ಭಟ್ಕಳ (Bhatkal): ತಾಲೂಕಿನಾದ್ಯಂತ ಗಾಳಿ-ಮಳೆ ಮುಂದುವರಿದಿದೆ (wind rain). ವಿದ್ಯುತ್ ಕಂಬ ಮುರಿದಿವೆ. ಮನೆ, ರಸ್ತೆಗಳ ಮೇಲೆ ಮರಗಳು ಬೀಳುತ್ತಿವೆ. ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ರಸ್ತೆಗಳ ಮೇಲೆ ನೀರು ನಿಂತಿವೆ. ಸಂಚಾರವೇ ಕಷ್ಟಕರವಾಗಿದೆ. ಆದರೂ, ಶಾಲೆಗಳಿಗೆ ರಜೆ ನೀಡದಿರುವುದು (no holiday) ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹೌದು, ಭಟ್ಕಳದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದರೂ (heavy rain) ಮಕ್ಕಳ ಹಿತದೃಷ್ಟಿಯಿಂದ ರಜೆ ಘೋಷಿಸದೇ ಇರುವುದು (no holiday) ಮಕ್ಕಳ ಪಾಲಕರ ಅಸಮಾಧಾನ, ಆಕ್ರೋಶಕ್ಕೆ ಕಾರಣವಾಗಿದೆ. ರವಿವಾರ ಭಟ್ಕಳದಲ್ಲಿ ಭಾರೀ ಗಾಳಿ-ಮಳೆಯಾಗಿತ್ತು. ಹಲವೆಡೆ ಅಪಾರ ಹಾನಿಯುಂಟುಮಾಡಿದೆ. ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಎರಡು ವರ್ಷದ ಮಗುವೊಂದು ಕಾಲುವೆಗೆ ಬಿದ್ದು ಮೃತಪಟ್ಟಿದೆ. ಇದಲ್ಲದೆ, ಇನ್ನಿಬ್ಬರು ಮಳೆಗೆ ಸಾವನ್ನಪ್ಪಿದ್ದಾರೆ. ಇಷ್ಟಾಗಿಯೂ ಅಧಿಕಾರಿಗಳು ಮಕ್ಕಳ ಹಿತದೃಷ್ಟಿಯ ಬಗ್ಗೆ ಚಿಂತಿಸುತ್ತಿಲ್ಲ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : rain damage/ ಭಟ್ಕಳದಲ್ಲಿ ಭಾರೀ ಮಳೆಗೆ ಅಪಾರ ಹಾನಿ
ಈ ಕುರಿತು ಪ್ರತಿಕ್ರಿಯಿಸಿರುವ ನಿವೃತ್ತ ಯೋಧ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ನಿರಂತರ ಗಾಳಿ-ಮಳೆಯಾಗುತ್ತಿದ್ದರೂ ಶಾಲೆಗೆ ರಜೆ ಕೊಡದಿರುವುದು ಸರಿಯಲ್ಲ. ಮಕ್ಕಳ ಪ್ರಾಣಕ್ಕೆ ಕುತ್ತಾದರೆ ಜವಾಬ್ದಾರರು ಯಾರು? ಎಂದು ಪ್ರಶ್ನಿಸಿದ್ದಾರೆ. ಶಾಲೆಗಳಿಗೆ ರಜೆ ನೀಡದಿರುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಬಳಕೆದಾರರು ವಾಚಾಮಗೋಚರವಾಗಿ ಅಧಿಕಾರಿಗಳನ್ನು ನಿಂದಿಸುತ್ತಿದ್ದಾರೆ.
ಇದನ್ನೂ ಓದಿ : tragic incident/ ನೀರಲ್ಲಿ ಕೊಚ್ಚಿ ಹೋದ ವ್ಯಕ್ತಿ
ಭಟ್ಕಳ ತಾಲೂಕಿನಲ್ಲಿ ಹೆಚ್ಚಿನ ಶಾಲೆಗಳು ಹಂಚಿನ ಮೇಲ್ಛಾವಣಿ ಹೊಂದಿವೆ. ಗಾಳಿ-ಮಳೆಗೆ ಅನಾಹುತ ಸಂಭವಿಸಿದರೆ ಮಕ್ಕಳ ಗತಿಯೇನು? ಎಂದು ಪಾಲಕರು ಪ್ರಶ್ನಿಸುತ್ತಿದ್ದಾರೆ. ಹಲವೆಡೆ ಕಾಲು ಸಂಕಗಳನ್ನು ದಾಟಿ ಮಕ್ಕಳು ಶಾಲೆಗೆ ಹೋಗಬೇಕಾದ ಸ್ಥಿತಿಯಿದೆ. ವಾಹನವೂ ಸಂಚರಿಸಲಾಗದ ಸ್ಥಿತಿಯಲ್ಲಿ ಮಕ್ಕಳು ಶಾಲೆಗೆ ಹೋಗುವುದಾದರೂ ಎಂದು ಪ್ರಶ್ನಿಸಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ : tragic/ ಕಾಲುವೆಗೆ ಬಿದ್ದು ೨ ವರ್ಷದ ಬಾಲಕಿ ದುರ್ಮರಣ
ಮೂಲಗಳ ಪ್ರಕಾರ, ಬಿಇಒ ಕಾರ್ಯನಿಮಿತ್ತ ಕಾರವಾರಕ್ಕೆ ತೆರಳಿದ್ದಾರೆ. ಅವರಿಗೆ ಇಲ್ಲಿನ ಪರಿಸ್ಥಿತಿ ಅರಿವಿಲ್ಲ. ಕೆಳ ಹಂತದ ಅಧಿಕಾರಿಗಳು ಅವರಿಗೆ ಮಾಹಿತಿ ನೀಡಿಲ್ಲವೋ ಗೊತ್ತಿಲ್ಲ. ಪಾಲಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಈಗಾಗಲೇ, ಖಾಸಗಿ ಶಾಲೆಯೊಂದು ಮಕ್ಕಳಿಗೆ ರಜೆ ನೀಡಿದೆ. ಮುಂಡಳ್ಳಿ ನಂ.೧ರ ಸರಕಾರಿ ಪ್ರಾಥಮಿಕ ಶಾಲೆಗೆ ಎಸ್ಡಿಎಂಸಿ ನಿರ್ದೇಶನದ ಹಿನ್ನೆಲೆ ರಜೆ ಘೋಷಿಸಲಾಗಿದೆ.
ಇದನ್ನೂ ಓದಿ : Elderly woman dies/ ಕಣ್ಣು ಕಾಣದೆ ನದಿಯಲ್ಲಿ ಬಿದ್ದು ವೃದ್ಧೆ ದುರ್ಮರಣ



