ಭಟ್ಕಳ: ಮುರುಡೇಶ್ವರ (Murudeshwara) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 15 ವರ್ಷದ ವಿಕಲಚೇತನ ಬಾಲಕಿ ಚೆನ್ನೈ (Chennai) ಮೂಲದ ಸಂಜನಾ ತಂದೆ ಸ್ವಾಮೀನಾಗನ್ ದೇವಸ್ಥಾನ ಎದುರು ತಮ್ಮ ಪಾಲಕರಿಂದ ತಪ್ಪಿಸಿಕೊಂಡ ಘಟನೆ (Missing) ಆತಂಕಕ್ಕೆ ಕಾರಣವಾಗಿತ್ತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬಾಲಕಿ ಮಾತನಾಡಲು ಸಾಧ್ಯವಿಲ್ಲ, ಕಣ್ಣು ಸರಿಯಾಗಿ ಕಾಣುವುದಿಲ್ಲ ಹಾಗೂ ಕಿವಿ ಕೇಳೋದಿಲ್ಲ ಎಂಬ ಮಾಹಿತಿ ತಿಳಿದ ತಕ್ಷಣವೇ ಮುರುಡೇಶ್ವರ (Murdeshwar) ಪೊಲೀಸ್ ಠಾಣೆ ಪೊಲೀಸರು ತಕ್ಷಣ ಶೋಧ ಕಾರ್ಯ ಆರಂಭಿಸಿದರು. ಸುಮಾರು ಮೂರು ಗಂಟೆಗಳ ಕಾಲ ನಡೆದ ತೀವ್ರ ಶೋಧದ ಬಳಿಕ ಬಾಲಕಿಯನ್ನು ಸುರಕ್ಷಿತವಾಗಿ ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಇದನ್ನು ಓದಿ: Competition/ ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆ ಯಶಸ್ವಿ

ಪಿಎಸ್ಐ ಹನುಮಂತ ಬಿರಾದಾರ ಹಾಗೂ ಎಎಸ್ಐ ರಾಮಚಂದ್ರ ಹೆಗಡೆ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಿಂದ ಬಾಲಕಿಯನ್ನು ಯಾವುದೇ ಅಪಾಯವಿಲ್ಲದೆ ರಕ್ಷಿಸಿ ಬಳಿಕ ಪಾಲಕರಿಗೆ ಹಸ್ತಾಂತರಿಸಲಾಗಿದೆ.

ಇದನ್ನು ಓದಿ: debate competition/ ಶ್ರೀವಲ್ಲಿ ಪ್ರೌಢಶಾಲೆಯ ನಾಗರಾಜ ನಾಯ್ಕ ಚರ್ಚಾ ಸ್ಪರ್ಧೆಯಲ್ಲಿ ಜಿಲ್ಲೆಗೆ ಪ್ರಥಮ 

ಪೊಲೀಸರ ಸಮಯೋಚಿತ, ಮಾನವೀಯ ಕ್ರಮದಿಂದ ದೊಡ್ಡ ಅನಾಹುತ ತಪ್ಪಿದ್ದು, ಬಾಲಕಿಯ ಪಾಲಕರು ಮುರುಡೇಶ್ವರ ಪೊಲೀಸರ ಕಾರ್ಯವನ್ನು ಮನದಾಳದಿಂದ ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದ್ದಾರೆ./Missing

ಇದನ್ನು ಓದಿ: series of accidents/ ಭಟ್ಕಳದಲ್ಲಿ ಭೀಕರ ಸರಣಿ ಅಪಘಾತ