ಭಟ್ಕಳ: ತಾಲೂಕಿನಲ್ಲಿ ಯಾವುದೇ ಸಾರ್ವಜನಿಕ ಹಬ್ಬಗಳು ಬಂತೆಂದರೆ ಅದರ ಮುಂಜಾಗ್ರತಾ ಕ್ರಮವಾಗಿ ತಾಲೂಕು ಆಡಳಿತದಿಂದ ಶಾಂತಿ ಸಭೆ(Peace Meeting) ಅಥವಾ ಪೂರ್ವಭಾವಿ ಸಭೆ ನಡೆಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ತಾಲೂಕಾಡಳಿತದಿಂದ ಇಂತಹ ಸಭೆಗಳು ನಡೆಸಲಾಗುತ್ತಿದೆಯೋ ಅಥವಾ ಇಲ್ಲವೋ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚಿತಗೊಳ್ಳುತ್ತಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್‌ ಮಾಡಲು ಇಲ್ಲಿ ಒತ್ತಿ.

ಪ್ರತಿ ವರ್ಷ ಬರುವ ಭಟ್ಕಳ ಜಾತ್ರೆ, ಗಣೇಶೋತ್ಸವ, ರಂಜಾನ್ , ಬಕ್ರೀದ್, ಮಾರಿ ಹಬ್ಬ, ಹೋಳಿ ಈ ರೀತಿ ಅನೇಕ ಸಾರ್ವಜನಿಕವಾಗಿ ಆಚರಿಸುವ ಹಬ್ಬದ ಪೂರ್ವದಲ್ಲಿ  ಶಾಂತಿ ಸಭೆ(Peace Meeting) ನಡೆಸಲಾಗುತ್ತಿತ್ತು. ತಾಲೂಕಿನ ಎಲ್ಲಾ ಸಮುದಾಯದ ಮುಖಂಡರು ಹಾಗೂ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆದು ಹಬ್ಬದ ಮುಂಜಾಗ್ರತೆಗಳಿಗಾಗಿ ಯಾವ ಯಾವ ಕ್ರಮ ಕೈಗೊಳ್ಳಬೇಕು? ಇಲಾಖೆಗಳಿಂದ ಯಾವ ಯಾವ ಕೆಲಸ ಮಾಡಬೇಕು ಎಂದು ತಿಳಿದುಕೊಂಡ ಹಬ್ಬದ ಪೂರ್ವದಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ದಿನಗಲ್ಲಿ ಇಂತಹ ಸಭೆಗಳು ಇಲಾಖೆಯ ವತಿಯಿಂದ ಮಾಡಲಾಗುತ್ತಿದ್ದೆಯೋ ಇಲ್ಲಾವೋ ಎಂದು ಸಾರ್ವಜನಿಕರಿಗೆ ತಿಳಿಯದಂತಾಗಿದೆ.

ಇದನ್ನೂ ಓದಿ : ಚಿಂತೆ‌ ಬೇಡ, ಬೆಂಗಳೂರಿಗೆ ವಿಶೇಷ ರೈಲು ಸಂಚಾರ!

ಮೊದಲು ಇಂತಹ ಸಭೆಗಳು ನಡೆಯುವ ವೇಳೆ ಮಾಧ್ಯಮದವರನ್ನು ಸಭೆಗೆ ಆಹ್ವಾನಿಸಲಾಗುತ್ತಿತ್ತು. ಇದರಿಂದ ಸಭೆಯಲ್ಲಾಗುವ ಚರ್ಚಾ ವಿಷಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿ ಸಾರ್ವಜನಿಕರಿಗೆ ಮಾಹಿತಿ ದೊರೆಯುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಸಭೆಗಳು ನಡೆದರೆ ಮಾಧ್ಯಮದವರಿಗೆ ಆಹ್ವಾನ ನೀಡುತ್ತಿಲ್ಲ. ಅಥವಾ ಸಭೆಗಳು ನಡೆಯುತ್ತಿದೆಯೋ ಇಲ್ಲವೋ ಎಂದೂ ತಿಳಿಯದಂತಾಗಿದೆ.

ಇದನ್ನೂ ಓದಿ : ಅತಿ ವೇಗದಿಂದ ವಾಹನ ಚಲಾಯಿಸಿದರೆ ದಂಡ ಪಕ್ಕಾ!

ಶಾಂತಿ ಮಂತ್ರಕ್ಕೆ ಸೀಮಿತ ಸಭೆ

ಮೂಲಗಳ ಪ್ರಕಾರ, ಚನ್ನಪಟ್ಟಣ ಹನುಮಂತ ದೇವರ ಬ್ರಹ್ಮರಥೋತ್ಸವ ಹಿನ್ನೆಲೆ ಶಾಂತಿ ಸಭೆ ಕರೆಯಲಾಗಿತ್ತು. ಆ ನಂತರ ತಾಲೂಕಾಡಳಿತ ಯಾವುದೇ ಸಭೆ ನಡೆಸಿದ ಮಾಹಿತಿ ಇಲ್ಲ. ನಾಳೆಯೇ ಮಾರಿ ಜಾತ್ರೆ ನಡೆಯಲಿದ್ದು, ಈವರೆಗೆ ತಾಲೂಕಾಡಳಿತ ಸಭೆ ಕರೆದಿಲ್ಲ. ಹಬ್ಬ-ಹರಿದಿನಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತೆಗಾಗಿ ಗಂಟೆಗಟ್ಟಲೆ ನಡೆಯುತ್ತಿದ್ದ ಚರ್ಚೆ ಈಗ ನಡೆಯುತ್ತಿಲ್ಲ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಕೋಮು ಸೌಹಾರ್ದತೆಗೆ ಮನವಿ ಮಾಡಲಿಕ್ಕೆಂದೇ ಸಭೆ ಸೀಮಿತ ಅನ್ನುವಂತಾಗಿದೆ. ಕೋಮಿನ ಮುಖಂಡರನ್ನು ಕರೆಯಿಸಿ ಶಾಂತಿ ಮಂತ್ರ ಜಪಿಸಿ  ಸಭೆ ಮುಕ್ತಾಯಗೊಳಿಸಲಾಗುತ್ತಿದೆ. ಕೊನೇ ಪಕ್ಷ ಇದರ ಮಾಹಿತಿಯೂ ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ. ತಾಲೂಕಾಡಳಿತ ಸಭೆ ಕರೆಯದಿರುವುದರಿಂದ ಪೊಲೀಸ್‌ ಇಲಾಖೆ ಪ್ರತ್ಯೇಕವಾಗಿ ಶಾಂತಿ ಸಭೆ ನಡೆಸಿದೆ. ಎರಡೂ ಕೋಮಿನ ಮುಖಂಡರನ್ನು ಕರೆಯಿಸಿ ಕಾನೂನು ಸುವ್ಯವಸ್ಥೆಗಾಗಿ ಚರ್ಚೆ ನಡೆಸಿದೆ. ಜುಲೈ ೨೦ರಂದು ಸಭೆ ಕರೆದು ಶಾಂತಿ ಕಾಪಾಡುವಂತೆ  ಪೊಲೀಸ್‌ ಇಲಾಖೆ ಕರೆ ನೀಡಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ʼಭಟ್ಕಳ ಡೈರಿʼಗೆ ತಿಳಿಸಿದ್ದಾರೆ.

  • ಉದಯ ನಾಯ್ಕ, ಮಣ್ಕುಳಿ