ಭಟ್ಕಳ (Bhatkal) : ಆಟೋ ಡಿಕ್ಕಿಯಾಗಿ (auto hit) ಹೆದ್ದಾರಿ ಪಕ್ಕ ನಿಂತಿದ್ದ ವೃದ್ಧ ಗಂಭೀರ ಗಾಯಗೊಂಡು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಭಟ್ಕಳ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳದ ಗುಡಲಕ್ ರಸ್ತೆಯ ೫ನೇ ಕ್ರಾಸ್ ನಿವಾಸಿ ಅಬ್ದುಲ್ ಮತೀನ್ ಕಾಸಿಂಜಿ (೭೨) ಮೃತ ದುರ್ದೈವಿ. ಮೇ ೧೨ರಂದು ಬೆಳಿಗ್ಗೆ ೧೧.೧೫ರ ಸುಮಾರಿಗೆ ಈ ಘಟನೆ ನಡೆದಿದೆ. ತೆಂಗಿನಗುಂಡಿ ಕ್ರಾಸ್ ಕಡೆಯಿಂದ ಭಟ್ಕಳ ಕಡೆಗೆ ಬರುತ್ತಿದ್ದ ಆಟೋ ಡಿಕ್ಕಿ ಹೊಡೆದು (auto hit) ಪರಾರಿಯಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ರಂಗಿನಕಟ್ಟಾದ ಫೋರ್ ಸೀಸನ್ ರೆಸ್ಟೋರೆಂಟ್ ಎದುರಿಗೆ ಆಟೋ ಡಿಕ್ಕಿಯಾಗಿದೆ. ಗಂಭೀರವಾಗಿ ಗಾಯಗೊಂಡ ಅಬ್ದುಲ್ ಮತೀನ್ ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲು ಪಡಿಸಲಾಗಿತ್ತು.
ಇದನ್ನೂ ಓದಿ : Hanuman idol / ೪೧ ಅಡಿ ಬೃಹತ್ ಹನುಮಂತ ಮೂರ್ತಿ ಲೋಕಾರ್ಪಣೆ
ಆದರೆ ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ೧೧.೧೫ರ ಸುಮಾರಿಗೆ ಮೃತಪಟ್ಟಿದ್ದಾರೆ. ಈ ಕುರಿತು ವೃದ್ಧನ ಅಳಿಯ ಕಾರಗದ್ದೆ ನಿವಾಸಿ ಜಹೀರ ಅಹ್ಮದ್ ಸಲಾವುದ್ದೀನ್ ಕಾಸಿಂಜಿ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು (complaint) ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಟೋ ಚಾಲಕನ ಪತ್ತೆಗೆ ಕ್ರಮಕೈಗೊಂಡಿದ್ದಾರೆ.
ಇದನ್ನೂ ಓದಿ : accused arrested/ ೧೫ ವರ್ಷಗಳಿಂದ ತಲೆಮರೆಸಿಕೊಂಡ ಆರೋಪಿ ಬಂಧನ