ಭಟ್ಕಳ (Bhatkal): ನಾಮಧಾರಿ (Namadhari) ಸಮಾಜದ ಏಳಿಗೆಗಾಗಿ ಹೊಸ ವಿದ್ಯಾ ಸಂಸ್ಥೆ ಸ್ಥಾಪಿಸುವ ಚರ್ಚೆ ಮುನ್ನೆಲೆಗೆ ಬಂದಿದೆ. ಶ್ರೀ ಕ್ಷೇತ್ರ ಹಳೆಕೋಟೆ ಹನುಮಂತ ದೇವ ನಾಮಧಾರಿ ಅಭಿವೃದ್ಧಿ ಸಂಘದ ವಿದ್ಯಾ ವಿಕಾಸ ೨೦೨೫- ೨೬ನೇ ಸಾಲಿನ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗಣ್ಯರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಾಮಧಾರಿ ಅಭಿವೃದ್ಧಿ ಸಂಘದ ಮಾವಳ್ಳಿ ಹೋಬಳಿ ಅಧ್ಯಕ್ಷ ಆರ್ ಕೆ ನಾಯ್ಕ, ನಾಮಧಾರಿ (Namadhari) ಸಮಾಜದ ಅಭಿವೃದ್ಧಿಗೋಸ್ಕರ ಸಮಾಜದ ವಿದ್ಯಾ ಸಂಸ್ಥೆಯೊಂದರ ಅಗತ್ಯತೆ ಇದೆ ಎಂದು ಒತ್ತಿ ಹೇಳಿದರು.

ಇದನ್ನು ಓದಿ: digital election/ ಡಿಜಿಟಲ್ ತಂತ್ರಜ್ಞಾನ ಬಳಸಿ ಚುನಾವಣೆ

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಹೈಕೋರ್ಟಿನ ನ್ಯಾಯವಾದಿ (High court advocate) ನಾಗೇಂದ್ರ ನಾಯ್ಕ ಮಾತನಾಡಿ, ಸಮಾಜದ ಅಭಿವೃದ್ಧಿಗೋಸ್ಕರ ಸಂಸ್ಥೆಯೊಂದನ್ನು ಸ್ಥಾಪಿಸುವುದು ಅತ್ಯಂತ ತುರ್ತಾಗಿ ಆಗಬೇಕಾದ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಸಮಾಜದ ಮುಂಚೂಣಿಯಲ್ಲಿರುವ ವ್ಯಕ್ತಿಗಳು ಚಿಂತಿಸಬೇಕಾದ ಕಾಲ ಒದಗಿ ಬಂದಿದೆ ಎಂದು ನುಡಿದರು.

ಇದನ್ನು ಓದಿ: Commendable efforts/ ಭಟ್ಕಳದಲ್ಲಿ ಯುವಕರ ಶ್ಲಾಘನೀಯ ಶ್ರಮದಾನ

ಸಾರದಹೊಳೆಯ ಶ್ರೀ ಕ್ಷೇತ್ರ ಹಳೆಕೋಟೆ ಹನುಮಂತ ದೇವಸ್ಥಾನದ ನಾಮಧಾರಿ ಸಭಾಭವನದಲ್ಲಿ ನಡೆದ ವಿದ್ಯಾ ವಿಕಾಸ ಕಾರ್ಯಕ್ರಮ ಉದ್ಘಾಟಿಸಿದ ದೇವಸ್ಥಾನದ ಮೊಕ್ತೇಸರ ಸುಬ್ರಾಯ ಜೆ ನಾಯ್ಕ, ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಶ್ರಾಂತ ನ್ಯಾಯಾಧೀಶ (retired judge) ರವಿ ಎಂ ನಾಯ್ಕ, ಮಾಜಿ ಶಾಸಕ ಜೆ ಡಿ ನಾಯ್ಕ ಸಾಂದರ್ಭಿಕವಾಗಿ ಮಾತನಾಡಿದರು.

ಇದನ್ನು ಓದಿ: felicitation ceremony/ ಕನ್ನಡ ನಾಡು-ನುಡಿಯ ಅಭಿಮಾನ ಸದಾ ಜೀವಂತ ವಾಗಿರಬೇಕು : ಡಿ ಬಿ ನಾಯ್ಕ

ಮುಖ್ಯ ಅತಿಥಿಗಳಾಗಿ ನಿಚ್ಚಲಮಕ್ಕಿ ಗುರುಮಠದ ಅಧ್ಯಕ್ಷ ಅರುಣ ನಾಯ್ಕ, ಮಾವಳ್ಳಿ ಹೋಬಳಿ ನಾಮಧಾರಿ ಸಮಾಜದ ಉಪಾಧ್ಯಕ್ಷ ನಾಗೇಂದ್ರ ಡಿ ನಾಯ್ಕ, ಸಮಾಜದ ಪ್ರಮುಖರಾದ ವೆಂಕಟೇಶ್ ಎನ್ ನಾಯ್ಕ ಅಂಗಡಿಮನೆ, ಕೃಷ್ಣ ನಾಯ್ಕ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. ನಿವೃತ್ತ ಬ್ಯಾಂಕ್ ಮ್ಯಾನೇಜರ್ ಎಸ್ ಎಂ ನಾಯ್ಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಳೆಕೋಟೆ ದೇವಸ್ಥಾನದ ಕಾರ್ಯದರ್ಶಿ ವಾಸುದೇವ ನಾಯ್ಕ ಸ್ವಾಗತಿಸಿ, ಅಭಿನಂದಿಸಿದರು. ಶಿಕ್ಷಕ ಪರಮೇಶ್ವರ ನಾಯ್ಕ ನಿರೂಪಿಸಿದರು.

ಇದನ್ನು ಓದಿ: dress code/ ಅರೆಬರೆ ಬಟ್ಟೆ ಧರಿಸಿದರೆ ಪ್ರವೇಶವಿಲ್ಲ !