ಭಟ್ಕಳ :  ಸುಪ್ರಸಿದ್ಧ ಮಾರಿ ಜಾತ್ರೆ ಕ್ಷಣಗಣನೆ ಪ್ರಾರಂಭವಾಗಿದೆ. ತಾಲೂಕಿನ ಬೆಳ್ಕೆ ಪಟೇಲರಮನೆಯ ಶ್ರೀಧರ ನಾಯ್ಕ ಅವರ ಮನೆಯಲ್ಲಿ  ಶ್ರೀ ದೇವಿಯ ಮೂರ್ತಿಯ ಬಿಂಬ(mari bimba) ರಚನೆ ಪೂರ್ಣಗೊಂಡಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

Mari bimbaಕಳೆದ ಮಂಗಳವಾರ ಶ್ರೀಧರ ನಾಯ್ಕ ಅವರ ಮನೆಯಲ್ಲಿ ಆಮಟೆ ಮರಕ್ಕೆ ಪೂಜೆ ಸಲ್ಲಿಸಿ ಮರ ಕತ್ತರಿಸುವ ಮೂಲಕ ಮಾರಿ ಜಾತ್ರೆಯ ಮೂರ್ತಿ ಕೆತ್ತನೆಯ ಧಾರ್ಮಿಕ ವಿಧಿ ವಿಧಾನಕ್ಕೆ ಚಾಲನೆ ನೀಡಲಾಗಿತ್ತು. ನಿನ್ನೆ ಶುಕ್ರವಾರದವರೆಗೆ ಮಾರಿ ಮೂರ್ತಿ ಬಿಂಬ(mari bimba) ಅಲ್ಲಿಯೇ ತಯಾರಿಸಿ ಪೂರ್ಣಗೊಳಿಸಲಾಗಿದೆ. ಶುಕ್ರವಾರ ಸಂಜೆ ವಿಶೇಷ ಪೂಜೆ ಸಲ್ಲಿಸಲಾಯಿತು. ಊರಿನ ಮುತೈದೆಯರು ಮೂರ್ತಿ ಬಿಂಬಕ್ಕೆ ಉಡಿ ತುಂಬಿದರು.

ಇದನ್ನೂ ಓದಿ : ಮಾರಿ ಜಾತ್ರೆ ನಿಮಿತ್ತ ಮೂರ್ತಿ ಕೆತ್ತನೆಗೆ ಚಾಲನೆ

ಇಂದಿನಿಂದ ಮೂರ್ತಿ ತಯಾರಿಕೆ ಕೆಲಸ ಮಣ್ಕುಳಿಯ ಆಚಾರ್ಯರ ಮನೆಯಲ್ಲಿ ಆರಂಭಗೊಂಡಿದೆ. ಮಾರ್ಚ್ ೩೦ರೊಳಗೆ ಮೂರ್ತಿ ರಚನೆ ಪೂರ್ಣಗೊಳ್ಳಲಿದೆ. ಅಂದು ರಾತ್ರಿ ಆಚಾರ್ಯರ ಮನೆಯಲ್ಲಿರುವ ಗದ್ದುಗೆಮನೆಯಲ್ಲಿ ಪೂಜೆ ನಡೆಯಲಿದೆ. ಮರುದಿನ ನಸುಕಿನ‌ ಜಾವ ಮಾರಿಕಾಂಬಾ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ.

ಇದನ್ನೂ ಓದಿ : ಮಾರಿಜಾತ್ರೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿದ ಆಡಳಿತ ಸಮಿತಿ

೩೦ರಂದು ಚರುಬಲಿ ಕಾರ್ಯಕ್ರಮ:
ಮಾರಿ ಹಬ್ಬದ ಹಿನ್ನೆಲೆ ಶ್ರೀಧರ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ಜುಲೈ ೩೦ರಂದು ಚರುಬಲಿ ಕಾರ್ಯಕ್ರಮ ವರ್ಷಂಪ್ರತಿಯಂತೆ ನಡೆಯಲಿದೆ. ಚರುಬಲಿಗಾಗಿ ಅಕ್ಕಿ, ಕಾಯಿ, ಕುಂಬಳಕಾಯಿ, ಹೂವು- ಹಣ್ಣುಗಳನ್ನು ಸಮರ್ಪಿಸುವ ಭಕ್ತರು ಜುಲೈ ೩೦ರ  ಸಾಯಂಕಾಲ ೬ ಗಂಟೆಯೊಳಗಾಗಿ ದೇವಾಲಯಕ್ಕೆ ಸಮರ್ಪಿಸುವಂತೆ ಕೋರಲಾಗಿದೆ.

ಇದನ್ನೂ ಓದಿ : ಭಟ್ಕಳ ಮಾರಿಜಾತ್ರೆ ಜುಲೈ ೩೧ರಿಂದ ಆರಂಭ