ಭಟ್ಕಳ: ಅಕ್ರಮ ಮಾರಾಟ ಉದ್ದೇಶದಿಂದ ಪಡಿತರ ಆಹಾರ (ration) ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಆಹಾರ ನಿರೀಕ್ಷಕ ನೇತೃತ್ವದ ತಂಡ ಓರ್ವ ನನ್ನು ಬಂಧಿಸಿದ್ದು, ಓಮಿನಿ ಸಹಿತ ಪಡಿತರವನ್ನು ವಶಕ್ಕೆ ಪಡೆದಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ ತಹಸಿಲ್ದಾರ್ ಕಚೇರಿಯ ಆಹಾರ ನಿರೀಕ್ಷಕ ಉದಯ ದ್ಯಾಮಪ್ಪ ತಳವಾರ (೩೮) ನೇತೃತ್ವದ ತಂಡ ದಾಳಿ ನಡೆಸಿತ್ತು. ಭಟ್ಕಳ ಶಹರದ ಮುಗ್ದಂ ಕಾಲೋನಿ ಸಫಾ ಸ್ಟ್ರೀಟ್ ನಿವಾಸಿ ಆಸೀಫ್ ಉಲ್ಲಾ ತಂದೆ ಅಬ್ದುಲ ರಹೀಮ್ ಸಾಬ (೩೮) ಬಂಧಿತ ಆರೋಪಿ. ಪುರವರ್ಗದ ಗಣೇಶ ನಗರ ನಿವಾಸಿ ಮೊಹಮ್ಮದ ಸಮೀರ ತಂದೆ ಮೊಹಮ್ಮದ್ ಭಾಷಾ (೨೯) ಮತ್ತು ಹನುಮಾನನಗರದ ಆಟೋ ಚಾಲಕ ರಾಮಚಂದ್ರ ಮಾಸ್ತಪ್ಪ ನಾಯ್ಕ (೫೩) ವಿರುದ್ಧವೂ ದೂರು ದಾಖಲಾಗಿದೆ.
ಇದನ್ನು ಓದಿ: Car crash/ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಬಾಲಕ, ಯುವಕ ದುರ್ಮರಣ
ಆರೋಪಿತನಾದ ಆಸೀಫ್ ಉಲ್ಲಾ ಸುಮಾರು ೩೯,೧೦೦ ರೂಪಾಯಿ ಮೌಲ್ಯದ ಒಟ್ಟೂ ಸುಮಾರು ೧,೧೫೦ ಕೆ.ಜಿ ಆಗುವಷ್ಟು ಅಕ್ರಮವಾಗಿ ಸಂಗ್ರಹಿಸಿದ ಸರಕಾರ ಅನ್ನಭಾಗ್ಯ ಯೋಜನೆಯ ಪಡಿತರ (ration) ಅಕ್ಕಿ ಇರುವ ಪ್ಲಾಸ್ಟಿಕ್ ಚೀಲಗಳನ್ನು ಯಾವುದೇ ಅಧಿಿಿಕೃತ ದಾಖಲೆ/ ಬಿಲ್ ಇಲ್ಲದೆ ಮಾರುತಿ ಸುಜುಕಿ ಓಮನಿ ವಾಹನದಲ್ಲಿ ಸಾಗಾಟ ಮಾಡುತ್ತಿದ್ದರು. ಮುಗ್ದುಂ ಕಾಲೋನಿ ಕಡೆಯಿಂದ ಶಿರಾಲಿ ಕಡೆಗೆ ಆರೋಪಿತರಾದ ಮೊಹಮ್ಮದ ಸಮೀರ ಮತ್ತು ರಾಮಚಂದ್ರ ಮಾಸ್ತಪ್ಪ ನಾಯ್ಕ ಇವರಿಗೆ ನೀಡಲು ಸಾಗಾಟ ಮಾಡುತ್ತಿದ್ದಾಗ ದಾಳಿ ನಡೆದಿದೆ.
ಇದನ್ನು ಓದಿ: Man dies/ ತೋಟದ ಕೆಲಸ ಮಾಡುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು
ಮಧ್ಯಾಹ್ನ ೧ ಗಂಟೆಗೆ ಭಟ್ಕಳ ರಂಗಿನಕಟ್ಟಾ ಟ್ರೆಂಡ್ಸ್ ಬಟ್ಟೆ ಅಂಗಡಿಯ ಎದುರುಗಡೆ ಎನ್.ಎಚ್-೬೬ರ ಮೇಲೆ ಖಚಿತ ಮಾಹಿತಿಯ ಮೇರೆಗೆ ನಡೆಸಿದ ದಾಳಿಯ ಕಾಲ ಆಸೀಫ್ ಉಲ್ಲಾ ಸ್ವತ್ತುಗಳೊಂದಿಗೆ ಸಿಕ್ಕಿಬಿದ್ದಿದ್ದಾನೆ. ಈ ಕುರಿತು ಮೂವರ ವಿರುದ್ಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನು ಓದಿ: Shrinivasa Kalyanaotsav/ ನಿಚ್ಚಲಮಕ್ಕಿಯ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಜ ೨೨ರಿಂದ ೨೬ರವರೆಗೆ ಧಾರ್ಮಿಕ ಮಹೋತ್ಸವ



