ಭಟ್ಕಳ: ಕೆಲಸವಿಲ್ಲದೆ ಮನೆಯಲ್ಲಿಯೇ ಇದ್ದ ವ್ಯಕ್ತಿಯೊಬ್ಬ ಕಾಣೆಯಾಗಿರುವ (Man missing) ಬಗ್ಗೆ ಮುರುಡೇಶ್ವರ (Murudeshwar) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ (Bhatkal) ತಾಲೂಕಿನ ಬೈಲೂರು ಕ್ರಿಶ್ಚಿಯನ್ ಕೇರಿ ನಿವಾಸಿ ಬಸ್ತ್ಯಾಂವ ಬಾಬು ಡಿಸೋಜಾ (೫೮) ಕಾಣೆಯಾದ ವ್ಯಕ್ತಿ. ಈ ಕುರಿತು ಆತನ ಹೆಂಡತಿ ಪಾವಲೀನ್ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ತಿಳಿಸಿರುವಂತೆ, ಬಸ್ತ್ಯಾಂವ ಈ ಹಿಂದೆ ವಿಪರೀತ ಸಾರಾಯಿ ಕುಡಿಯುವ ಚಟವನ್ನು ಬೆಳೆಸಿಕೊಂಡಿದ್ದರು. ಅವರು ಕಳೆದ ೧ ವರ್ಷದಿಂದ ಸಾರಾಯಿ ಕುಡಿಯುವದನ್ನು ಬಿಟ್ಟಿದ್ದರು. ಅಂದಿನಿಂದ ಅವರು ಯಾವಾಗಲೂ ಸ್ವಲ್ಪ ಮಂಕಾಗಿ ಇರುತ್ತಿದ್ದರು. ಅಲ್ಲದೇ ಅವರು ಯಾವುದೇ ಕೆಲಸವನ್ನು ಮಾಡದೇ ಮನೆಯಲ್ಲಿಯೇ ಇದ್ದರು. ಈ ಹಿಂದೆ ಕಳೆದ ಅಗಸ್ಟ್ ತಿಂಗಳಿನಲ್ಲಿ ಮನೆಗೆ ಹೇಳದೆ ಮನೆಯಿಂದ ಎಲ್ಲಿಗೋ ಹೋದವರು ಒಂದು ವಾರ ಬಿಟ್ಟು ಮನೆಗೆ ವಾಪಾಸ್ ಬಂದಿದ್ದರು.

ವಿಡಿಯೋ ಸಹಿತ ಇದನ್ನು ಓದಿ: Kenda Seve/ ಭಟ್ಕಳ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಕ್ಷೇತ್ರದಲ್ಲಿ ಹರಕೆಯ ಕೆಂಡ ಸೇವೆ ಸಂಪನ್ನ

“ದಿನಾಂಕ: ೧೩-೦೧-೨೦೨೬ ರಂದು ಬೆಳಿಗ್ಗೆ ೧೦ ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ಹೋದವರು ಈವರೆಗೆ ಮನೆಗೆ ವಾಪಾಸ್ ಬಂದಿಲ್ಲಾ. ನಾನು ಇಷ್ಟು ದಿನಗಳ ಕಾಲ ಅವರು ಮನೆಗೆ ವಾಪಾಸ್ ಬರಬಹುದು ಎಂದು ಸುಮ್ಮನಾಗಿದ್ದೆ. ನಮ್ಮ ಸಂಬಂಧಿಕರ ಬಳಿ ಸಹಾ ವಿಚಾರಿಸಿದ್ದು ಯಾರೂ ಸಹಾ ನನ್ನ ಗಂಡನನ್ನು ನೋಡಿಲ್ಲವಾಗಿ ತಿಳಿಸಿರುತ್ತಾರೆ. ಇದರಿಂದ ನನ್ನ ಗಂಡನು ಮನೆ ಬಿಟ್ಟು ಎಲ್ಲಿಯೋ ಹೋಗಿ ಕಾಣೆಯಾದ ಬಗ್ಗೆ ನನಗೆ ಖಾತ್ರಿಯಾಗಿದೆ” ಎಂದು ಪಾವಲಿನ್ ದೂರಿನಲ್ಲಿ ತಿಳಿಸಿದ್ದಾರೆ.

ವಿಡಿಯೋ ಸಹಿತ ಇದನ್ನು ಓದಿ: Sodigadde Jathre/ ಸೋಡಿಗದ್ದೆ ಜಾತ್ರೆ ಆರಂಭ