ಹುಬ್ಬಳ್ಳಿ (Hubballi) : ಕ್ರಿಸ್‌ಮಸ್ (Christmas) ಹಬ್ಬದ ಹಿನ್ನೆಲೆಯಲ್ಲಿ ವಾ.ಕ.ರ.ಸಾ. ಸಂಸ್ಥೆಯಿಂದ (NWKRTC) ಸುಮಾರು ೧೨೫ ಹೆಚ್ಚುವರಿ ಬಸ್‌ಗಳನ್ನು ಓಡಿಸುತ್ತಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹುಬ್ಬಳ್ಳಿ (Hubballi), ಧಾರವಾಡ(Dharwad), ಗದಗ(Gadag), ಬೆಳಗಾವಿ(Belagavi), ಉತ್ತರ ಕನ್ನಡ (Uttara Kannada), ಹಾವೇರಿ(Haveri), ಚಿಕ್ಕೋಡಿ (Chikodi)  ಮತ್ತು ಬಾಗಲಕೋಟ (Bagalkot) ವಿಭಾಗಗಳು ಡಿಸೆಂಬರ್ ೨೧-೨೨ರ ವಾರಾಂತ್ಯದಲ್ಲಿ ಮತ್ತು ಮುಬರುವ ಕ್ರಿಸ್‌ಮಸ್‌ ಹಬ್ಬದ ‌ನಿಮಿತ್ತ ಹೆಚ್ಚುವರಿ ಬಸ್‌ಗಳನ್ನು ನಿರ್ವಹಿಸುತ್ತಿವೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಸಂದರ್ಭ ಬೆಂಗಳೂರು (Bengaluru) ಮತ್ತು ಇತರ ಪ್ರಮುಖ ಸ್ಥಳಗಳಿಂದ ಜನರು ತಮ್ಮ ಊರುಗಳಿಗೆ ಪ್ರಯಾಣಿಸುವುದರಿಂದ, ಡಿಸೆಂಬರ್ ೨೦-೨೧ ಮತ್ತು ಡಿಸೆಂಬರ್ ೨೪ರಂದು ಬೆಂಗಳೂರಿನಿಂದ ವಿವಿಧ ರಾಜ್ಯ/ಅಂತರರಾಜ್ಯ ಸ್ಥಳಗಳಿಗೆ ಹೆಚ್ಚುವರಿ ಬಸ್ ಸೌಲಭ್ಯಗಳು ಲಭ್ಯವಿರುತ್ತವೆ. ಹಬ್ಬದ ನಂತರ, ಹೆಚ್ಚುವರಿ ಸಾರಿಗೆ ಸೇವೆಗಳನ್ನು ಡಿಸೆಂಬರ್ ೨೫-೨೬ರಿಂದ ನಿರ್ವಹಿಸಲಾಗುವುದು. ತದ ನಂತರದ ಮುಂದಿನ ದಿನಗಳಲ್ಲಿ ಪ್ರಮುಖ ಸ್ಥಳಗಳಲ್ಲಿ ಜನಸಂದಣಿಯನ್ನು ಆಧರಿಸಿ ಹೆಚ್ಚುವರಿ ಬಸ್‌ ವ್ಯವಸ್ಥೆ ಮಾಡಲಾಗುವುದು ಎಂದು ವಾ.ಕ.ರ.ಸಾ.ಸಂಸ್ಥೆ (NWKRTC) ಹೇಳಿದೆ.

ಇದನ್ನೂ ಓದಿ :  ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಬಂದ ಶಾಲಾ ಬಸ್‌ ಪಲ್ಟಿ