ಭಟ್ಕಳ: ಯುವತಿ ಮತ್ತು ಆಕೆಯ ಕುಟುಂಬದ ಬಗ್ಗೆ (ಇನ್‌ಸ್ಟಾಗ್ರಾಂ) instagram ಖಾತೆಯಲ್ಲಿ ಅಶ್ಲೀಲ ಕಾಮೆಂಟ್ ಹಾಕಿರುವ ಬಗ್ಗೆ ಭಟ್ಕಳ (Bhatkal) ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ (case filed).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನವಾಯತ ಕಾಲೋನಿ ಶಂಸುದ್ದಿನ್ ರಸ್ತೆಯ ಫಾತಿಮಾ ಇನಾಸ್ ಸಿದ್ದಿಕಾ ತಂದೆ ಶಫಿ ಅಹಮ್ಮದ್ ಸಿದ್ದಿಕಾ (೩೦)  ದೂರು ದಾಖಲಿಸಿದವರು. ಇವರಿಗೆ ಕಳೆದ ೭ ತಿಂಗಳಿಂದ ಅವರ ಇನ್‌ಸ್ಟಾಗ್ರಾಂ (instagram) ಖಾತೆಗೆ ೨ ಇನ್‌ಸ್ಟಾಗ್ರಾಂ ಖಾತೆಯಿಂದ ಮೆಸೇಜ್‌ಗಳು ಬರುತ್ತಿದ್ದು, ಹುಡುಗಿ ಅಂತ ಹೇಳಿ ಅವರೊಂದಿಗೆ ಚಾಟಿಂಗ್ ನಡೆಸಿದ್ದಾರೆ. ಇದನ್ನು ನಂಬಿ ಆಕೆ ಹಾಗೂ ತನ್ನ ಕುಟುಂಬದ ಪೋಟೊಗಳನ್ನು ಆರೋಪಿಯೊಂದಿಗೆ ಶೇರ್ ಮಾಡಿದ್ದಾರೆ. ನಂತರ ಸದರ ಇನ್‌ಸ್ಟಾಗ್ರಾಂ ಖಾತೆಯಿಂದ ಮಹಿಳೆಗೆ ಕೊಲೆ ಬೆದರಿಕೆ, ಬೇರೆ ಬೇರೆ ರಾಜಕೀಯ ವ್ಯಕ್ತಿಗಳ ಹೆಸರಿನಲ್ಲಿ ಕೊಲೆ ಮಾಡುವ ಬೆದರಿಕೆಯ ಮೆಸೇಜ್ ಗಳನ್ನು ಹಾಕಲಾಗಿದೆ. ಮೊಬೈಲ್ ಸಂಖ್ಯೆಯಿಂದ ಬೆದರಿಕೆ ಕರೆ ಸಹ ಬರುತ್ತಿತ್ತು. ಮಹಿಳೆಗೆ ಈ ಮೇಸೆಜ್‌ಗಳಿಂದ ಮನೆಯಲ್ಲಿ ತುಂಬ ಕಿರಿಕಿರಿಯಾಗಿದ್ದರಿಂದ ಆಕೆ ಕಳೆದ ಒಂದು ತಿಂಗಳ ಹಿಂದೆ ತನ್ನ ಇನ್‌ಸ್ಟಾಗ್ರಾಂ ಖಾತೆಯನ್ನು ಡಿ ಆಕ್ಟಿವ್ ಮಾಡಿದ್ದಾರೆ.

ಇದನ್ನು ಓದಿ: ration/ ಪಡಿತರ ಅಕ್ರಮ ಸಾಗಾಟ: ಒಬ್ಬ ವಶಕ್ಕೆ

ಹೀಗಿದ್ದಾಗ ದಿನಾಂಕಃ ೧೬-೧-೨೦೨೬ರಂದು ಇನ್‌ಸ್ಟಾಗ್ರಾಂ ಒಂದು ಪೇಜ್ ನಿಂದ ಅವರ ತಂಗಿ, ಹಾಗೂ ಕುಟುಂಬದ ಬಗ್ಗೆ ಅಶ್ಲೀಲವಾಗಿ ಕಾಮೆಂಟ್‌ಗಳನ್ನು ಹಾಕಲಾಗಿದೆ. ಈ ಬಗ್ಗೆ ನನ್ನ ಕುಟುಂಬದರವರು ವಿಚಾರಿಸಲು ಶುರು ಮಾಡಿದಾಗ ಸದರ ಇನ್‌ಸ್ಟಾಗ್ರಾಂ ಪೇಜ್ ಡಿಆಕ್ಟಿವೆಟ್ ಆಗಿದ್ದು ಇರುತ್ತದೆ.

ಇದನ್ನು ಓದಿ: Car crash/ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಬಾಲಕ, ಯುವಕ ದುರ್ಮರಣ

ಅವರ ಕುಟುಂಬದ ಬಗ್ಗೆ ಅಶ್ಲೀಲವಾಗಿ ಕಾಮೆಂಟ್ ಹಾಕಿದ ಬಗ್ಗೆ ಮಹಿಳೆಗೆ ಅವರ ತಮ್ಮ ಶಿಬಾನ್ ಸಿದ್ದಿಕಾ ಇವರು ನೋಡಿ ತಿಳಿಸಿದ್ದಾರೆ. ಹಾಗೆ ಅವರ ಅತ್ತಿಗೆಯರಾದ ಆಜಾದನಗರದ ಬಿಬಿ ನಫೀಸಾ ಕೊಂ ಶಿಬಾಸ್ ಸಿದ್ದಿಕಾ ಹಾಗೂ ಆಯಿಶಾ ಅನ್ನಾನ ತಂದೆ ಅನ್ಸಾರ ಇವರಿಗೂ ಸಹ ಅದೇ ಇನ್‌ಸ್ಟಾಗ್ರಾಂ ಖಾತೆಯಿಂದ ಬೆದರಿಕೆಯ ಹಾಗೂ ಅಶ್ಲೀಲ ಮೇಸೇಜ್ ಪೋಸ್ಟಗಳು ಬಂದಿವೆ. ತನ್ನ ಮತ್ತು ಕುಟುಂಬದ ಬಗ್ಗೆ ಅಶ್ಲೀಲವಾಗಿ ಕಾಮೆಂಟ್‌ಗಳನ್ನು ನನ್ನ ತಮ್ಮನ ಮದುವೆ ಸಮಯದಲ್ಲಿ ಕುಮಟಾದಿಂದ (Kumta) ಬಂದಿದ್ದ ಮೆಹರಾನ್ ಮೆಹತಾಬ್ ಶಾಬಂದ್ರಿ ಮಾಡಿರುವ ಬಗ್ಗೆ ಸಂಶಯ ಇದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನು ಓದಿ: Man dies/ ತೋಟದ ಕೆಲಸ ಮಾಡುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು