ಭಟ್ಕಳ: ಮಾರ್ಚ್ ೫ರಿಂದ ೮ರ ತನಕ ಖೇಲೋ ಇಂಡಿಯಾ (Khelo India) ಅಸ್ಮಿತಾ ದಕ್ಷಿಣ ವಲಯ (south zone) ಕಿಕ್ ಬಾಕ್ಸಿಂಗ್ (kickboxing) ಸ್ಪರ್ಧೆಯು ಬೆಂಗಳೂರಿನ (Bengaluru) ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು. ಈ ಸ್ಪರ್ಧೆಯಲ್ಲಿ ದಕ್ಷಿಣ ರಾಜ್ಯಗಳಾದ ಕೇರಳ (Kerala) , ತಮಿಳುನಾಡು (Tamilnadu), ಒಡಿಶಾ (Orissa), ಪಾಂಡಿಚೇರಿ (Pondicherry), ಅಂಡಮಾನ್ ನಿಕೋಬಾರ್ (Andaman Nicobar), ಲಕ್ಷದ್ವೀಪ (Lakshadweep), ಆಂಧ್ರಪ್ರದೇಶ (Andhra Pradesh) ಮತ್ತು ಕರ್ನಾಟಕದ (Karnataka) ಉನ್ನತ ಮಹಿಳಾ ಕಿಕ್ ಬಾಕ್ಸರ್‌ಗಳು ಭಾಗವಹಿಸಿ, ತಮ್ಮ ಕೌಶಲ್ಯ ಮತ್ತು ದೃಢಸಂಕಲ್ಪವನ್ನು ಪ್ರದರ್ಶಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಖೇಲೋ ಇಂಡಿಯಾ (Khelo India) ಅಸ್ಮಿತಾ ಹೆಸರಿನಲ್ಲಿ ಮಹಿಳಾ ಕ್ರೀಡೆಗಳನ್ನು ಉತ್ತೇಜಿಸುವುದು ಮತ್ತು ಮಹಿಳಾ ಕ್ರೀಡಾಪಟುಗಳನ್ನು ಸಬಲೀಕರಣಗೊಳಿಸುವುದು, ಯುವ ಪ್ರತಿಭೆಗಳು ಮಿಂಚಲು ವೇದಿಕೆಯನ್ನು ಒದಗಿಸುವುದು ಈ ಪಂದ್ಯಾವಳಿಯ ಗುರಿಯಾಗಿದೆ. ಚಿನ್ನದ ಪದಕ ಪಡೆದ ವಿಜೇತರಿಗೆ ೮೦೦೦ ರೂ ಮತ್ತು ಬೆಳ್ಳಿಯ ಪದಕ ಪಡೆದ ವಿಜೇತರಿಗೆ ೬೦೦೦ ರೂ ಹಾಗೂ ಕಂಚಿನ ಪದಕ ಪಡೆದ ವಿಜೇತರಿಗೆ ೪೦೦೦ ರೂ ನಗದು ಬಹುಮಾನ ನೀಡಲಾಯಿತು. ಪದಕ ಪಡೆದ ವಿಜೇತ ಮಹಿಳಾ ಕ್ರೀಡಾಪಟುಗಳು ಚೆನ್ನೈನಲ್ಲಿ ನಡೆಯುವ ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಲೀಗ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.

Guruvandane/ ಗುರು-ಶಿಷ್ಯರ ಪುನರ್ಮಿಲನ: ಭಾವಪೂರ್ಣ ಗುರುವಂದನೆ

ಈ ಸ್ಪರ್ಧೆಯಲ್ಲಿ ಉತ್ತರ ಕನ್ನಡ (Uttara Kannada) ಜಿಲ್ಲಾ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ನ ಭಟ್ಕಳ (Bhatkal) ತಾಲೂಕಿನ ನಾಗಶ್ರೀ ಮಾರ್ಷಲ್ ಆರ್ಟ್ಸ್ ನ ಮಹಿಳಾಪಟುಗಳು ಭಾಗವಹಿಸಿ ಚಿನ್ನದ ಪದಕ ಮತ್ತು ಬೆಳ್ಳಿಯ ಪದಕ ಹಾಗೂ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ.

CA exam/ ಸಿಎ ಪರೀಕ್ಷೆಯಲ್ಲಿ ಸೋಡಿಗದ್ದೆ ಯುವತಿ ಉತ್ತೀರ್ಣ 

ಲಿಖಿತಾ ಶಂಕರ ನಾಯ್ಕ: ಜೂನಿಯರ್ ವಿಭಾಗದ -೪೫ ಕೆಜಿ ಪಾಯಿಂಟ್ ಫೈಟ್ ನಲ್ಲಿ ಚಿನ್ನದ ಪದಕ.

ಅಖಿಲಾ ಚಂದ್ರಕಾಂತ ನಾಯಕ: ಸೀನಿಯರ್ ವಿಭಾಗದ -೪೫ ಕೆಜಿ ಪಾಯಿಂಟ್ ಫೈಟ್ ನಲ್ಲಿ ಬೆಳ್ಳಿಯ ಪದಕ.

ಸಮೀಕ್ಷಾ ಮಾಸ್ತಿ ಗೊಂಡ: ಸಬ್ ಜೂನಿಯರ್ ವಿಭಾಗದ -೩೭ ಕೆಜಿ ಲೈಟ್ ಕಾಂಟ್ಯಾಕ್ಟ್ ನಲ್ಲಿ ಕಂಚಿನ ಪದಕ.

ಮನಾಲಿ ರಾಜು ನಾಯ್ಕ: ಜೂನಿಯರ್ ವಿಭಾಗದ -೪೨ ಕೆಜಿ ಲೈಟ್ ಕಾಂಟ್ಯಾಕ್ಟ್ ನಲ್ಲಿ ಕಂಚಿನ ಪದಕ.

ಆಶಿತಾ ಉದಯ ನಾಯ್ಕ: ಸಬ್ ಜೂನಿಯರ್ ವಿಭಾಗದ -೪೨ ಕೆಜಿ ಪಾಯಿಂಟ್ ಫೈಟ್ ನಲ್ಲಿ ೫ನೇ ಸ್ಥಾನ.

ಅಲ್ಲದೆ ತಂಡವು ಪಾಯಿಂಟ್ ಫೈಟ್ ಟೀಮ್ ವಿಭಾಗದಲ್ಲಿ ದ್ವಿತೀಯ. ನಾಗಶ್ರೀ ನಾಯ್ಕ ಈ ಸ್ಪರ್ಧೆಯಲ್ಲಿ ರೆಫರಿಯಾಗಿ ಕಾರ್ಯನಿರ್ವಹಿಸಿದರು.

bus overturn/ ಬಸ್ ಪಲ್ಟಿಯಲ್ಲಿ ಭಟ್ಕಳದ ಐವರು ಸಹಿತ ೨೦ಕ್ಕೂ ಹೆಚ್ಚು ಜನರಿಗೆ ಗಾಯ: ಗಾಯಾಳುಗಳ ವಿವರ ಇಲ್ಲಿದೆ…