ಭಟ್ಕಳ (Bhatkal) : ಕ್ರೇನ್‌ ಡಿಕ್ಕಿಯಾಗಿ (crane collision) ಪಾದಚಾರಿ ಮೃತಪಟ್ಟ ಘಟನೆ ಮುರ್ಡೇಶ್ವರ (Murdeshwar) ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮಾ.೪ರಂದು ಸಂಜೆ ೫.೪೫ರ ಸುಮಾರಿಗೆ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ಬಸ್ತಿ ಕಾಯ್ಕಿಣಿಯ ಎಣ್ಣೆಬೋಳೆ ನಿವಾಸಿ ಮಂಜಪ್ಪ ಶನಿಯಾರ ನಾಯ್ಕ (೮೦) ಮೃತ ವೃದ್ಧ. ಇವರು ಬಸ್ತಿ ರೈಲ್ವೆ ಸೇತುವೆ ಹತ್ತಿರ ದೇವಿಕಾನ್‌ ಕಡೆಯಿಂದ ಬಸ್ತಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ  ಕ್ರೇನ್‌ ಡಿಕ್ಕಿ ಹೊಡೆದಿದೆ (crane collision). ಹಿಂದಿನಿಂದ ಕ್ರೇನ್‌ ಡಿಕ್ಕಿ ಹೊಡೆದಿದ್ದು, ಎಡ ತೊಡೆಯಲ್ಲಿ ಭಾರೀ ಗಾಯಗೊಂಡ ಅವರಿಗೆ ಮುರ್ಡೇಶ್ವರ (Murudeshwar) ಆರ್‌.ಎನ್‌.ಎಸ್‌. ಆಸ್ಪತ್ರೆಗೆ (RNS Hospital) ತುರ್ತು ಚಿಕಿತ್ಸೆ ನೀಡಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ (Manipal) ಕಸ್ತೂರಬಾ ಆಸ್ಪತ್ರೆಗೆ (Kasturba Hospital) ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ರಾತ್ರಿ ೮.೨೦ರ ಸುಮಾರಿಗೆ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವ ಬಗ್ಗೆ ಖಾತ್ರಿ ಪಡಿಸಿದ್ದಾರೆ.

ಇದನ್ನೂ ಓದಿ : Imprisonment/ ಗಾಂಜಾ ನಂಟಿನ ಇಬ್ಬರಿಗೆ ಕಠಿಣ ಜೈಲು ಶಿಕ್ಷೆ

ಚಾಲಕ ಉತ್ತರಕೊಪ್ಪ ಕಡೆಯಿಂದ ಬಸ್ತಿ ಕಡೆಗೆ ದುಡುಕಿನಿಂದ ಮತ್ತು ನಿರ್ಲಕ್ಷ್ಯತನಿಂದ ಕ್ರೇನ್‌ ಚಲಾಯಿಸಿಕೊಂಡು ಬಂದು ಹಿಂಬದಿಯಿಂದ ಡಿಕ್ಕಿ ಹೊಡೆದಿರುವುದಾಗಿ ದೂರಲಾಗಿದೆ. ಕ್ರೇನ್‌ ಚಾಲಕ ಅಂಕೋಲಾ (Ankola) ತಾಲೂಕಿನ ವಡಗಾರ ನಿವಾಸಿ ಚಂದ್ರಹಾಸ ನಾರಾಯಣ ಮರಾಠಿ (೨೪) ವಿರುದ್ಧ ಎಣ್ಣೆಬೋಳೆ ನಿವಾಸಿ ಮಾಧವ ಜಟ್ಟ ನಾಯ್ಕ ಎಂಬುವವರು ದೂರು (Complaint) ದಾಖಲಿಸಿದ್ದಾರೆ.

ಇದನ್ನೂ ಓದಿ : Rotaract/ ರೋಟರಾಕ್ಟ್ ಬಹು ಜಿಲ್ಲಾ ಯುವ ವಿನಿಮಯ ಕಾರ್ಯಕ್ರಮ ಯಶಸ್ವಿ