ಭಟ್ಕಳ (Bhatkal) : ತಮ್ಮ ಕ್ಷೇತ್ರದ ಜನರ ಕುಂದು ಕೊರತೆಯನ್ನು ಆಲಿಸುವ ನಿಟ್ಟಿನಲ್ಲಿ ಭಟ್ಕಳ ತಾಲೂಕಿನ ಹಾಡವಳ್ಳಿಯಲ್ಲಿ ನಡೆದ ಸಚಿವ ಮಂಕಾಳ ವೈದ್ಯರ (Mankal Vaidya) ಜನಸ್ಪಂದನ (Janaspandana) ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮವನ್ನು ಸಚಿವ ಮಂಕಾಳ ಎಸ್. ವೈದ್ಯ ಉದ್ಘಾಟಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನನ್ನ ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ಆಲಿಸುವ ನಿಟ್ಟಿನಲ್ಲಿ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಈಗಾಗಲೇ ಅನೇಕ ಪಂಚಾಯತಗಳಲ್ಲಿ ಈ ಕಾರ್ಯಕ್ರಮ ಮುಗಿದಿದೆ. ಇನ್ನೂ ಅನೇಕ ಪಂಚಾಯತಗಳಲ್ಲಿ ಕಾರ್ಯಕ್ರಮ ಮಾಡುವುದು ಬಾಕಿ ಇದೆ. ವಾರದಲ್ಲಿ ಒಂದು ದಿನ ಭಟ್ಕಳ ಹಾಗೂ ಒಂದು ದಿನ ಹೊನ್ನಾವರದಲ್ಲಿ (Honnavar) ಕಾರ್ಯಕ್ರಮ ಮಾಡಬೇಕೆಂದು ತೀರ್ಮಾನ ಮಾಡಿದ್ದೇನೆ. ನನ್ನ ಕ್ಷೇತ್ರದ ಜನತೆ ಯಾವುದೇ ಸೌಕರ್ಯದಿಂದ ವಂಚಿತರಾಗಬಾರದು. ನಾನು ಇಂದಿಗೂ ನಿಮ್ಮ ಹೃದಯದಲ್ಲಿ ಇದ್ದೇನೆ ಎಂದು ಸಚಿವ ಮಂಕಾಳ ವೈದ್ಯ (Mankal Vaidya) ಹೇಳಿದರು.
ವಿಡಿಯೋ ಸಹಿತ ಇದನ್ನೂ ಓದಿ : ಮಗನ ಸಾವಿನ ಸುದ್ದಿ ಕೇಳಿ ತಂದೆಯೂ ಹೃದಯಾಘಾತದಿಂದ ಸಾವು
ಗ್ರಾಮೀಣ ಭಾಗದಿಂದ ಜನರು ಪಟ್ಟಣಕ್ಕೆ ಬಂದು ಸಮಸ್ಯೆ ಹೇಳಿಕೊಳ್ಳಲು ತೊಂದರೆ ಆಗಬಾರದು ಅನ್ನುವ ಉದ್ದೇಶದಿಂದ ಹಳ್ಳಿಯ ಕಡೆ ಸಭೆ ಏರ್ಪಡಿಸಲಾಗಿದೆ. ಸ್ಥಳೀಯವಾಗಿ ಅಭಿವೃದ್ಧಿಗೆ ಇದ್ದ ತೊಡಕು ನಿವಾರಿಸಿ ಮೂಲಭೂತ ಸೌಕರ್ಯ ಕಲ್ಪಿಸಲಾಗುವದು. ರಸ್ತೆ ನಿರ್ಮಾಣ, ಬೀದಿ ದೀಪ, ಗಂಗಾ ಕಲ್ಯಾಣ, ಫುಟ್ ಬ್ರಿಜ್, ಸೇತುವೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವದು. ಅಲ್ಲದೆ ಸ್ಥಳೀಯ ಸಮಸ್ಯೆ ಬಗ್ಗೆ ಸಾರ್ವಜನಿಕರು ತಿಳಿಸಿದ್ದಲ್ಲಿ ಸಮಸ್ಯೆಗಳನ್ನು ಬಗೆಹರಿಸಲಾಗುವದು ಎಂದು ಅವರು ಹೇಳಿದರು.
ಇದನ್ನೂ ಓದಿ : ಅಕ್ಟೋಬರ್ ೨೨ರಂದು ವಿವಿಧೆಡೆ ಅಡಿಕೆ ಧಾರಣೆ
ಸಭಾ ಕಾರ್ಯಕ್ರಮದ ಮುಗಿದ ಬಳಿಕ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಚಿವರಿಗೆ ಸಲ್ಲಿಸಿದರು. ಕೆಲವು ಸಮಸ್ಯೆಗಳಿಗೆ ಸಚಿವರು ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರೆ, ಇನ್ನೂ ಹಲವು ಸಮಸ್ಯೆಗಳನ್ನು ತಮ್ಮ ಆಪ್ತ ಸಹಾಯಕರ ಬಳಿ ತಿಳಿಸಿ ಅದರ ಫಾಲೊಆಫ್ ಮಾಡಿ ಸಮಯ ಸಮಯಕ್ಕೆ ತಮ್ಮ ಗಮನಕ್ಕೆ ತರುವಂತೆ ಸೂಚಿಸಿದರು.
ವಿಡಿಯೋ ಸಹಿತ ಇದನ್ನೂ ಓದಿ : ಸಂರಕ್ಷಣೆಗೆ ಮುಂದಾಗದ ಅಧಿಕಾರಿಗಳ ಮೇಲೆ ಶಂಕೆ
ಇದಕ್ಕೂ ಪೂರ್ವದಲ್ಲಿ ಗ್ರಂಥಾಲಯ ಉದ್ಘಾಟಿಸಿದ ಸಚಿವರು, ವಿದ್ಯಾರ್ಥಿಗಳೊಂದಿಗೆ ಕೆಲಕಾಲ ಕೆರಮ್ ಆಟವಾಡುವದರ ಮೂಲಕ ಸ್ಥಳೀಯರ ಗಮನ ಸೆಳೆದರು. ಬಳಿಕ ಭಟ್ಕಳದ ಸಚಿವರ ಕಾರ್ಯಾಲಯದಲ್ಲಿ ಜನಸ್ಪಂದನ ಸಭೆ ಮುಂದುವರೆಯಿತು. ಕುಮಟಾ, ಅಂಕೋಲಾದ ಮೀನುಗಾರರು ಸಚಿವರೊಂದಿಗೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಮಂಜಪ್ಪ ನಾಯ್ಕ, ಪಿ.ಎ. ನಾಗರಾಜ ನಾಯ್ಕ, ನಾಗೇಂದ್ರ ಮೊಗೇರ, ಸುಧಾ ನಾಯ್ಕ ಇತರರು ಇದ್ದರು.
ವಿಡಿಯೋ ಸುದ್ದಿಯನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್ಬುಕ್ ನಲ್ಲಿ ವೀಕ್ಷಿಸಬಹುದು.