ಶಿವಮೊಗ್ಗ(Shivamogga): ಪ್ರೀತಿ, ಪ್ರೇಮದ ನಾಟಕವಾಡಿದ (Love Drama) ವಿವಾಹಿತನೋರ್ವನ ಅಸಲಿ ಬಣ್ಣ ಗೊತ್ತಾದಾಗ ದೂರ ಸರಿದಿದ್ದ ಕಾಲೇಜು ವಿದ್ಯಾರ್ಥಿನಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಈ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸಾಗರ (Sagar) ತಾಲೂಕಿನಲ್ಲಿ ಕುರಿ ವ್ಯಾಪಾರ ಮಾಡಿಕೊಂಡಿದ್ದ ಸುಹೇಲ್ ಖಾನ್ ಆರೋಪಿಯಾಗಿದ್ದಾನೆ. ಶಿವಮೊಗ್ಗದ ಸೂಳೆಬೈಲಿನ ನಿವಾಸಿ ವಿದ್ಯಾರ್ಥಿನಿ ದೂರು ದಾಖಲಿಸಿದವರು. ಕುರಿ ಮಾರಾಟ ಮಾಡಲು ವಿದ್ಯಾರ್ಥಿನಿ ಮನೆಗೆ ಬಂದಾಗ ಸುಹೇಲ್ ಖಾನ್ ಪರಿಚಯವಾಗಿತ್ತು. ಇಬ್ಬರೂ ಸಂಪರ್ಕಕ್ಕೆ ಬಂದು ಪ್ರೀತಿ, ಪ್ರಣಯಕ್ಕೆ ತಿರುಗಿತ್ತು (Love Drama). ಆದರೆ ಪ್ರಿಯಕರನಿಗೆ ಮದುವೆಯಾಗಿ ಮಕ್ಕಳಿರುವ ಬಗ್ಗೆ ಗೊತ್ತಾದಾಗ ವಿದ್ಯಾರ್ಥಿನಿ ಆತನಿಂದ ದೂರವಾಗಿದ್ದಳು.
ಇದನ್ನೂ ಓದಿ : ನಕಲಿ ಸಹಿ ಬಳಸಿ ಪತ್ನಿಗೆ ವಂಚಿಸಿದ ಪತಿರಾಯ
ಆದರೂ ಸುಹೇಲ್ ಖಾನ್, ಮಾತಾಡೋಣ ಒಬ್ಬಳೇ ಸಿಗುವಂತೆ ಕರೆಯುತ್ತ ಹಿಂಸಿಸುತ್ತಿದ್ದ. ವಿದ್ಯಾರ್ಥಿನಿಯ ನಿರ್ಲಕ್ಷ್ಯದ ನಡುವೆಯೂ ಪ್ರಯತ್ನ ಮುಂದುವರಿಸಿದ್ದ ಸುಹೇಲ್ ಎಸಿಡ್ ಎರಚುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ಹೆದರಿಂದ ವಿದ್ಯಾರ್ಥಿನಿ ಸುಹೇಲ್ ಖಾನ್ ನಾದಿನಿಗೆ ಕರೆ ಮಾಡಿ ಹಿಂಸೆ ನೀಡುತ್ತಿರುವ ಬಗ್ಗೆ ತಿಳಿಸಿದ್ದಳು. ಇದೇ ಕಾರಣಕ್ಕೆ ಸುಹೇಲ್ ಕುಟುಂಬಸ್ಥರು ವಿದ್ಯಾರ್ಥಿನಿಯ ಮನೆಯೆದುರು ಬಂದು ವಿದ್ಯಾರ್ಥಿನಿ ಮತ್ತು ಆಕೆಯ ತಾಯಿಗೆ ಬೈದು ಅವಮಾನಗೊಳಿಸಿದ್ದಾರೆ. ಸುಹೇಲ್ ಜೊತೆ ಇದ್ದ ಖಾಸಗಿ ಫೋಟೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಮಹಿಳೆಯ ಬೆತ್ತಲೆ ವಿಡಿಯೋ ಚಿತ್ರೀಕರಣ