ಭಟ್ಕಳ: ತಾಲೂಕಿನ ಕಿತ್ರೆಯ ಶ್ರೀ ಕ್ಷೇತ್ರ ದೇವಿಮನೆ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರ್ಧಂತ್ಯುತ್ಸವ ಮತ್ತು ರಥೋತ್ಸವ ಇರುವುದರಿಂದ ಸೋಮವಾರ ಸಂಜೆ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮೀಜಿಯವರು (Raghaveshwara Shree) ಆಗಮಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ದೇವಸ್ಥಾನಕ್ಕೆ ಆಗಮಿಸಿದ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ಶ್ರೀಗಳು (Raghaveshwara Shree) ಗಣಪತಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆದರು. ನಂತರ ದೇವಸ್ಥಾನದ ಮೊಕ್ತೇಸರ ಉಮೇಶ ಹೆಗಡೆ ಗುಡೇಕೇರಿ ದಂಪತಿ ಸ್ವಾಗತ ಧೂಳಿ ಪೂಜೆ ನೆರವೇರಿಸಿದರು.
ಇದನ್ನು ಓದಿ: Pallakki Utsava/ ಭಟ್ಕಳ ನಗರದಾದ್ಯಂತ ವೆಂಕಟರಮಣ ದೇವರ ಪಾಲಕಿ ಸಂಚಾರ
ಈ ಸಂದರ್ಭದಲ್ಲಿ ದೇವಿಮನೆ ದೇವಸ್ಥಾನದ ಪ್ರಧಾನ ಅರ್ಚಕ ವೆ.ಮೂ. ಬಾಲಚಂದ್ರ ಭಟ್ಟ, ದೇವಿಮನೆ ಆಡಳಿತ ಮಂಡಳಿ ಅಧ್ಯಕ್ಷ ವಿನಾಯಕ ಭಟ್ಟ ಬೆಟ್ಕೂರು, ಭವತಾರಿಣಿ ಸೀಮಾ ಪರಿಷತ್ ಅಧ್ಯಕ್ಷ ವಿಘ್ನೇಶ್ವರ ಉಪಾಧ್ಯಾಯ, ಕಾರ್ಯದರ್ಶಿ ವಿನಾಯಕ ಭಟ್ಟ ತೆಕ್ನಗದ್ದೆ, ಪ್ರಮುಖರಾದ ಎಂ ಎಂ ಹೆಬ್ಬಾರ, ಶಿವಾನಂದ ಹೆಬ್ಬಾರ, ನಾರಾಯಣ ಹೆಬ್ಬಾರ ಬೆಣಂದೂರು, ಶ್ರೀನಿವಾಸ ಹೆಗಡೆ, ಗಣೇಶ ಹೆಬ್ಬಾರ, ಗಣಪಯ್ಯ ಹೆಗಡೆ, ಎಂ ವಿ ಭಟ್ಟ, ಅಶೋಕ ಭಟ್ಟ, ಪರಮೇಶ್ವರ ಭಟ್ಟ, ಮಂಜುನಾಥ ಹೆಬ್ಬಾರ, ನಾರಾಯಣ ಹೆಬ್ಬಾರ ಮುಂತಾದವರಿದ್ದರು.
ಇದನ್ನು ಓದಿ: Theft/ ಮಾಂಗಲ್ಯ ಸರ ಕಳ್ಳತನ
ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮ ಆರಂಭಿಸಲಾಯಿತು. ಇದಕ್ಕೂ ಮೊದಲು ಮಧ್ಯಾಹ್ನ ಭವತಾರಿಣಿ ವಲಯದ ಮಾತೆಯರಿಂದ ಭಜನೆ, ರಾತ್ರಿ ಭರತ ನಾಟ್ಯ ನಡೆಯಿತು.
ಇದನ್ನು ಓದಿ: Murudeshwar/ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವು



