ಭಟ್ಕಳ (Bhatkal): ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ನಕಲಿ ಆಧಾರ್ ಕಾರ್ಡ್‌ನೊಂದಿಗೆ (fake Aadhar card) ಜಾಮೀನು ಕೊಡಲು ಬಂದ ಇಬ್ಬರ ವಿರುದ್ದ ಇಲ್ಲಿನ ಶಹರ ಠಾಣೆ ಪೊಲೀಸರು ಬುಧವಾರ ಪ್ರಕರಣ ದಾಖಲಿಸಿದ್ದಾರೆ (case filed).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ದರೋಡೆ ಆರೋಪ ಮೇಲೆ ಭಟ್ಕಳ ಗ್ರಾಮೀಣ ಠಾಣೆಯ ಠಾಣೆಯಲ್ಲಿ ಗರುಡಾ ಗ್ಯಾಂಗ್‌ನ ಸದಸ್ಯರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ಇಲ್ಲಿನ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಹಾಗೂ ಜೆಎಂಎಫ್ ನ್ಯಾಯಾಲಯದಿಂದ ಜಾಮೀನು ಕೊಡಲು ದಕ್ಷಿಣ ಕನ್ನಡ (dakshina Kannada) ಜಿಲ್ಲೆಯ ಉಳ್ಳಾಲದ ಸೋಮ ಶೆಟ್ಟಿ ಕೋಟಿ ಶೆಟ್ಟಿ ಹಾಗೂ ಬೆಳ್ತಂಗಡಿಯ ವಾಸು ಸಪಲ್ಯ ಅಣ್ಣಪ್ಪ ಸಪಲ್ಯ ಎಂಬುವರು ಬಂದಿದ್ದರು. ಇವರು ಜಾಮೀನಿಗಾಗಿ ಲಗತ್ತಿಸಿದ ಆಧಾರ್ ಕಾರ್ಡ್ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ಪ್ಯೂರಿಟಿ ಮ್ಯಾನೇಜ್‌ಮೆಂಟ್ ಸಿಸ್ಟಮ್‌ನಿಂದ ಪರಿಶೀಲಿಸುತ್ತಿರುವಾಗ ಓಡಿ ಹೋಗಿದ್ದಾರೆ. ಅವು ನಕಲಿ ಆಧಾರ್ ಕಾರ್ಡ್ (fake Aadhar card) ಆಗಿದ್ದವು ಎಂಬುದು ತಿಳಿದು ಬಂದಿದೆ. ಈ ಕುರಿತು ಚೇತನ ಚಂದಾವರಕರ್ ಎಂಬುವರು ಪೊಲೀಸರಿಗೆ ದೂರು ನೀಡಿದ್ದು (case filed), ತನಿಖೆ ಮುಂದುವರಿದಿದೆ.
ವಿಡಿಯೋ ಸಹಿತ ಇದನ್ನು ಓದಿ: Roof collapse / ಭಾರಿ ಮಳೆಗೆ ಶಿಥಿಲ ಮನೆಯ ಮೇಲ್ಚಾವಣಿ ಕುಸಿತ



