ಭಟ್ಕಳ (Bhatkal): ಅಂದರ್ ಬಾಹರ್ ಜೂಜಾಟ ಆಡುತ್ತಿದ್ದ ಅಡ್ಡಗೆ ದಾಳಿ ನಡೆಸಿದ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದು, ಇನ್ನೂ ನಾಲ್ವರು ಪರಾರಿಯಾಗಿದ್ದಾರೆ. ಪೊಲೀಸ್ ನಿರೀಕ್ಷಕ ಮಂಜುನಾಥ ಎ ಲಿಂಗಾರೆಡ್ಡಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು (police operation).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಚೌತನಿಯ ಕೆ ಬಿ ರೋಡ್ ನಿವಾಸಿ ರಾಘವೇಂದ್ರ ಮಾರುತಿ ನಾಯ್ಕ (೩೦), ಮುಂಡಳ್ಳಿ ನೆಸ್ತಾರ ನಿವಾಸಿ ಶ್ರೀಧರ ತಿಮ್ಮಪ್ಪ ಮೋಗೇರ (೪೩), ಪುರವರ್ಗ ಮೂಲದ ಹಾಲಿ ಚೌತನಿ ನಿವಾಸಿ ಗೋಪಾಲ ಕೃಷ್ಣ ನಾಯ್ಕ (೩೮), ಮತ್ತು ಮಂಡಳ್ಳಿ ನೆಸ್ತಾರ ನಿವಾಸಿ ಚಂದ್ರಶೇಖರ ಗೋವಿಂದ ಮೋಗೇರ (೪೨) ಪೊಲೀಸ್ ವಶದಲ್ಲಿರುವವರು. ಬೆಳಕೆ ಚಳ್ಳಜ್ಜಿ ಮನೆಯ ವಸಂತ ಮೋಗೇರ, ಚೌತನಿಯ ಮಾಸ್ತಿ ನಾಯ್ಕ, ಮುಂಡಳ್ಳಿ ಹೊಸಮನೆಯವರಾದ ನಾಗರಾಜ ಶನಿಯಾರ ನಾಯ್ಕ ಮತ್ತು ನಾಗಪ್ಪ ನಾಯ್ಕ ಪರಾರಿಯಾಗಿದ್ದಾರೆ.
ಇದನ್ನು ಓದಿ: School bag distribution/ ಗುರು ನಮನ ಬಳಗದಿಂದ ಸ್ಕೂಲ್ ಬ್ಯಾಗ್ ವಿತರಣೆ
ಆರೋಪಿತರು ಜುಲೈ ೫ರಂದು ಸಂಜೆ ೬: ೩೦ ಗಂಟೆ ಸುಮಾರಿಗೆ ಭಟ್ಕಳ ತಾಲೂಕಿನ ಮುಂಡಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಹಣಗಳಿಸುವ ಉದ್ದೇಶದಿಂದ ಇಸ್ಪೀಟ ಎಲೆಗಳ ಮೇಲೆ ಹಣ ಪಂಥವಾಗಿ ಕಟ್ಟಿ ಅಂದರ್ ಬಾಹರ್ ಇಸ್ಪೀಟ್ ಜೂಗಾರಾಟ ಆಡುತ್ತಿದ್ದಾಗ ದಾಳಿ ನಡೆದಿದೆ(police operation). ಈ ಕಾಲಕ್ಕೆ ಒಟ್ಟು ೨,೬೯,೨೫೦ ರೂಪಾಯಿಗಳ ಮೌಲ್ಯದ ನಾಲ್ಕು ಮೊಬೈಲ್, ೫ ದ್ವಿಚಕ್ರ ವಾಹನ, ೧೨೫೦ ರೂ ನಗದು ಸಹಿತ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನು ಓದಿ: Fake Aadhar card/ ನಕಲಿ ಆಧಾರ್ ಕಾರ್ಡ್ ಬಳಸಿದ ಇಬ್ಬರ ವಿರುದ್ದ ಕೇಸ್



