳುವ ಶಕ್ತಿ ಇದೆ. ಯಕ್ಷಗಾನ ಸಪ್ತಾಹ ಕೇವಲ ಮನೊರಂಜನೆಗಾಗಿ ಅಲ್ಲ ಇದೊಂದು ಆರಾಧನೆ ಎಂದರು.

ವಿಡಿಯೋ ಸಹಿತ ಇದನ್ನೂ ಓದಿ : BJP Celebration/ ಭಟ್ಕಳದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಪತ್ರಕರ್ತ ರಾಧಾಕೃಷ್ಣ ಭಟ್ಟ ಮಾತನಾಡಿ, ಗೋಳಿಕುಂಬ್ರಿ ನಾಗರಾಜ ಮಧ್ಯಸ್ಥ ಅವರು ಯಕ್ಷಗಾನ ಸಪ್ತಾಹದಲ್ಲಿ ಪ್ರತಿ ವರ್ಷ ಕೇವಲ ಪೌರಾಣಿಕ ಯಕ್ಷಗಾನವನ್ನು ಏರ್ಪಡಿಸುವ ಮೂಲಕ ಯಕ್ಷಗಾನ ಸಪ್ತಾಹವನ್ನು ಒಂದು ಧಾರ್ಮಿಕ ಹಿನ್ನೆಲೆಯಲ್ಲಿ ಮುಂದುವರಿಸಿಕೊಂಡು ಬಂದಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು. ಇನ್ನೋರ್ವ ಅತಿಥಿ ಭಟ್ಕಳ ಹವ್ಯಕ ವಲಯದ ಸಂಘಟನಾ ಕಾರ್ಯದರ್ಶಿ ಶ್ರೀಧರ ಎಂ. ಭಟ್ಟ ಮಾತನಾಡಿ, ಸುಮಾರು ೫೦ ವರ್ಷಗಳ ಆಸುಪಾಸಿನಲ್ಲಿರುವವರು ಪ್ರತಿಯೋರ್ವರು ಕೂಡ ಯಕ್ಷಗಾನ ಪ್ರಿಯರು.  ಯಕ್ಷಗಾನ ಕನ್ನಡವನ್ನು ಉಳಿಸಿ ಬೆಳೆಸುವ ಒಂದು ಕಲೆಯಾಗಿದೆ ಎಂದರು.

ವಿಡಿಯೋ ಸಹಿತ ಇದನ್ನೂಓದಿ: boat sink/ ಬೋಟ್ ಮುಳುಗಿ ೬೦ ಲಕ್ಷ ರೂಪಾಯಿ ನಷ್ಟ

ವೇದಿಕೆಯಲ್ಲಿ ಲಯನ್ಸ ಕ್ಲಬ್ ಅಧ್ಯಕ್ಷ ವಿಶ್ವನಾಥ ಜಿ. ಮಡಿವಾಳ, ಹವ್ಯಕ ವಲಯದ ಮಾತೃ ವಿಭಾಗದ ಮುಖ್ಯಸ್ಥೆ ಮಂಗಲಾ ಉಪಾಧ್ಯಾಯ ಉಪಸ್ಥಿತರಿದ್ದರು. ಆಶಾ ಭಟ್ಟ ಪ್ರಾರ್ಥಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀಕಾಂತ ಹೆಗಡೆ ಸ್ವಾಗತಿಸಿದರು. ಶಿಕ್ಷಕ ಐ.ವಿ. ಹೆಗಡೆ ನಿರೂಪಿಸಿದರು. ಯಕ್ಷಗಾನ ಸಪ್ತಾಹದ ಅಧ್ಯಕ್ಷ ನಾಗರಾಜ ಮಧ್ಯಸ್ಥ ವಂದಿಸಿದರು.

ಇದನ್ನೂ ಓದಿ : Vardhanti / ಕರಿಕಲ್‌ ಗ್ರಾಮದಲ್ಲಿ ಪಂಚಮ ವರ್ಧಂತಿ ಮಹೋತ್ಸವ