ಹೊನ್ನಾವರ (Honnavar) : ತಾಲೂಕಿನ ಗೇರುಸೊಪ್ಪ ಬಳಿಯ ಸುಳಿಮುರ್ಖಿ ತಿರುವು ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಪಲ್ಟಿಯಾಗಿ (lorry overturned) ಈರ್ವರು ಮೃತಪಟ್ಟು ಮೂವರು ಗಾಯಗೊಂಡ ಘಟನೆ ರವಿವಾರ ತಡರಾತ್ರಿ ಸಂಭವಿಸಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕಬ್ಬಿಣದ ಆಟದ ಸಾಮಾನುಗಳನ್ನು ತುಂಬಿಕೊಂಡು ಹೊನ್ನಾವರ ಕಡೆ ಬರುತ್ತಿದ್ದ ಲಾರಿ ಪಲ್ಟಿಯಾಗಿದೆ.
ಮೃತರು ಮತ್ತು ಗಾಯಳು ಮೂಲತಹ ಬಿಹಾರ ರಾಜ್ಯದವರು ಎಂದು ತಿಳಿದುಬಂದಿದೆ. ವಾಹನದಲ್ಲಿದ್ದ ೬ ಜನರಲ್ಲಿ ಇಬ್ಬರು ಮೃತ ಪಟ್ಟಿದ್ದು, ಮೂವರು ಗಾಯಳುಗಳನ್ನು ಹೊನ್ನಾವರದ ತಾಲೂಕ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ (lorry overturned) ಸಂಭವಿಸಿದೆ.
ಇದನ್ನೂ ಓದಿ: Na Dsouza/ ಪ್ರಕೃತಿ ಕಾಳಜಿಯ ಮನವುಳ್ಳ ಬರಹಗಾರ
ಗಾಯಾಳುಗಳನ್ನು ನಳಂದ ನಿವಾಸಿ ಸಜ್ಜನ ಕುಮಾರ,
ಗಯಾ ನಿವಾಸಿ ಗಣವ್ರಿ ಮತ್ತು ಪಾಟ್ನಾದ ಪಪ್ಪು ಕುಮಾರ ಎಂದು ಗುರುತಿಸಲಾಗಿದೆ. ಮೃತರ ಹೆಸರು ಇನ್ನಷ್ಟೇ ತಿಳಿದುಬರಬೇಕಿದೆ.
ಇದನ್ನೂ ಓದಿ : ಅಲ್ಪಕಾಲದ ಅಸೌಖ್ಯದಿಂದ ನಾ.ಡಿಸೋಜ ನಿಧನ