ಭಟ್ಕಳ (Bhatkal) : ಇಲ್ಲಿನ ಸರ್ಕಾರಿ ಆಸ್ಪತ್ರೆಯ ರಸ್ತೆ (government hospital road) ಸಂಪೂರ್ಣ ಹದಗೆಟ್ಟ ಹಿನ್ನೆಲೆಯಲ್ಲಿ ವಾಹನ ಚಾಲಕರು ರಸ್ತೆ ಮಧ್ಯ ಟೈಯರ್ ಮತ್ತು ಗಿಡ ಇಟ್ಟು “ಗತಿ ಗೆಟ್ಟ ಸರ್ಕಾರಕ್ಕೆ ಧಿಕ್ಕಾರ” ಎಂದು ಸ್ಲೋಗನ್ ಅಂಟಿಸಿ ಸೋಮವಾರ ಆಕ್ರೋಶ (Outrage) ಹೊರಹಾಕಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಎಲ್ಲೆಂದರಲ್ಲಿ ಸಣ್ಣ ಸಣ್ಣ ಹೊಂಡಗಳು, ಕಿತ್ತು ಹೋಗಿರುವ ಡಾಂಬರ್, ಚದುರಿರುವ ಜಲ್ಲಿ ಕಲ್ಲುಗಳು, ಮಳೆ ಬಂದರೆ ಈಜುಕೊಳ ನೆನಪಿಸುವ ದೃಶ್ಯ.ಇದು ನಮ್ಮ ಭಟ್ಕಳ ಸರ್ಕಾರಿ ಆಸ್ಪತ್ರೆಯ ಸದ್ಯದ ಪರಿಸ್ಥಿತಿ. ಸದ್ಯ ಪರಿಸ್ಥಿತಿ ತೀರಾ ಹದಗೆಟ್ಟಿದೆ. ರಸ್ತೆಗಳ ಹೊಂಡ ತಪ್ಪಿಸಲು ಹೋಗಿ ದ್ವಿಚಕ್ರ ವಾಹನ ಸವಾರರು ಆಯತಪ್ಪಿ ಬೀಳುವುದು ಸರ್ವೆ ಸಾಮಾನ್ಯವಾಗಿದೆ. ರೋಗಿಗಳನ್ನು ಆಸ್ಪತ್ರೆಗೆ ಸಾಗಿಸುವಾಗ ಆಟೋ ಚಾಲಕ ಪರಿಸ್ಥಿತಿ ಹೇಳ ತೀರದಾಗಿದೆ.
ಇದನ್ನೂ ಓದಿ : ಮನೆಯಲ್ಲಿ ಒಬ್ಬರೇ ಇದ್ದ ಪ್ರಾಂಶುಪಾಲರ ಸಾವಿನಲ್ಲಿ ಶಂಕೆ
ಮಳೆಗಾಲದ ಸಂದರ್ಭದಲ್ಲೂ ವಾಹನ ಸವಾರರು ರಸ್ತೆ ಮೇಲೆ ಗಿಡ ನೆಟ್ಟು ಗಮನಸೆಳೆದಿದ್ದರು. ಮಳೆಗಾಲದ ಪೂರ್ವದಲ್ಲೂ ಪ್ರತಿಭಟನೆ ನಡೆದಿತ್ತು. ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರು. ಆದರೆ ಆಳುವ ಕಿವಿಗಳಿಗೆ ಮಾತ್ರ ಅವರ ಅಳಲು ಈವರೆಗೆ ಕೇಳಿಲ್ಲ. ರಸ್ತೆ ದುರಸ್ತಿ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ ಹಾಗೂ ಜನ ಪ್ರತಿನಿಧಿಗಳಿಗೆ ಮನವಿ ನೀಡಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : hospital road/ ಹದಗೆಟ್ಟ ಆಸ್ಪತ್ರೆ ರಸ್ತೆ; ತಪ್ಪದ ಗೋಳು
ಸೋಮವಾರ ಬೇಸತ್ತು ವಾಹನ ಚಾಲಕರು ರಸ್ತೆ ಮಧ್ಯ ವಾಹನ ಟೈಯರ್ ಇಟ್ಟು ಅದರ ಮೇಲೆ ಗಿಡ ಇಟ್ಟು “ಗತಿ ಗೆಟ್ಟ ಸರ್ಕಾರ ಕ್ಕೆ ಧಿಕ್ಕಾರ” ಎಂದು ಸ್ಲೋಗನ್ ಅಂಟಿಸಿ ತಮ್ಮ ಆಕ್ರೋಶ (Outrage) ಹೊರಹಾಕಿದ್ದಾರೆ. ಭಟ್ಕಳ ತಾಲೂಕಾ ಪಂಚಾಯತನಲ್ಲಿ ಇತ್ತೀಚೆಗೆ ನಡೆದ ಸಚಿವರ ಕೆ.ಡಿ.ಪಿ. ಸಭೆಯಲ್ಲಿ ಸರ್ಕಾರಿ ಆಸ್ಪತ್ರೆಯ ಬಗ್ಗೆ ಪತ್ರಕರ್ತರು ಪ್ರಶ್ನೆ ಕೇಳಿದ್ದರು. ಅದಕ್ಕೆ ಉತ್ತರಿಸಿದ ಸಚಿವ ಮಂಕಾಳ ವೈದ್ಯ (mankal vaidya) ಈಗಾಗಲೇ ಸರ್ಕಾರಕ್ಕೆ ಕಾಂಕ್ರೀಟ್ ರಸ್ತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದಿದ್ದರು.
ವಿಡಿಯೋ ಸಹಿತ ಇದನ್ನೂ ಓದಿ : ಸರಕಾರಿ ಆಸ್ಪತ್ರೆಗೆ ತೆರಳುವ ರಸ್ತೆಗೆ ಬೇಕಿದೆ ದುರಸ್ತಿ ಭಾಗ್ಯ