ಭಟ್ಕಳ (Bhatkal) : ಶಾಲಾ ಶೈಕ್ಷಣಿಕ ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ (Murdeshwar) ಬಂದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿಯರು ಸಮುದ್ರದಲ್ಲಿ ಈಜಲು ತೆರಳಿದ ವೇಳೆ  ನೀರಲ್ಲಿ ಕೊಚ್ಚಿಹೋಗಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನೀರು ಪಾಲಾದವರಲ್ಲಿ  ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ್ದರೆ, ಮೂವರು ನಾಪತ್ತೆಯಾಗಿದ್ದಾರೆ. ಇದೇ ವೇಳೆ ಮೂವರನ್ನು ರಕ್ಷಿಸಲಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ೧೫ ವರ್ಷ ವಯಸ್ಸಿನವರು ಎಂದು ತಿಳಿದುಬಂದಿದೆ. ಶ್ರಾವಂತಿ ಗೋಪಾಲಪ್ಪ ಮೃತ ದುರ್ದೈವಿ. ಯಶೋಧಾ, ವೀಕ್ಷಣಾ ಮತ್ತು ಲಿಪಿಕಾ ಆರ್‌.ಎನ್‌.ಎಸ್‌. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೀಕ್ಷಾ, ಲಾವಣ್ಯ ಮತ್ತು ಲಿಪಿಕಾ ನೀರು ಪಾಲಾಗಿದ್ದು, ಶೋಧ ಕಾರ್ಯ ನಡೆದಿದೆ.

ಇದನ್ನೂ ಓದಿ :  ೧೩ರಂದು ಭಟ್ಕಳದಲ್ಲಿ ಹಿಂದೂ ಸಮಾಜದ ಬೃಹತ್‌ ಪ್ರತಿಭಟನೆ

ಕೋಲಾರ (Kolar) ಜಿಲ್ಲೆಯ ಮುಳಬಾಗಿಲು (Mulabagilu) ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಒಟ್ಟು 54 ವಿದ್ಯಾರ್ಥಿಗಳು ಮುರುಡೇಶ್ವರಕ್ಕೆ (Murdeshwar) ಮಂಗಳವಾರ ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಬಂದಿದ್ದರು. ದೇವರ ದರ್ಶನ ಮುಗಿಸಿ ಬಳಿಕ ವಿದ್ಯಾರ್ಥಿನಿಯರು ಸಮುದ್ರದಲ್ಲಿ ಈಜಲು ತೆರಳಿದ್ದಾರೆ. ಈ ವೇಳೆ ಸಮುದ್ರದ ಅಲೆಗೆ ಮೂವರು ವಿದ್ಯಾರ್ಥಿನಿಯರು ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿದ್ದ ವೇಳೆ ಮೀನುಗಾರರು ಮೂವರನ್ನು ರಕ್ಷಣೆ ಮಾಡಿದ್ದು ಅದರಲ್ಲಿ ಓರ್ವ ವಿದ್ಯಾರ್ಥಿನಿ ಸಾವಪ್ಪಿದ್ದರೆ. ಮೂವರು ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೆ ಕೆಲವರು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಮೂವರು ವಿದ್ಯಾರ್ಥಿನಿಯರು ಕಾಣಿಸುತ್ತಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ :  ನಾಳೆ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ರಜೆ

ಲೈಫ್ ಗಾರ್ಡ್ ಗಳಿಗೆ ಜೀವರಕ್ಷಕ ಸಾಮಗ್ರಿಗಳ ಕೊರತೆ ಇದ್ದು, ಸಮುದ್ರ ತೀರದಲ್ಲಿರುವ ಲೈಫ್ ಗಾರ್ಡ್ ಗಳಿಗೆ ಇಂತಹ ಅವಘಡ ಸಂಭವಿಸಿದ ವೇಳೆ ಪ್ರವಾಸಿಗರನ್ನು ರಕ್ಷಣೆ ಮಾಡಲು ಜೀವ ರಕ್ಷಕ ಸಾಮಾಗ್ರಿಗಳ ಕೊರತೆ ಇದೆ. ಇಲ್ಲಿ ಜಲ ಸಾಹಸ ಕ್ರೀಡೆಗಳಿದ್ದರೆ ಈ ರೀತಿ ಅವಘಡ ಸಂಭವಿಸಿದ ವೇಳೆ ಆದಷ್ಟು ಪ್ರವಾಸಿಗರನ್ನು ರಕ್ಷಣೆ ಮಾಡಬಹುದಿತ್ತು ಎಂಬ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ಸಹಾಯಕ ಕಮೀಷನರ್‌ ಡಾ.ನಯನ, ತಹಶೀಲ್ದಾರ ಅಶೋಕ ಭಟ್‌ ಅವರು ಆರ್‌.ಎನ್‌.ಎಸ್‌. ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ : ಓಸಿ ಆಡಿಸುತ್ತಿದ್ದ ಇಬ್ಬರು ಪೊಲೀಸ್‌ ವಶಕ್ಕೆ