ಭಟ್ಕಳ (Bhatkal): ರಾಷ್ಟ್ರೀಯ ಹೆದ್ದಾರಿಗೆ (National Highway) ಹಾಕಿದ ಹಂಪ್ ಗಮನಿಸದೆ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ನಿಯಂತ್ರಣ ತಪ್ಪಿ ಬೈಕ್ ಸಮೇತ ಬಿದ್ದು (bike accident) ಗಾಯಗೊಂಡ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಶಿರಾಲಿ ಚೆಕ್ ಪೋಸ್ಟ್ ಸಮೀಪ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳ ಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ತಾಲೂಕಿನ ಮುಂಡಳ್ಳಿಯ ಜೋಗಿಮನೆ ನಿವಾಸಿ ರೂಪೇಶ ಗೋವಿಂದ ದೇವಾಡಿಗ ಮೃತ ದುರ್ದೈವಿ. ಶುಕ್ರವಾರ ಮಧ್ಯರಾತ್ರಿ ೧೨.೧೫ರ ಸುಮಾರಿಗೆ ಈ ಘಟನೆ ನಡೆದಿದೆ. ಹಿಂಬದಿ ಸವಾರ ಸುಬ್ರಾಯ ನಾರಾಯಣ ದೇವಾಡಿಗ ಎಂಬುವವರಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮುರ್ಡೇಶ್ವರ (Murdeshwar) ಕಡೆಯಿಂದ ಭಟ್ಕಳ ಕಡೆಗೆ ಬರುವಾಗ ಶಿರಾಲಿ ಚೆಕ್ ಪೋಸ್ಟ್ ಹತ್ತಿರ ಇರುವ ಹಂಪ್ ಗಮನಿಸದೆ ಒಮ್ಮೇಲೆ ಬ್ರೆಕ್ ಹಾಕಿದ್ದರಿಂದ ಬೈಕ್ ಸಮೇತ ಇಬ್ಬರೂ ಸವಾರರು ಬಿದ್ದಿದ್ದಾರೆ (bike accident). ಹಿಂಬದಿ ಸವಾರ ಸುಬ್ರಾಯ ದೇವಡಿಗರ ದವಡೆ ಹಾಗೂ ತುಟಿಗೆ ಗಾಯವಾಗಿದೆ. ಅಪಘಾತದಲ್ಲಿ ತಲೆಗೆ ಭಾರೀ ಗಾಯವಾದ ರೂಪೇಶ ದೇವಾಡಿಗರನ್ನು ಮಣಿಪಾಲ (Manipal) ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಶನಿವಾರ ನಸುಕಿನ ಜಾವ ೫.೪೦ರ ಸುಮಾರಿಗೆ ಕೊನೆಯುಸಿರು ಎಳೆದಿದ್ದಾರೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಹಿಂಬದಿ ಸವಾರ ಸುಬ್ರಾಯ ನಾರಾಯಣ ದೇವಾಡಿಗ ದೂರು (complaint) ದಾಖಲಿಸಿದ್ದಾರೆ.
ಇದನ್ನೂ ಓದಿ : Assembly/ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಮುರ್ಡೇಶ್ವರದಲ್ಲಿ ನಾಲ್ವರು ಮಕ್ಕಳ ಸಾವು