ಭಟ್ಕಳ: ಹೊನ್ನಾವರ (Honnavar)ದಿಂದ ಮುರುಡೇಶ್ವರ (Murdeshwar) ಕಡೆಗೆ ಅತಿ ವೇಗವಾಗಿ ಬಂದ ಕ್ಯಾಂಟರ್ ವಾಹನ ರಾಷ್ಟ್ರೀಯ ಹೆದ್ದಾರಿಯ (National Highway) ಡಿವೈಡರ್ಗೆ ಬಡಿದು ನಂತರ ಟ್ರ‍್ಯಾಕ್ಟರ್ ಗೆ ಡಿಕ್ಕಿ ಹೊಡೆದ (Canter collision) ಪರಿಣಾಮ ಒಬ್ಬ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡ ಘಟನೆ ಬೈಲೂರು ಕ್ರಾಸ್ ಬಳಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕ್ಯಾಂಟರ್ ಚಾಲಕ, ಬೆಳಗಾವಿ(Belagavi)ಯ ಕಾಕತಿ ನಿವಾಸಿ ಶಂಕರ ತಂದೆ ಯಲ್ಲಪ್ಪ ಅಷ್ಟೇಕರ ವಿರುದ್ಧ ಮುರುಡೇಶ್ವರ (Murudeshwar) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದಿನಾಂಕ ೧೯-೨-೨೦೨೬ರಂದು ಸಂಜೆ ೩:೪೫ ಗಂಟೆಯ ಸುಮಾರಿಗೆ ಈ ಅಪಘಾತ ನಡೆದಿದೆ.

Murudeshwara/ ಮುರುಡೇಶ್ವರದಲ್ಲಿ ಇಬ್ಬರು ವಿದ್ಯಾರ್ಥಿಗಳ ಬಂಧನ 

ಚಾಲಕನ ಅತೀ ವೇಗ ಹಾಗೂ ಅಜಾಗರುಕತೆಯಿಂದ ಬಂದ ಕ್ಯಾಂಟರ್ ವಾಹನ ರಸ್ತೆಯ ಡಿವೈಡರ್ ಹತ್ತಿರ ಸ್ವಚ್ಚ ಮಾಡುವ ಕೆಲಸ ಮಾಡುತ್ತಿದ್ದ ಐ ಆರ್ ಬಿ (IRB) ಕಂಪನಿಯ (IRB) ಸಬ್ ಕಂಟ್ರಾಕ್ಟರ್ ಆದ ಧನಶ್ರೀ ಕನ್ಸ್ಟ್ರಕ್ಷನ್ ಕಂಪನಿಯಲ್ಲಿ ಕೂಲಿ ಕೆಲಸ ಮಾಡುವ ಮುಂಡಗೋಡ (Mundgod) ತಾಲೂಕಿನ ಚೌಡಳ್ಳಿಯ ಮೋಹನ ಅಲಿಯಾಸ ಮಣಿಕಂಠ ತಂದೆ ನಾಗರಾಜ ಶಿಂಧೆ ಎಂಬವರಿಗೆ ಡಿಕ್ಕಿ ಹೊಡೆದಿದೆ (Canter collision). ಡಿಕ್ಕಿಯ ರಭಸಕ್ಕೆ ಅವರು ಟ್ರ‍್ಯಾಕ್ಟರ್ ನ ಮಧ್ಯ ಭಾಗದಲ್ಲಿ ಬಿದ್ದು ಎರಡು ಕಾಲುಗಳಿಗೆ ಭಾರಿ ಗಾಯವಾಗಿತ್ತು. ಅವರನ್ನು ಉಡುಪಿ(Udupi)ಯ ಮಣಿಪಾಲ ಆಸ್ಪತ್ರೆ(Manipal hospital)ಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಫೆ ೨೦ರಂದು ಬೆಳಿಗ್ಗೆ ಮೃತಪಟ್ಟಿದ್ದಾರೆ.

Vardhanthi utsava/ ವಾಸುಕಿ ಸರ್ಪ ದೇವಸ್ಥಾನದ ವರ್ಧಂತ್ಯುತ್ಸವ, ಗುರುವಂದನೆ 

ಘಟನೆಯಲ್ಲಿ ಇನ್ನೊಬ್ಬ ಕೂಲಿ ಕಾರ್ಮಿಕ ಉತ್ತರ ಪ್ರದೇಶದ (Uttar Pradesh) ಗುಡ್ಡುಕುಮಾರ್ ತಂದೆ ಭಾವಿಲಾಲ್ (೩೫) ಗಾಯಗೊಂಡಿದ್ದಾರೆ. ಇದಲ್ಲದೆ ಕ್ಯಾಂಟರ್ ವಾಹನ ಟ್ರ್ಯಾಕ್ಟರ್ ನ ಹಿಂಬದಿಗೆ ಡಿಕ್ಕಿ ಹೊಡೆದಿದ್ದರಿಂದ ಟ್ರ್ಯಾಕ್ಟರ್ ಚಾಲಕನ ಎದೆಗೆ ಒಳನೋವು ಆಗಿದೆ. ಈ ಕುರಿತು ಗಾಯಾಳು ಗುಡ್ಡುಕುಮಾರ್ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Vardhanthi utsava/ ವಾಸುಕಿ ಸರ್ಪ ದೇವಸ್ಥಾನದ ವರ್ಧಂತ್ಯುತ್ಸವ, ಗುರುವಂದನೆ